ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ರೋನಾಲ್ಡೊ ಪಡೆ ಮೇಲೆ ಗೆದ್ದರೆ ಡಚ್ಚರು ನಾಕೌಟಿಗೆ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Portugal vs Holland preview
  ಖಾರ್ಕಿವ್, ಜೂ.17: ಗ್ರೂಪ್ ಆಫ್ ಡೆತ್ ಎನಿಸಿರುವ ಬಿ ಗುಂಪಿನಲ್ಲಿ ಈಗ ಲೆಕ್ಕಾಚಾರದ ಕಾಲ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಜರ್ಮನಿ ನಾಕೌಟ್ ಹಂತಕ್ಕೇರುವುದು ಖಾತ್ರಿಯಾಗಿದೆ. ಉಳಿದಂತೆ ಡೆನ್ಮಾರ್ಕ್, ಪೋರ್ಚುಗಲ್ ಹಾಗೂ ಹಾಲೆಂಡ್ ತಂಡಗಳು ಕೂಡಾ ರೇಸ್ ನಲ್ಲಿದೆ. ಭಾನುವಾರ ಮಧ್ಯರಾತ್ರಿ ನಂತರ ರೋನಾಲ್ಡೊ ಪಡೆಗೆ ಹಾಲೆಂಡ್ ತಂಡ ಭರ್ಜರಿ ಪೈಪೋಟಿ ನೀಡಲಿದೆ.

  ಇದೇ ಸಮಯಕ್ಕೆ ಎಲ್ ವಿವ್ ನಲ್ಲಿ ಜಮರ್ನಿ ತಂಡ ಅಂತಿಮ ಲೀಗ್ ಪಂದ್ಯದಲ್ಲಿ ಡೆನ್ಮಾರ್ಕ್ ತಂಡವನ್ನು ಎದುರಿಸಲಿದೆ. ಎರಡೂ ಪಂದ್ಯಗಳು ಕುತೂಹಲ ಕೆರಳಿಸಿದ್ದು, ಬಿ ಗುಂಪಿನಿಂದ ಹೊರ ಬೀಳುವ ಪ್ರಮುಖ ಎರಡು ತಂಡಗಳು ಯಾವುದು ಎಂದು ನಿರ್ಧಾರವಾಗಲಿದೆ.

  ಅಂಕಿ ಅಂಶ ಲೆಕ್ಕಾಚಾರ : ನೆದರ್ಲೆಂಡ್ ಗೆ ಯುರೋ 2012ನಲ್ಲಿ ಅದೃಷ್ಟ ಸರಿ ಇಲ್ಲ. ಪೋರ್ಚುಗಲ್ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಿಸುತ್ತಿದೆ. ಡೆನ್ಮಾರ್ಕ್ ವಿರುದ್ಧ ಜರ್ಮನಿ ಗೆದ್ದರೆ ಮಾತ್ರ ಹಾಲೆಂಡ್ ಗೆ ಲಾಭ.

  ಜಮರ್ನಿ ಮೇಲೆ ಡೆನ್ಮಾರ್ಕ್ ಗೆದ್ದರೂ, ಡ್ರಾ ಮಾಡಿಕೊಂಡರೂ, ಪೋರ್ಚುಗಲ್ ವಿರುದ್ಧ ಡ್ರಾ ಹಾಲೆಂಡ್ ಮಾಡಿಕೊಂಡರೂ ಟೂರ್ನಿಯಿಂದ ಹೊರಬೀಳುವುದು ಖಂಡಿತ.
  1980ರಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದಿದ್ದ ಹಾಲೆಂಡ್ ಈಗ ಮತ್ತೊಮ್ಮೆ ಅದೇ ಭಯದಲ್ಲಿದೆ. ಆಟಗಾರರ ದೈಹಿಕ ಸಾಮರ್ಥ್ಯದ ತೊಂದರೆ ವಾನ್ ಮಾರ್ವಿಜಿಕ್ ತಂಡಕ್ಕೆ ತಲೆ ನೋವಾಗಿದೆ.

