• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಲು ಕುಡಿಯುವ ಕೂಸಿನ ಮೇಲೆ ತಂದೆಯ ಅತ್ಯಾಚಾರ

|
ಬೆಂಗಳೂರು, ಜೂ 16: ಹಾಲು ಕುಡಿಯುವ ಹಸುಗೂಸಿನ ಮೇಲೆ ಜನ್ಮ ಕೊಟ್ಟ ತಂದೆಯೇ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಅತ್ಯಾಚಾರವೆಸಗಿದ ಪೈಶಾಚಿಕ ಮತ್ತು ಇಡೀ ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಕೃತ್ಯ ಬೆಳಕಿಗೆ ಬಂದಿದೆ. ಫ್ರೆಂಚ್ ರಾಯಭಾರಿ ಕಚೇರಿಯ ನೌಕರನಾಗಿದ್ದ ಪಾಸ್ಕಲ್ ಮಜೂರಿಯರ್ ಎನ್ನುವಾತನೇ ಇಂತಹ ಪೈಶಾಚಿಕ ಕೃತ್ಯವೆಸಗಿದ ಆರೋಪಿ.

ಮಗಳು ಎರಡು ವರ್ಷ ಹಸುಗೂಸು ಆಗಿದ್ದಾಗಿಂದಲೇ ಈತ ಇಂತಹ ಹೇಯ ಕೃತ್ಯ ನಡೆಸುತ್ತಿದ್ದನು. ತನ್ನ ಕರಳಕುಡಿಯ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ ತಪ್ಪಿಸಲು ಶತಾಯುಗತಾಯು ಪ್ರಯತ್ನಿಸಿ ವಿಫಲಳಾದ ತಾಯಿ ಕೊನೆಗೆ ಬೇರೆ ದಾರಿ ಇಲ್ಲದೆ ಪೋಲೀಸರ ಮೊರೆ ಹೋಗಿದ್ದಾರೆ.

ನಗರದ ಅರಮನೆ ಮೈದಾನದ ಸಮೀಪವಿರುವ ಫ್ರೆಂಚ್ ರಾಯಭಾರ ಕಚೇರಿಯಲ್ಲಿ ಮುಖ್ಯ ಜಂಟಿ ಛಾನ್ಸಿಲರ್ ಅಧಿಕಾರಿಯಾಗಿದ್ದ ಪಾಸ್ಕಲ್ ಪತ್ನಿ ನೀಡಿದ ದೂರಿನ ಅನ್ವಯ ಹೈಗ್ರೌಂಡ್ ಪೊಲೀಸರು ಈತನನ್ನು ತನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.

ಆರೋಪಿ ಪಾಸ್ಕಲ್ 2001ರಲ್ಲಿ ಮದುವೆಯಾಗಿದ್ದನು. ಕೇರಳದ ಎರ್ನಾಕುಲಂನಲ್ಲಿ ವಾಸವಾಗಿದ್ದ ವೇಳೆ 2005ರಲ್ಲಿ ದಂಪತಿಗಳಿಗೆ ಗಂಡು ಮಗು ಜನಿಸಿತ್ತು. 2008ರಲ್ಲಿ ಅಲ್ಲಿದ ಬೆಂಗಳೂರಿಗೆ ವರ್ಗಾವಣೆಯಾದ ನಂತರ ಆಗಸ್ಟ್ ನಲ್ಲಿ ಹೆಣ್ಣು ಮಗು ಜನ್ಮತಾಳಿತು. ಅದಾದ ನಂತರ ಮತ್ತೊಂದು ಮಗು ಹುಟ್ಟಿದ್ದು ಮೂರು ಮಕ್ಕಳೊಂದಿಗೆ ವಸಂತನಗರದ ಪೈನ್ ವ್ಯೂ ಅಪಾರ್ಟ್ಮೆಂಟ್ ನಲ್ಲಿ ಕುಟುಂಬ ವಾಸವಾಗಿದ್ದರು.

