ಕುವೈತ್‌ನಲ್ಲಿ ಸಮುದ್ರಪಾಲಾದ ಮಂಗಳೂರು ಯುವಕರು

ಕುವೈತ್, ಜೂ. 23 : ಈಜಾಡಲೆಂದು ಸಮುದ್ರಕ್ಕಿಳಿದಿದ್ದ ಇಬ್ಬರು ಮಂಗಳೂರಿನ ಯುವಕರು, ಬಲವಾದ ಅಲೆಯ ಹೊಡೆತಕ್ಕೆ ಸಿಲುಕಿ ಜಲಸಮಾಧಿಯಾಗಿರು ದುರ್ಘಟನೆ ಕುವೈತ್‌ನ ಫಹಾಹೀಲ್ ಬಳಿಯ ಮೆಹಾಬುಲ್ಲಾ ಸಮುದ್ರ ತೀರದಲ್ಲಿ ಜೂ.21ರಂದು ಸಂಜೆ 6.30ಕ್ಕೆ ಘಟಿಸಿದೆ.

Santosh Saliayan and Yogish Poojari

ಕಿನ್ನಿಗೋಳಿಯ ಸಂತೋಷ್ ಸಾಲಿಯಾನ್ (26) ಮತ್ತು ಕವೂರಿನ ಯೋಗಿಶ್ ಪೂಜಾರಿ (25) ಮೃತರಾಗಿರುವ ದುರ್ದೈವಿಗಳು. ಅವರಿಬ್ಬರ ಮೃತ ದೇಹಗಳು ಘಟನೆ ನಡೆದ ಕಡಲತೀರದಿಂದ 15 ಕಿ.ಮೀ. ದೂರದ ತೀರದಲ್ಲಿ ಜೂ.22ರಂದು ಶುಕ್ರವಾರ ಸಂಜೆ ದೊರೆತಿದೆ.

ಸಂತೋಷ್ ಸಾಲಿಯಾನ್, ಯೋಗಿಶ್ ಪೂಜಾರಿ ಮತ್ತಿತರ ಸ್ನೇಹಿತರು ಈಜಾಡಲೆಂದು ಸಮುದ್ರಕ್ಕೆ ಇಳಿದಿದ್ದರು. ಆದರೆ, ಕಡಲಿನ ಬಲವಾದ ಅಲೆಗಳು ಇಬ್ಬರನ್ನೂ ತನ್ನೆಡೆಗೆ ಸೆಳೆದುಕೊಂಡವು. ಜೊತೆಯಲ್ಲಿದ್ದ ಸ್ನೇಹಿತರು ಅವರನ್ನು ಪಾರು ಮಾಡಲು ನಡೆಸಿದ ಪ್ರಯತ್ನವೆಲ್ಲ ವಿಫಲವಾಗಿ, ಇಬ್ಬರನ್ನೂ ಸಮುದ್ರ ತನ್ನತ್ತ ಸೆಳೆದುಕೊಂಡುಬಿಟ್ಟಿತು.

ಕೂಡಲೆ ಅಗ್ನಿಶಾಮಕ ದಳ, ಪೊಲೀಸರು ಮತ್ತು ರಕ್ಷಣಾ ದಳದವರು ಘಟನಾ ಸ್ಥಳಕ್ಕೆ ಧಾವಿಸಿದರೂ ಪ್ರಯೋಜನವಾಗಲಿಲ್ಲ. ಸಾಕಷ್ಟು ಹುಡುಕಾಟ ನಡೆಸಿದರೂ ಅವರಿಬ್ಬರ ದೇಹಗಳು ಜೂ.21ರಂದು ದೊರೆಯಲಿಲ್ಲ. ಮರುದಿನ 15 ದೂರದಲ್ಲಿ ದೇಹಗಳು ದೊರೆತಿವೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+