ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಗೂಢವಾಗಿರುವ ಶಂಕಿತ ಉಗ್ರ ಸಿದ್ದಿಕಿ ಕೊಲೆ

By Mahesh
|
Google Oneindia Kannada News

Terrorist
ನವದೆಹಲಿ, ಜೂ.11: ಬೆಂಗಳೂರು ಹಾಗೂ ಡೆಲ್ಲಿ ಬಾಂಬ್ ಸ್ಫೋಟದ ರುವಾರಿ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಶಂಕಿತ ಉಗ್ರ ಖತೀಲ್ ಸಿದ್ದಿಕಿ ಹತ್ಯೆ ಹಿಂದೆ ಡಾನ್ ಛೋಟಾ ಶಕೀಲ್ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಆದರೆ. ಪುಣೆ ಕಾರಾಗೃಹದಲ್ಲಿ ಸಿದ್ದಿಕಿ ಸಾಯಲು ಮಹಾರಾಷ್ಟ್ರ ಎಟಿಎಸ್ ಕಾರಣ ಎಂದು ಸಿದ್ದಿಕಿ ಸಂಬಂಧಿಕರು ಆರೋಪಿಸಿದ್ದಾರೆ. ದಾವೂದ್ ಇಬ್ರಾಹಿಂ ಅಣತಿಯಂತೆ ಈ ಕೃತ್ಯ ನಡೆದಿದೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಆದರೆ, ಮಹಾರಾಷ್ಟ್ರ ಎಟಿಎಸ್ ಊಹಾಪೋಹ ಸುದ್ದಿಯನ್ನು ತಳ್ಳಿಹಾಕಿದೆ.

ಡೆಲ್ಲಿ ಜಮಾ ಮಸೀದಿ ಸ್ಪೋಟಕ್ಕೆ ಸಂಬಂಧಿಸಿದಂತೆ ಖತೀಲ್ ಸಿದ್ದಿಕಿಯನ್ನು ಬಂಧಿಸಿದ ಮಹಾರಾಷ್ಟ್ರ ಎಟಿಎಸ್ ತಂಡ, ಆತನನ್ನು ದೇಶದ ಎಲ್ಲೆಡೆ ಓಡಾಡಿಸಿದರೂ, ಆದರೆ ಎಲ್ಲೂ ಸಾಕ್ಷಿ ಸಿಗಲಿಲ್ಲ. ಸಿದ್ದಿಕಿ ತಮ್ಮ ಕೈಯಿಂದ ತಪ್ಪಿ ಹೋಗುವ ಅನುಮಾನ ಕಾಡತೊಡಗಿದಾಗ ಈ ರೀತಿ ಕ್ರಮ ಕೈಗೊಂಡಿದ್ದಾರೆ ಎಂದು ಮೃತ ಶಂಕಿತ ಉಗ್ರ ಖತೀಲ್ ತಮ್ಮ ಶಕೀಲ್ ಆರೋಪ ಹೊರೆಸಿದ್ದಾರೆ.

ತನಿಖೆ ನಡೆಸುವಾಗ ಎಲ್ಲಾ ಕಡೆ ಹೆಲಿಕಾಪ್ಟರ್ ನಲ್ಲಿ ಆತನನ್ನು ಕರೆದೊಯ್ಯಲಾಗುತ್ತಿತ್ತು. ಈಗ ನೋಡಿದರೆ, ಆತನ ಮೃತ ದೇಹ ನೀಡಲು ಸತಾಯಿಸುತ್ತಿದ್ದಾರೆ. ಮಹಾರಾಷ್ಟ್ರ ಎಟಿಎಸ್ ಗೆ ನನ್ನ ದಿಕ್ಕಾರ ಎಂದು ಶಕೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಡಿಯನ್ ಮುಜಾಹಿದೀನ್ ನ ಮುಖ್ಯ ನಾಯಕ ಯಾಸಿನ್ ಭಟ್ಕಳನಿಗೆ ಖತೀಲ್ ಹತ್ತಿರನಾಗಿದ್ದ. ಅಲ್ಲದೆ ಇತ್ತೀಚೆಗೆ ಖತೀಲ್ ಸಂಪರ್ಕ ಕರಾಚಿ ಹಾಗೂ ದಾವದ್ ಇಬ್ರಾಹಿಂ ಕಡೆಗೆ ತಿರುಗಿತ್ತು. ಪುಣೆಯ ಶ್ರೀಮಂತ್ ದಗ್ರುಶೇತ್ ಹಾಲ್ವಾಯ್ ದೇಗುಲ ಸ್ಫೋಟಕ್ಕೆ ಖತೀಲ್ ಸಂಚು ಹಾಕಿದ್ದ ಇದೆಲ್ಲವೂ ರಾಜನ್ ಕೋಪಕ್ಕೆ ಕಾರಣವಾಗಿತ್ತು ಎಂದು ಶಂಕಿಸಲಾಗಿದೆ.

ಡೆಲ್ಲಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಕಳೆದ ನವೆಂಬರ್ ನಲ್ಲಿ ಸಿದ್ದಿಕಿಯನ್ನು ಬಂಧಿಸಲಾಗಿತ್ತು. ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಸೇರಿದ ಸಿದ್ದಿಕಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯಕ್ಕೂ ಮುನ್ನ ಸಂಭವಿಸಿದ ಬಾಂಬ್ ಸ್ಫೋಟದ ಪ್ರಮುಖ ರುವಾರಿಯಾಗಿದ್ದ.

ಇದಲ್ಲದೆ ಡೆಲ್ಲಿಯ ಜಾಮಾ ಮಸೀದಿಯ ಬಳಿ 2010ರಲ್ಲಿ ನಡೆದ ಬಾಂಬ್ ಸ್ಪೋಟದ ಹಿಂದಿನ ಕೈ ಕೂಡಾ ಸಿದ್ದಿಕಿಯಾಗಿದ್ದ. ಸಿದ್ದಿಕಿಯನ್ನು ಪುಣೆಯ ಯರವಾಡ ಜೈಲಿನಲ್ಲಿ ಮುಂಬೈ ಎಟಿಎಸ್ ತಂಡ ಇರಿಸಿತ್ತು.

ಪುಣೆಯ ದೇಗುಲಗಳಲ್ಲಿ 2010ರ ಫೆಬ್ರವರಿ ತಿಂಗಳಿನಲ್ಲಿ ಬಾಂಬ್ ಸ್ಫೋಟದ ಸಂಚು ರೂಪಿಸಿದ್ದ ಸಿದ್ದಕಿ ವಿಫಲನಾಗಿದ್ದ. ಅದರೆ, ಅದೇ ದಿನ ಪುಣೆಯ ಜರ್ಮನಿ ಬೇಕರಿ ಬಳಿ ಸ್ಫೋಟ ಸಂಭವಿಸಿ 17 ಜನ ಸಾವನ್ನಪ್ಪಿದ್ದರು.

English summary
A Delhi Police officer suspects the hand of underworld don Chhota Rajan in the alleged Indian Mujahideen (IM) terrorist Mohammad Qateel Siddiqui murder. Siddiqui's cousins blames on Maharashtra ATS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X