ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯಾನಂದ ಆರೋಪಕ್ಕೆ ಆರತಿ ರಾವ್ ಉತ್ತರ ಇಲ್ಲಿದೆ

By Srinath
|
Google Oneindia Kannada News

aarthi-denies-herpes-allegations-made-by-nithyananda
ಬೆಂಗಳೂರು, ಜೂನ್ 25: ವಿವಾದಿತ ನಿತ್ಯಾನಂದ ಸ್ವಾಮಿಯ ಮಾಜಿ ಶಿಷ್ಯೆ ಆರತಿ ರಾವ್ ಎಂಬುವವರು ಸುವರ್ಣ ನ್ಯೂಸ್ 24/7 ವಾಹಿನಿಯಲ್ಲಿ ಈ ತಿಂಗಳ ಆರಂಭದಲ್ಲಿ ತನ್ನ ಧಾರ್ಮಿಕ ಗುರುವಿನ ಚಾರಿತ್ರ್ಯವನ್ನು ಬಿಚ್ಚಿಡುತ್ತಿದ್ದಂತೆ ನಿತ್ಯಾನಂದ ಪ್ರಭುಗಳು ಜೂನ್ 7ರಂದು ಪತ್ರಿಕಾಗೋಷ್ಠಿ ಕರೆದು ದೊಡ್ಡ ರಾದ್ಧಾಂತಕ್ಕೆ ನಾಂದಿ ಹಾಡಿದರು. ಅಲ್ಲಿಂದ ಮುಂದಕ್ಕೆ ನಾಡಿನ ಮುಖ್ಯಮಂತ್ರಿಯಾದಿಯಾಗಿ ಸಮಸ್ತರೂ ತಮ್ಮ ಶಕ್ತ್ಯಾನುಸಾರ ಅನಿಸಿಕೆಗಳನ್ನು ಬಿಚ್ಚಿಟ್ಟರು.

ಈ ಮಧ್ಯೆ, ವಿವಾದದ ಕೇಂದ್ರ ಬಿಂದು ಬಿಡದಿ ಧ್ಯಾನಪೀಠಂ ಆಶ್ರಮದ ನಿತ್ಯಾನಂದ ಸ್ವಾಮಿಗಳು ತಮ್ಮ ವಿರುದ್ಧ ಆರತಿ ಅವರು ಸುವರ್ಣ ನ್ಯೂಸ್ 24/7 ವಾಹಿನಿಯಲ್ಲಿ ಮಾಡಿದ್ದ ಆರೋಪಕ್ಕೆ ಉತ್ತರಿಸುತ್ತಾ, ಆರತಿ ಬಗ್ಗೆ, ಖುದ್ದು ಆರತಿ ಅವರಿಗೂ ತಿಳಿಯದ ಕೆಲವು ಸಂಗತಿಗಳನ್ನು ಹೊರಹಾಕಿದ್ದರು. ಆಗ ಅನುಮಾನದ ಮುಳ್ಳು ಸಹಜವಾಗಿಯೇ ಆರತಿಯತ್ತ ನಿಧಾನವಾಗಿ ವಾಲಿತು.

ಇಷ್ಟೆಲ್ಲ ಆದ ಮೇಲೆ, ಆರತಿ ರಾವ್ ಅವರು ವಿವಾದಿತ ದೇವಮಾನವ ನಿತ್ಯಾನಂದ ಸ್ವಾಮಿ ತನ್ನ ವಿರುದ್ಧ ಹೊರಿಸಿದ ಆರೋಪಗಳಿಗೆ ಉತ್ತರ ನೀಡಿದ್ದಾರೆ. ಅಂದಹಾಗೆ, ಇಡೀ ಜಗತ್ತೇ ಆರತಿ ಉತ್ತರಕ್ಕಾಗಿ ಕಾಯುತ್ತಿತ್ತು. ವಿವಾದಕ್ಕೆ ಕಿಚ್ಚು ಹಚ್ವಿದ ಆರತಿ ಏನನ್ನುತ್ತಾರೆ? ಎಂಬುದನ್ನು ತಿಳಿಯುವ ಕುತೂಹಲ ನಾಡಿನ ಜನರದ್ದಾಗಿತ್ತು. ಆರತಿ ನೀಡಿರುವ ಉತ್ತರ ಹೀಗಿದೆ:

