ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂದಲು ಮಾರಿ 61 ಕೋಟಿ ರು ಲಾಭ: ಟಿಟಿಡಿ

By Mahesh
|
Google Oneindia Kannada News

Tirupati temple sells hair online, makes profit of Rs 61 cr
ತಿರುಮಲ, ಜೂ.22: ವಿಶ್ವದ ಅತ್ಯಂತ ಶ್ರೀಮಂತ ದೇವಸ್ಥಾನ ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಗೆ ಹರಕೆ ತೀರಿಸಿಕೊಳ್ಳಲು ಭಕ್ತರು ನೀಡಿದ ಮುಡಿಯಿಂದ ಟಿಟಿಡಿ ಭರ್ಜರಿ ಲಾಭ ಮಾಡಿದೆ. ಸುಮಾರು 89.41 ಟನ್ ಗಳಷ್ಟು ಮುಡಿ ಕೂದಲನ್ನು ಮಾರಾಟ ಮಾಡಿ ಸುಮಾರು 61 ಕೋಟಿ ರು ಲಾಭ ಮಾಡಿದೆ.

ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ನ ಜಂಟಿ ಕಾರ್ಯಕಾರಿ ಅಧಿಕಾರಿ ಕೆಎಸ್ ಶ್ರೀನಿವಾಸ ರಾಜು ಅವರ ನೇತೃತ್ವದಲ್ಲಿ ಕೂದಲಗಳನ್ನು ಬೇರ್ಪಡಿಸಲಾಯಿತು. ಕೂದಲಿನ ಆಕಾರ, ಬಣ್ಣ, ಉದ್ದ, ಶಕ್ತಿ ಆಧಾರದ ಮೇಲೆ ಇ ಹರಾಜು ಕರೆಯಲಾಯಿತು. ಸುಮಾರು 89,413 ಟನ್ ಕೂದಲು ಬಿಡ್ಡಿಂಗ್ ನಲ್ಲಿತ್ತು. ಬಿಡ್ಡಿಂಗ್ ನಿಂದ ಸುಮಾರು 2.11 ಲಕ್ಷ ರು ಗಳಿಸಲಾಗಿದೆ.

ಸುಮಾರು 16 ರಿಂದ 30 ಇಂಚು ಉದ್ದದ ಕೂದಲುಗಳು ಟಿಟಿಡಿಗೆ ಸುಮಾರು 53.54 ಕೋಟಿ ರು ಆದಾಯ ತಂದಿದೆ. 18,700 ರು ಪ್ರತಿ ಕಿಲೋ ನಂತೆ ಬಿಡ್ಡಿಂಗ್ ನಡೆಡಿತ್ತು.

ಸುಮಾರು 10 ರಿಂದ 15 ಇಂಚು ಉದ್ದದ ಕೂದಲುಗಳು 6.18 ಕೋಟಿ ರು ಆದಾಯ ತಂದುಕೊಟ್ಟಿದೆ. ಸುಮಾರು 5 ರಿಂದ 9 ಇಂಚು ಉದ್ದದ ಕೂದಲುಗಳು ಸುಮಾರು 93.57 ಲಕ್ಷ ರು ತಂದು ಕೊಟ್ಟಿದೆ.

5 ಸೆ.ಮೀಗೂ ಕಡಿಮೆ ಉದ್ದದ ಕೂದಲುಗಳ ಹರಾಜಿನಿಂದ 40 ಲಕ್ಷ ರು ಲಾಭ ಬಂದಿದೆ. ಕೆಂಚು ಕೂದಲುಗಳ ಹರಾಜು ಮಾಡಿ 65.18 ಲಕ್ಷ ರು ಗಳಿಸಲಾಗಿದೆ ಎಂದು ಟಿಟಿಡಿ ಪ್ರಕಟಣೆ ಹೇಳಿದೆ.

ಕಳೆದ ವರ್ಷ ತಿರುಮಲ ತಿರುಪತಿ ದೇವಸ್ಥಾನಂ(TTD) ಸಮಿತಿ ಅವರು ಮಾನವನ ಕೇಶವನ್ನು ಇ ಹರಾಜು ಹಾಕಿ ಸುಮಾರು 133 ಕೋಟಿ ರು ಗಳಿಸಿ, ಭರ್ಜರಿ ವ್ಯಾಪಾರ ಮಾಡಿದ್ದರು.

ಸುಮಾರು 65,000 ಕೆ.ಜಿಗೂ ಅಧಿಕ ಕೂದಲ ರಾಶಿ ಕೊಳ್ಳಲು ಸುಮಾರು 49ಕ್ಕೂ ಅಧಿಕ ವರ್ತಕರು ಹರಾಜು ಕೂಗಿದ್ದರು. ಪಾರದರ್ಶಕ ಹರಾಜು ಪ್ರಕ್ರಿಯೆಯಿಂದ ಸುಮಾರು 30 ಕೋಟಿ ರೂ. ಗೂ ಅಧಿಕ ಲಾಭವಾಗಿದೆ.

ಹಿಂದೂ ಧಾರ್ಮಿಕತೆಯಂತೆ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಡುವುದು(ಕೇಶ ಮುಂಡನ) ಬಹು ಜನಪ್ರಿಯ ಹರಕೆಯಾಗಿದೆ. ಹೀಗೆ ಭಕ್ತಾದಿಗಳ ಕೇಶ ಮುಂಡನ ನಂತರ ಸಂಗ್ರಹವಾದ ರಾಶಿ ರಾಶಿ ತಲೆ ಕೂದಲನ್ನು ಇದೇ ಮೊದಲ ಬಾರಿಗೆ ಇ ಹರಾಜು ಹಾಕಲಾಗಿದೆ.

ಹರಾಜಾಗುವ ಕೂದಲನ್ನು ಚೆನ್ನಾಗಿ ತೊಳೆದು, ಹಲವು ಬಾರಿ ಶುದ್ಧೀಕರಿಸಿ, ಬಿಸಿಲಲ್ಲಿ ಒಣಗಿಸಲಾಗುತ್ತೆ. ಮುಂದೆ ಇದೇ ಹರಕೆ ಕೂದಲು ವಿಗ್ ಗಳಲ್ಲಿ ಎಲ್ಲರ ಮುಡಿಯೇರುತ್ತದೆ.

ಕಳೆದ ವರ್ಷ ಸುಮಾರು 1 ಕೋಟಿ ರೂ ಅಧಿಕ ರೂ ಬೆಲೆ ಬಾಳುವ ಸುಮಾರು 160ಕ್ಕೂ ಅಧಿಕ ವಜ್ರ ತಿಮ್ಮಪ್ಪನ ಹುಂಡಿಯಲ್ಲಿ ಕಾಣಿಸಿತ್ತು.

ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ಜಗತ್ತಿನ ಶ್ರೀಮಂತ ದೇಗುಲಗಳಲ್ಲಿ ಒಂದಾಗಿದೆ. ವಾರ್ಷಿಕವಾಗಿ ಸುಮಾರು 700ಕೋಟಿ ರೂ.ಗೂ ಅಧಿಕ ಆದಾಯವನ್ನು ಈ ದೇಗುಲ ಹೊಂದಿದೆ.

English summary
The Tirumala Tirupati Devasthanams (TTD) marked an outstanding waku doki profit of Rs 61.72 crore after it sold human hair weighing 89.41 tonnes through an e-auction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X