• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನರೇಂದ್ರ ಮೋದಿ Twitterಗೆ ಅಭಿಮಾನಿಗಳ ಲಗ್ಗೆ

By Srinath
|

ಬೆಂಗಳೂರು, ಜೂನ್ 14: ದೇಶದ ಭಾವಿ ಪ್ರಧಾನಿ ಎಂದೇ ಪರಿಣಿತರಾಗಿರುವ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತೀರಾ ವೈಯಕ್ತಿಕ ಸಾಮರ್ಥ್ಯದಲ್ಲಿ ಬರೋಬ್ಬರಿ 7,00,000 ಮಂದಿ ಅಭಿಮಾನಿಗಳನ್ನು ಹೊಂದಿದ್ದಾರೆ. ಹೌದು ಬುಧವಾರದ ವೇಳೆಗೆ ಮೋದಿ ತಮ್ಮ Twitter ಖಾತೆಯಲ್ಲಿ ಹಿಂಬಾಲಕರ ಸಂಖ್ಯೆ 7 ಲಕ್ಷ ಗಡಿ ದಾಟಿ, ತಮ್ಮ ಜನಪ್ರಿಯತೆಯನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ.


ಹಾಗೆ ನೋಡಿದರೆ ಸಾಮಾಜಿಕ ಜಾಲ ತಾಣದಲ್ಲಿ ತುಂಬಾ ಸಕ್ರಿಯರಾಗಿರುವ ರಾಜಕಾರಣಿ ಅಂದರೆ ಇವರೊಬ್ಬರೇ. 2011ರ ನವೆಂಬ್ 11ರಂದು ಮೋದಿ ಅವರ ಟ್ವಿಟ್ಟರ್ ಹಿಂಬಾಲಕರ ಸಂಖ್ಯೆ 4 ಲಕ್ಷಗಡಿ ದಾಟಿತ್ತು. ಅದು 5 ಲಕ್ಷ ಗಡಿ ದಾಟಿದ್ದು 2012ರ ಮಾರ್ಚ್ 3ರಂದು. ಈ ಮಧ್ಯೆ, ಮೋದಿ ಅವರ ಟ್ವಿಟ್ಟರ್ ಪುಟ ಸಮಗ್ರರ ಬದಲಾವಣೆಯೊಂದಿಗೆ ಹೊಸ ಹೊಳಪು ಪಡೆಯಿತು.

ಖುದ್ದು ಮೋದಿ ಅವರೇ ಮೊದಲು ಆಯ್ದ ರಾಜಕಾರಣಿಗಳು, ನ್ಯೂಸ್ ವೆಬ್ ಸೈಟ್ ಗಳು ಮತ್ತು ಮುಖ್ಯವಾಗಿ ತಮ್ಮ ಶ್ರೇಯೋಭಿವೃದ್ಧಿ ಬಯಸುವವರು ಜಾಗೂ ಸ್ವಯಂಸೇವಕರನ್ನು ಹಿಂಬಾಲಿಸತೊಡಗಿದರು. ಇನ್ನು ಸ್ವಾಮಿ ವಿವೇಕಾನಂದರ 150ನೇ ಹುಟ್ಟುಹಬ್ಬದಂದು ವಿವೇಕಾನಂದರ ಆಣಿಮುತ್ತುಗಳನ್ನು ಟ್ವೀಟ್ ಮಾಡತೊಡಗಿದರು. ಇದ್ನು ವರ್ಷ ಪೂರ್ತಿ ಪರಿಪಾಲಿಸಿಕೊಂಡು ಬರಲು ನಿರ್ಧರಿಸಿದರು. ಅಂತರ್ಜಾಲ ಲೋಕದಲ್ಲಿ ಇದು ಯಶಸ್ವಿ ನಡೆಯೆನಿಸಿಕೊಂಡು, ಸಾಕಷ್ಟು ಜನ ಮೆಚ್ಚುಗೆ ಗಳಿಸಿತು.

2012 ಮೇ 1ರಂದು ಗುಜರಾತ್ ರಾಜ್ಯೋತ್ಸವದಂದು ಮೋದಿಯ ಟ್ವಿಟ್ಟರ್ ಎಕ್ಸ್ ಪ್ರೆಸ್ 6,00,000 ಗಡಿ ದಾಟಿ ಬುಲೆಟ್ ಟ್ರೈನ್ ವೇಗದಲ್ಲಿ ಚಲಿಸತೊಡಗಿತು. ಈಗ ಕೆಲವೇ ದಿನಗಳಲ್ಲಿ ಆ ಸಂಖ್ಯೆ ಮಾಂತ್ರಿಕ 7,00,000 ಗಡಿ ದಾಟಿದೆ.

