ನಿನ್ನೆ ಸೆರೆ ಸಿಕ್ಕ ಉಗ್ರ ಮೋದಿ ಹತ್ಯೆಗೆ ಹವಣಿಸಿದ್ದ

ಮುಂಬೈ ದಾಳಿಯಿಂದ ಸುಧಾರಿಸಿಕೊಳ್ಳುವುದೇ ನಮಗೆ ಸಾಕಾಗಿತ್ತು. ಇನ್ನು ಅವ ಅದಕ್ಕಿಂತ ಭೀಬತ್ಸ ಭಯೋತ್ಪಾದಕ ಕೃತ್ಯಗಳನ್ನೆಸಗಲು ಯೋಜನೆಗಳನ್ನು ರೂಪಿಸಿದ್ದ ಎಂಬುದನ್ನು ಕೇಳಿಯೇ ಪೊಲೀಸರಿಗೆ ಬೆವರೊಡೆಯತೊಡಗಿದೆ.
ಅಬು ಜಿಂದಾಲ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಮುಂದಾಗಿದ್ದ. ಆದರೆ ಆ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದರು. ಅವನ ಹೆಸರು ನಮಗೆ ಪರಿಚಯವಾಗಿದ್ದೇ ಆಗ ಎಂದು ಪೊಲೀಸರು ತಿಳಿಸಿದ್ದಾರೆ. 2010ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಸ್ಫೋಟ ಪ್ರಕರಣದಲ್ಲೂ ಈತನ ಕೈವಾಡವಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಅಬು ಜಿಂದಾಲನನ್ನು ಬೆಂಗಳೂರಿಗೂ ಕರೆತರುವ ಸಾಧ್ಯತೆಯಿದೆ.
ಅಬು ಜಿಂದಾಲ್ ಮೊದಲು ಸಿಮಿ (Students Islamic Movement of India) ಸಂಘಟನೆಗೆ ಅಂಕಿತನಾದ. ಬಳಿಕ, ಇಂಡಿಯನ್ ಮುಜಾಹಿದ್ದೀನ್ (IM) ಆನಂತರ, ಪಾಕಿಸ್ತಾನದ ಲಷ್ಕರೆ ತೊಯಿಬಾ ಸಂಘಟನೆಗಳನ್ನು ಕೂಡಿಕೊಂಡ. ಗುಜರಾತ್ ನರಮೇಧದ ಬಳಿಕ ಅಬು ಜಿಂದಾಲ್ ಜಿಹಾದಿಯಾಗಿ ಪರಿವರ್ತಿತನಾದ ಎಂದು ತನಿಖೆಯಿಂದ ತಿಳಿದುಬಂದಿದೆ.
ಅಬು ಜಿಂದಾಲನನ್ನು ಇಂದಿರಾಗಾಂಧಿ ವಿಮಾನ ನಿಲ್ದಾನದಲ್ಲಿ ಜೂನ್ 21ರಂದೇ ಬಂಧಿಸಲಾಗಿದೆ. ವಾಸ್ತವವಾಗಿ, ತನ್ನ ವಿರುದ್ಧ Interpol Red Corner ನೋಟಿಸ್ ಜಾರಿಯಾಗಿದ್ದಾರೂ ಅವ ದುಬೈನಿಂದ ಭಾರತಕ್ಕೆ ಅದು ವಿಮಾನಯಾನದ ಮೂಲಕ ಬಂದಿದ್ದಾರೂ ಏಕೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ತನಿಖೆ ನಡೆಸಿದ ಪೊಲೀಸನವರಿಗೆ ಆಘಾತಕಾರಿ ಸಂಗತಿ ತಿಳಿದುಬಂದಿದೆ. ಅಬು ಜಿಂದಾಲ ಮುಂಬೈ ದಾಳಿ ಮಾದರಿಯಲ್ಲಿ ಮತ್ತೊಂದು ಭಯೋತ್ಪಾದಕ ಕೃತ್ಯವೆಸಗಲು ಭಾರತಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಲಷ್ಕರೆ ತೊಯಿಬಾ ಸಂಘಟನೆಯೇ ಅಬು ಜಿಂದಾಲನನ್ನು ಸೌದಿ ಅರೇಬಿಯಾಕ್ಕೆ ಅಟ್ಟಿತ್ತು. ಇನ್ನೊಂದು ವರ್ಷದಲ್ಲಿ 26/11 ಮಾದರಿಯ ಮತ್ತೊಂದು ದಾಳಿಗೆ ಹಂನ ಹೊಂದಿಸಲು ಅವನಿಗೆ ಆಜ್ಞಾಪಿಸಲಾಗಿತ್ತು. ಕಳೆದ ವರ್ಷ ಜಾಮಾ ಮಸೀದಿ ಸ್ಫೋಟ ನಡೆದಾಗಲೇ ದೆಹಲಿ ಪೊಲೀಸರಿಗೆ ಅಬು ಜಿಂದಾಲನ ಬಗ್ಗೆ ಮಾಹಿತಿ ಸಿಕ್ಕಿತ್ತು.












Click it and Unblock the Notifications