ಹರಿಹರದ ಹರೀಶ್‌ಗೆ ತಕ್ಕಪಾಠ- ಸದಾನಂದ ಗೌಡ

ಸದಾ ಹಸನ್ಮುಖಿ ಅಲ್ಲ ವಿಕಟನಗೆ: 'ಬಿಪಿ' ಹರೀಶ್ ನಿನ್ನೆ (ಮಂಗಳವಾರ) ಸದಾನಂದ ಗೌಡರ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದರು - ಸದಾನಂದ ಗೌಡರು ವಿಶ್ವಾಸಘಾತುಕರು. ಸದಾ ಹಸನ್ಮುಖಿ ಎಂದು ಯಾರಾದರೂ ತಿಳಿದರೆ ಅವರು ಯಾಮಾರಿದ ಹಂಗೆ. ಅವರದು ಹಸನ್ಮುಖ ಅಲ್ಲ. ವಿಕಟ ನಗೆ. ನಗುನಗುತ್ತಲೇ ನಮ್ಮ ನಾಯಕ ಯಡಿಯೂರಪ್ಪ ಅವರನ್ನು ಸದಾನಂದ ಯಾಮಾರಿಸಿದ್ದಾರೆ - ಎಂದು ಬಿಪಿ ಹರೀಶ್ ಸದಾನಂದರ ವಿರುದ್ಧ ಎಗರಾಡಿದ್ದರು.
ಇದಕ್ಕೆ ಇಂದು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಇಂತಹ ಶಾಸಕರನ್ನು ತಾವು ಲೆಕ್ಕದಿಂದ ಹೊರಗಿಟ್ಟಿರುವುದಾಗಿ ಹೇಳಿದರು.
'ಅವರ (ಹರೀಶ್) ಮಾತಿನಲ್ಲಿಯೇ ಅವರ ನೈತಿಕತೆ ಏನೆಂಬುದು ತಿಳಿಯುತ್ತದೆ. ಶಾಸಕ ಹರೀಶ್‌ರ ಮಾತಿನಲ್ಲಿಯೇ ಇದಕ್ಕೆ ತಾನು ಉತ್ತರ ಕೊಡಬಹುದು. ಆದರೆ, ತಾನು ಆ ಮಟ್ಟಕ್ಕೆ ಇಳಿಯುವುದಿಲ್ಲ. ಇಂಥವರಿಗೆ ಜನತೆಯೇ ತಕ್ಕ ಪಾಠ ಕಲಿಸುತ್ತಾರೆ. ಶಾಸಕ ಹರೀಶ್ ತನ್ನ ವಿರುದ್ಧ ವಾಗ್ದಾಳಿ ನಡೆಸಿದ ವಿಷಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರ ಗಮನಕ್ಕೆ ತಂದಿದ್ದೇನೆ' ಎಂದು ತಿಳಿಸಿದರು.












Click it and Unblock the Notifications