  ಗಾಯಾಳು ರಾಬೆನ್ ಗೆ ಅವಕಾಶ ಕೊಟ್ಟಿದ್ದು ಕ್ಲಾಸ್ ಜಾನ್ ಹಂಟೆಲಾರ್ ಹಾಗೂ ರಾಫೆಲ್ ವಾ ಡರ್ ವಾರ್ಟ್ ಸಿಟ್ಟಿಗೇರಿಸಿದೆ. ಪೋರ್ಚುಗಲ್ ವಿರುದ್ಧ ಆರಂಭಿಕ XI ನಲ್ಲಿ ಸ್ಥಾನ ಸಿಗದಿದ್ದರೆ ಹಾಲೆಂಡ್ ಹಾದಿ ಕಷ್ಟಕರ. ಜರ್ಮನಿ ವಿರುದ್ಧದ ಪಂದ್ಯದಲ್ಲಿ ಆಟಗಾರನನ್ನು ಬದಲಿ ಮಾಡಿದ್ದಕ್ಕೆ ಸಿಟ್ಟಿಗೆಟ್ಟ ರಾಬೆನ್ ಅಡ್ವಸೈಟ್ ಮೆಂಟ್ ಬೋರ್ಡ್ ಹಾರಿ, ಡಗ್ ಔಟ್ ನಲ್ಲೂ ಯಾರೊಟ್ಟಿಗೂ ಮಾತಾಡದೆ ಕೋಪ ಮುಂದುವರೆಸಿದ್ದರು.

  ಅರ್ಹತಾ ಸುತ್ತಿನಲ್ಲಿ 37 ಗೋಲು ಸಿಡಿಸಿದ್ದ ಹಾಲೆಂಡ್, ಯುರೋ ಲೀಗ್ ನಲ್ಲಿ 45 ಯತ್ನಗಳ ನಂತರ ವಾನ್ ಪರ್ಸಿ ಹೊಡೆದಿಂದ ಮೊದಲ ಗೋಲು ಗಳಿಸಿದೆ. ರ್ವಾನ್ ಪರ್ಸಿ ಮೇಲೆ ಕೋಚ್ ವಾರ್ವಿಜಿಕ್ ಇಟ್ಟಿರುವ ವಿಶ್ವಾಸ ಅತಿಯಾಗಿದೆ ಎಂದು ಡಚ್ ಪತ್ರಿಕೆಗಳು ಟೀಕಿಸುತ್ತಿರುವಾಗ ವಾನ್ ಪರ್ಸಿ ಉತ್ತಮ ಪ್ರದರ್ಶನ ನೀಡಿರುವುದು ಆಯ್ಕೆ ಸಮಸ್ಯೆಯನ್ನು ಇನ್ನಷ್ಟು ಗೊಂದಲಕ್ಕೀಡು ಮಾಡಿದೆ.

  ಇಬ್ರಾಹಿಂ ಅಫ್ಲಾಯ್ ಬದಲಿಗೆ ಹಂಟೆಲಾರ್ ಆಡಿಸುವ ಸಾಧ್ಯತೆ ಇದೆಯಾದರೂ ಪೋರ್ಚುಗಲ್ ವಿರುದ್ಧದ ಆಡಿದ ತಂಡವನ್ನೇ ಮುಂದುವರೆಸುವ ಸಾಧ್ಯತೆಯಿದೆ. ಒಟ್ಟಾರೆ ಡಚ್ಚರಿಗೆ ಗೆಲುವು ಅನಿವಾರ್ಯವಾಗಿದೆ.

  ಪೋರ್ಚುಗಲ್ ಕೂಡಾ ಆತ್ಮವಿಶ್ವಾಸದ ಕೊರತೆ ಅನುಭವಿಸುತ್ತಿದೆ. ಡೆನ್ಮಾರ್ಕ್ ವಿರುದ್ಧ ಸಿಡಿದಿದ್ದ ಹೆಲ್ಡರ್ ಪೋಸ್ಟಿಗ ಮತ್ತೊಮ್ಮೆ ಪೋರ್ಚುಗಲ್ ಗೆ ಆಸರೆಯಾಗಬಹುದು. ನಾನಿ, ವರೆಲಾ, ಪೆಪೆ ಉತ್ತಮ ಲಯದಲ್ಲಿದ್ದಾರೆ. ಸ್ಟಾರ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೊ ಕ್ಲಬ್ ಪರ 60ಕ್ಕೂ ಹೆಚ್ಚು ಗೋಲು ಹೊಡೆದ ಸಾಧನೆ ಮೆರೆದಿದ್ದರೂ ದೇಶದ ಪರ ಆಡುವಾಗ ತಿಣುಕಾಡುತ್ತಿದ್ದಾರೆ.