ಮೊಟ್ಟಮೊದಲನೆಯದಾಗಿ ಅಸಲಿಗೆ ನನಗೆ (ನಿತ್ಯಾನಂದ ಹೇಳುತ್ತಿರುವಂತೆ) ಹರ್ಪಿಸ್ಸು ಇಲ್ಲ ಯಾವುದೂ ಇಲ್ಲ. ನನ್ನ ಆರೋಗ್ಯ ಅತ್ಯಂತ ಸದೃಢವಾಗಿದೆ. ಯಾವುದೇ ವೈದ್ಯ ಪರೀಕ್ಷೆಗೆ ನಾನು ಸಿದ್ಧ.
ನನಗೆ ಹರ್ಪಿಸ್ 2 ಎಂಬ ಮಾರಣಾಂತಿಕ ಕಾಯಿಲೆಯಿದೆ ಎಂಬುದು ನಿತ್ಯಾ ನನ್ನ ಬಾಯಿಮುಚ್ಚಿಸಲು ರೂಪಿಸಿರುವ ಕುತಂತ್ರವಾಗಿದೆ.

ನಾನು ಸದ್ಯಕ್ಕೆ ಕೆಲವು ಕಾನೂನು ತೊಡಕುಗಳಲ್ಲಿ ಸಿಲುಕಿದ್ದು, ಅದು ಬಗೆಹರಿಯುತ್ತಿದ್ದಂತೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಸತ್ಯ ಏನೆಂಬುದನ್ನು ಮತ್ತೊಮ್ಮೆ ಹೇಳುತ್ತೇನೆ. ನಿತ್ಯಾನಂದನಿಂದ ನನಗೆ ಪ್ರಾಣ ಬೆದರಿಕೆಯಿದೆ. ಮನೆಯಿಂದ ಹೊರಬರುವುದು ಕೂಡ ಕಷ್ಟವಾಗಿದೆ. ನಿತ್ಯಾನಂದನ ವಿರುದ್ಧ ಯುದ್ಧ ಸಾರಿದ್ದೇನೆ. ನನ್ನ ಕೊನೆಯ ಉಸಿರಿನವರೆಗೂ ಆತನ ವಿರುದ್ಧ ಹೋರಾಡುತ್ತೇನೆ.

ಇಷ್ಟಕ್ಕೂ ಆರತಿ ಎದುರಿಸುತ್ತಿರುವ ಕಾನೂನು ತೊಡಕು ಏನು?:
2010ರಲ್ಲಿ ನಟಿ ರಂಜಿತಾ ಜತೆಗಿನ ರಾಸಲೀಲೆ ಪ್ರಕರಣ ಬಹಿರಂಗವಾಯಿತು. ಅದಾದ 15 ತಿಂಗಳ ತರುವಾಯ ರಾಸಲೀಲೆ ಸಿ.ಡಿ.ಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಾಗಿ ಆರತಿ ರಾವ್ ನನಗೆ ಬೆದರಿಸಿ, ಕೋಟಿಗಟ್ಟಲೆ ಹಣದ ಬೇಡಿಕೆಯಿಟ್ಟಿದ್ದಳು ಎಂದು ನಿತ್ಯಾನಂದ ಸ್ವಾಮಿ, ಆರತಿ ರಾವ್ ಮೇಲೆ ದೂರು ದಾಖಲಿಸಿದ್ದಾನೆ.

ಅಲ್ಲದೆ ಭಕ್ತೆಯ ಹೆಸರಿನಲ್ಲಿ ಆಶ್ರಮದಲ್ಲಿ ಕಲಿಸುವ ಯೋಗ, ಧ್ಯಾನಗಳನ್ನು ಕಲಿತು ಹೊರಜಗತ್ತಿನಲ್ಲಿ ಖಾಸಗಿ ಶಾಲೆಗಳನ್ನು ನಡೆಸಿ, ಹಣ ಗಳಿಸಿದ್ದಾಳೆ ಎಂದು ಚೆನ್ನೈನಲ್ಲಿ ನಿತ್ಯಾ ಕೇಸು ದಾಖಲಿಸಿದ್ದಾನೆ. ಈ ಪ್ರಕರಣದಲ್ಲಿ ಆರು ಆರೋಪಿಗಳಿಗೆ ಜಾಮೀನು ದೊರೆತಿದೆ. ಆರತಿ ರಾವ್ ಗೆ ಇನ್ನೂ ಜಾಮೀನು ದೊರೆತಿಲ್ಲ. ಆದ್ದರಿಂದ ವಕೀಲರ ಸಲಹೆಯ ಮೇರೆಗೆ ಆರತಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ.

English summary
Arthi Rao denies Harpis allegations made by Swamy Nithyananda. And she says she will be in front of public once she is free from legal tangle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X