ಪಶುವಿನಂತೆ ವರ್ತಿಸುತ್ತಿದ್ದ ಈತ 2010ರಿಂದ ತನ್ನ ಮಗಳ ಮೇಲೆ ಅತ್ಯಾಚಾರವೆಸಗುತ್ತಿದ್ದ. ಮಗಳ ಮೇಲೆ ಹಲ್ಲೆ, ದೈಹಿಕ ಹಿಂಸೆ ನೀಡುತ್ತಿದ್ದ. ದಿನಗಳು ಕಳೆದಂತೆ ಮಗಳು ಮೂರು ವರ್ಷ 10 ತಿಂಗಳು ತುಂಬಿದ ಮಗಳಿಗೆ ಬುದ್ದಿ ಬಂದು ತಾಯಿಯೊಂದಿಗೆ ತನ್ನ ನೋವು ಹೇಳಿಕೊಳ್ಳುವುದಕ್ಕೆ ಮುಂದಾಗುತ್ತದೆ.

ಆ ವೇಳೆ ಪಾಸ್ಕಲ್ ವರ್ತನೆ ಮಿತಿಮೀರುತ್ತದೆ. 2012ರಲ್ಲಿ ಹಿಂಸೆಗೆ ಒಳಗಾಗಿದ್ದ ಹಸುಗೂಸು ನಿತ್ಯಕರ್ಮಕ್ಕೆ ಹೋಗಬೇಕಾದರೆ ನೋವು ಆಗುತ್ತದೆ ಎಂದು ತಾಯಿ ಬಳಿ ನೋವು ತೋರಿಕೊಂಡಿತ್ತು. ಏನೂ ಅರಿಯದ ಈ ಕಂದಮ್ಮ ತಂದೆ ಮಾಡುತ್ತಿದ್ದ ಕ್ರೌರ್ಯವನ್ನು ತಾಯಿಯ ಬಳಿ ಬಿಚ್ಚಿಟ್ಟಿತು.

ಕಳೆದ ಬುಧವಾರದಂದು (ಜೂನ್ 13) ವೈದ್ಯಕೀಯ ತಪಾಸಣೆಯ ವರದಿ ಪಡೆಯುವುದಕ್ಕಾಗಿ ಪತ್ನಿ ಮನೆಕೆಲಸದಾಕೆಯನ್ನು ಮಗಳ ಬಳಿ ಬಿಟ್ಟು ಹೋಗಿದ್ದಾಗ ಮನೆಗೆ ಬಂದ ಪಾಸ್ಕಲ್ ಮಗಳನ್ನು ರೂಮಿಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಂಡಿದ್ದನು. ಆ ವೇಳೆ ಕಂದಮ್ಮನ ಚೀರಾಟ ಕೇಳಿ ಬಂದಿದೆ. 15 ನಿಮಿಷದ ನಂತರ ಹೊರ ಬಂದು ಪಾಸ್ಕಲ್ ಕಚೇರಿಗೆ ತೆರಳಿದ್ದಾನೆ. ಮನೆಗೆ ಬಂದ ಪತ್ನಿ ಮಗಳು ಯಾಕೆ ಅಳುತ್ತಿದ್ದಾಳೆ ಎಂದು ಕೆಲಸದಾಕೆಯನ್ನು ಕೇಳಿದಾಗ ಅವಳು ನಡೆದ ಘಟನೆ ತಿಳಿಸಿದ್ದಾಳೆ.

ಇದರಿಂದ ನೊಂದ ತಾಯಿ ಮಗಳನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಆ ವೇಳೆ ವೈದ್ಯರು ಕಂದಮ್ಮನ ಮೇಲೆ ಅತ್ಯಾಚಾರ ನಡೆದಿರುವುದನ್ನು ದೃಢಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pascal Mazurier, a French diplomat, was held by the police here on charges of raping his three-and-half-year-old daughter. A deputy head of chancery in the Consulate of France here, the 39-year-old diplomat was let off on Friday under circumstances that are yet to be officially explained by the police.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more