ಚೆನ್ನೈನಲ್ಲಿ ಪ್ಲೈ ಓವರ್ ನಿಂದ ಕೆಳಗೆ ಬಿದ್ದ ಬಸ್

GN Chetty ರಸ್ತೆಯತ್ತ ಬಸ್ಸನ್ನು ತಿರುಗಿಸುವಾಗ ಈ ಅಪಘಾತ ಸಂಭವಿಸಿದೆ. ಬಸ್ ಚಾಲಕ ಮೊಬೈಲಿನಲ್ಲಿ ಮಾತನಾಡುತ್ತಾ, ನಿರ್ಲಕ್ಷ್ಯ ತೋರಿದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.
Broadway ಯಿಂದ Vadapalani ನತ್ತ ಹೊರಟಿದ್ದ ಮಾರ್ಗ ಸಂಖ್ಯೆ M17 ಬಸ್ಸು ಪ್ಲೈ ಓವರ್ ನಿಂದ ಇಳಿಯುವಾಗ ತಲೆಕೆಳಗಾಗಿ ಕೆಳಗೆ ಬಿದ್ದಿದೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಧಡಾರನೆ ಭಾರಿ ಸದ್ದಿನೊಂದಿಗೆ ಬಸ್ಸು ಕೆಳಗೆ ಬೀಳುತ್ತಿದ್ದಂತೆ ಪ್ರಯಾಣಿಕರ ಆಕ್ರಂದನ, ಚೀರಾಟ ಮುಗಿಲುಮುಟ್ಟಿತು.
ಪೊಲೀಸರು ಮತ್ತು ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಆಗಮಿಸಿ, ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಸ್ಥಳೀಯ ಸರಕಾರಿ ಆಸ್ಪತ್ರೆ ಮತ್ತು ಅಪೊಲೊ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಅಣ್ಣಾ ಸಲೈ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಿದೆ.












Click it and Unblock the Notifications