  ನಾಯಕನಾಗಿ ಕೂಡಾ ರೋನಾಲ್ಡೊ ತಂಡವನ್ನು ಮುನ್ನೆಡಸಲು ಅಸಮರ್ಥರಾಗಿದ್ದಾರೆ. ಪೋರ್ಚುಗಲ್ ತಂಡದ ರಕ್ಷಣಾ ವ್ಯೂಹದಲ್ಲಿ ನಾಲ್ವರು ಆಟಗಾರರಿದ್ದರೂ ಡೆನ್ಮಾರ್ಕ್ ವಿರುದ್ಧ ತಿಣುಕಾಡಿತ್ತು. ಫೆರಾರಾ, ಅಲ್ವಾಸ್, ಪೆರಿರಾ ಕೊಯಾಂಟ್ರೊ ಹಾಲೆಂಡ್ ದಾಳಿಯನ್ನು ಎದುರಿಸಲು ಕಷ್ಟಪಡಬೇಕಾಗುತ್ತದೆ.

  ಡೆನ್ಮಾರ್ಕ್ vs ಜರ್ಮನಿ: ಡೇನಿಯಲ್ ಅಗ್ಗರ್ ತಂಡಕ್ಕೆ ಜರ್ಮನಿಯ ಅದ್ಭುತ ದಾಳಿಕೋರರನ್ನು ತಡೆಯುವುದು ಕಷ್ಟವಾಗಲಿದೆ. ಆದರು ಪೊಲ್ಸನ್, ಅಗ್ಗರ್ ಹೆಚ್ಚಿನ ಶ್ರಮ ವಹಿಸಿ ರಕ್ಷಣಾ ವ್ಯೂಹವನ್ನು ಹೆಣೆಯಬೇಕಿದೆ. ಡೆನ್ಮಾರ್ಕ್ ಮಿಡ್ ಫೀಲ್ಡ್ ಅಷ್ಟಾಗಿ ಬಲಿಷ್ಠವಾಗಿಲ್ಲ. ಮುಂಪಡೆಯಲ್ಲಿ ಕ್ರೋನ್ ಡೆಹ್ಲಿ, ರೊಮ್ಮಡೆಲ್, ಬೆಂಟ್ನರ್ ಉತ್ತಮ ಲಯದಲ್ಲಿದ್ದಾರೆ.

  ಜರ್ಮನಿಯ ನಾಯಕ ಲಾಮ್ ಅವರ ರಕ್ಷಣಾ ಪಡೆಗೆ ಸವಾಲು ಎಸೆಯಲು ಯಾವ ತಂಡಕ್ಕೂ ಇನ್ನೂ ಸಾಧ್ಯವಾಗಲಿಲ್ಲ. ಶ್ವೆಸ್ ಟೈಗರ್, ಮುಲ್ಲರ್, ಪೊಡೊಲ್ ಸ್ಕಿ, ಓಜಿಲ್, ಗೊಮೆಜ್, ಕ್ರೂಸ್, ಕ್ಲೋಸ್, ಖದಿರಾ ರಂಥ ಅದ್ಭುತ ಆಟಗಾರರನ್ನು ಹೊಂದಿರುವ ಜರ್ಮನಿ ಪಡೆ ಹೆಚ್ಚಿನ ಗೋಲು ಗಳಿಸುವ ಸಾಧ್ಯತೆಯಿದೆ. ಕ್ಲೋಸ್, ಕ್ರೂಸ್ ಆರಂಭಿಕ XI ರಲ್ಲಿ ಇಳಿಯಲು ಕಾದಿದ್ದಾರೆ. ಗೊಮೆಜ್ ಮೇಲಿರುವ ಒತ್ತಡವನ್ನು ಕಮ್ಮಿ ಮಾಡಿ ಮುಂದಿನ ಹಂತಕ್ಕೆ ಮತ್ತಿಬ್ಬರು ಸ್ಟ್ರೈಕರ್ ಗಳನ್ನು ತಯಾರಿ ಮಾಡಲು ಜರ್ಮನಿ ತಂಡ ಯೋಜಿಸಿದೆ. ಒಟ್ಟಾರೆ, ಡೆನ್ಮಾರ್ಕ್ ಮೇಲೆ ಜರ್ಮನಿ ಗೆಲುವು ತಪ್ಪಿಸಲು ಸಾಧ್ಯವಿಲ್ಲ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The statistics do not make pleasant reading for the Netherlands, who must beat Portugal by two goals here tomorrow and hope Germany overcome Denmark if they are to reach the Euro 2012 quarter-finals.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more