• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪತ್ರಿಕಾ ದಿನಾ‌ಚರಣೆ : ಲೇಖಕ ಜೋಗಿ ಜೊತೆ ಸಂವಾದ

By Mahesh
|
ಮಂಗಳೂರು, ಜೂ.28: ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಂಗಳೂರಿನ ಪ್ರೆಸ್ ಕ್ಲಬ್ ಸಂಯಕ್ತ ಆಶ್ರಯದಲ್ಲಿ ಜುಲೈ 2 ರಂದು ಪತ್ರಿಕಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಮಂಗಳೂರಿನ ಲೇಡಿಹಿಲ್ ಊರ್ವ ಮಾರ್ಕೆಟ್ ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಭ್ಯಾಗತರೊಂದಿಗೆ ಸಂವಾದ ಏರ್ಪಡಿಸಲಾಗಿದೆ.ಜಿಲ್ಲಾ ಪತ್ರಕರ್ತ ಸಂಘದ ಸದಸ್ಯರು ತೆಗೆದ ಛಾಯಾಚಿತ್ರಗಳ ಪ್ರದರ್ಶನ ಸಂಘದ ಕಾರ್ಯಾಲಯದಲ್ಲಿ ನಡೆಯಲಿದೆ. ಜುಲೈ 2 ರಿಂದ 4 ರವರೆಗೆ ಈ ಸುದ್ದಿ ಬಿಂಬ ಚಿತ್ರ ಪ್ರದರ್ಶನ ನಡೆಯಲಿದೆ.

ಕಾರ್ಯಕ್ರಮದ ವಿವರ:
ಉದ್ಘಾಟನೆ: ಡಾ. ವಸಂತ ಕುಮಾರ್ ಪೆರ್ಲ, ಮಂಗಳೂರು ಆಕಾಶವಾಣಿ, ಕಾರ್ಯಕ್ರಮದ ಮುಖ್ಯಸ್ಥರು
ಉಪನ್ಯಾಸ: ಜೋಗಿ (ಗಿರೀಶ್ ರಾವ್), ಸಾಹಿತಿ, ಅಂಕಣಕಾರ
ಅಧ್ಯಕ್ಷತೆ: ಪಿ.ಬಿ. ಹರೀಶ್ ರೈ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ

ಬ್ರೇಕಿಂಗ್ ನ್ಯೂಸ್ ನೀಡುವ ಮತ್ತು ಪೇಜ್ ತುಂಬಿಸುವ ಭರಾಟೆಯಲ್ಲಿ ಪತ್ರಕರ್ತರು ಪ್ರಸಕ್ತ ವಿದ್ಯಮಾನಗಳ ಅಧ್ಯಯನದಲ್ಲಿ ತೊಡಗುವುದು ಕಷ್ಟಕರ ಪರಿಸ್ಥಿತಿ ಇದೆ. ಈ ಹಿನ್ನಲೆಯಲ್ಲಿ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಚರ್ಚೆ, ಸಂವಾದಗಳನ್ನು ನಡೆಸಿ ಆ ಮೂಲಕ
ಸುದ್ದಿ ಮತ್ತು ಅಧ್ಯಯನಕ್ಕೆ ಪೂರಕ ವಾತಾವರಣ ಕಲ್ಪಿಸುವುದು ಅಧ್ಯಯನ ಕೇಂದ್ರ ಗುರಿ. ಕಳೆದ ಎರಡು ವರ್ಷದಲ್ಲಿ ಹಲವು ಕಾರ್ಯಕ್ರಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿಬಿ ಹರೀಶ್ ರೈ ಹೇಳಿದ್ದಾರೆ.

ಉಡುಪಿಯ ಬ್ರಹ್ಮಗಿರಿ ನಾಯರ್ ಕೆರೆ ಐಎಂಎ ಭವನದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಮದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಜುಲೈ 1 ರಂದು ನಡೆಯಲಿದೆ. ಆಶಾ ಕೃಷ್ಣಸ್ವಾಮಿ, ವಿಶೇಷ ವರದಿಗಾರರು, ಡೆಕ್ಕನ್ ಹೆರಾಲ್ಡ್, ಬೆಂಗಳೂರು
ಡಾ. ಬೋರಲಿಂಗಯ್ಯ ಎಂ.ಬಿ, ಐಪಿಎಸ್, ಪೊಲೀಸ್ ವರಿಷ್ಠಾಧಿಕಾರಿ, ಉಡುಪಿ ಹಾಗೂ ಎಸ್ ಕೆ ಶಾಮ ಸುಂದರ, ಸಂಪಾದಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಪತ್ರಕರ್ತ ಸುದ್ದಿಗಳುView All

English summary
Working Journallist association of Dakshina Kannada district has organised 'Journalism Day' on July 2, Monday at Press club Ladyhill, urva,Mangalore. Vasanth Kumar perla and Writor Jogi alias Girish Rao will preside over the function.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more