ವಾಸ್ತವವಾಗಿ ರಾಜಕಾರಣಿಗಳಿಗೆ ಟ್ವಿಟ್ಟರ್ ಎಂಬುದು ಹೇಳಿ ಮಾಡಿಸಿದಂತಹ ಮಾಧ್ಯಮ. ಜತೆಗೆ ಆಪತ್ಭಾಂಧವನಾಗಿ ಅದು ರಾಜಕಾರಣಿಗಳ ಕೈಹಿಡಿಯುತ್ತದೆ. ಇಂದಿನ ಮಾಧ್ಯಮ ಪೈಪೋಟಿ ಯುಗದಲ್ಲಿ ಹಲವು ಬಾರಿ ರಾಜಕಾರಣಿಗಳ ಹೇಳಿಕೆಗಳು, ಅನಿಸಿಕೆಗಳು, ವಿವಾದಾತ್ಮಕ ಹೇಳಿಕೆಗಳು ಬೇರೆಯದೇ ಅರ್ಥ ಸ್ವರೂಪ ಪಡೆಯುವುದು ಹೆಚ್ಚಾಗಿದೆ.

ಅಂತಹ ಸಂದರ್ಭಗಳಲ್ಲಿ ಯಾವುದೇ ಗೊಡವೆಗೆ ಹೋಗದೆ ಸಂಬಂಧಪಟ್ಟ ವ್ಯಕ್ತಿ ತನ್ನ ಟ್ವಿಟ್ಟರ್ ಖಾತೆಯನ್ನು ತನ್ನ ಮಾತಿನ ಅರ್ಥವನ್ನು ವಿವರಿಸಿ, ಪೋಸ್ಟ್ ಮಾಡಿದರೆ ಮುಗಿಯಿತು. ದುಸರಾ ಮಾತೇ ಇಲ್ಲ. ಎಲ್ಲರೂ ಅದನ್ನು ಮಹಾಪ್ರಸಾದ (from horse's mouth) ಎಂದು ತೆಗೆದುಕೊಳ್ಳಲೇಬೇಕಾಗುತ್ತದೆ. ಸಂಬಂಧಪಟ್ಟ ರಾಜಕಾರಣಿಯೂ ಅಷ್ಟರಮಟ್ಟಿಗೆ safe!

newsletters: ಅದರಲ್ಲೂ ಮೋದಿ ಅಂತಹ ಜಾಣ ಜನನಾಯಕ ಬಾಳೆಹಣ್ಣು ಸುಲಿದಷ್ಟೇ ಸಲೀಸಾಗಿ, ಸುಲಲಿತವಾಗಿ, ವಿನೀತರಾಗಿ ತಮ್ಮ ಮನದ ಮಾತನ್ನು Twitterಲ್ಲಿ ದಾಖಲಿಸುತ್ತಾರೆ. ಅಷ್ಟೇ ಅಲ್ಲ ಇನ್ನೂ ಒಂದು ಹೆಜ್ಜೆ ಮುಂದು ಹೋಗಿರುವ ನಮೋ, weekly newsletters ಸಹ ಕಳುಹಿಸುತ್ತಿದ್ದಾರೆ.

ಈ newsletters ಎಂಬುದು ಅಂತರ್ಜಾಲ ಮಾಧ್ಯಮದಲ್ಲಿ ಮತ್ತೊಂದು ಪರಿಣಾಮಕಾರಿ tool. ದಟ್ಸ್ ಕನ್ನಡ ಸಹ ಇಂತಹ newsletter ಅನ್ನು ಅನುದಿನವೂ ಪೋಸ್ಟ್ ಮಾಡುತ್ತಿದ್ದು, ಪರಿಣಾಮಕಾರಿಯಾಗಿ ಓದುಗರನ್ನು ತಲುಪುತ್ತಿದೆ. ನೀವೂ ಉಚಿತವಾಗಿ ನಮ್ಮ ನ್ಯೂಸ್ ಲೆಟರ್ ಗೆ ಚಂದಾದಾರರಾಗಬಹುದು. ಇಲ್ಲಿ ಕ್ಲಿಕ್ ಮಾಡಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gujarat Chief Minister Narendra Modi's twitter account floods with 7 lakh followers as on June 12, 2012.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more