ತಾಳಿಕಟ್ಟಿಸಿಕೊಂಡು ಸೀದಾ ಪರೀಕ್ಷೆಗೆ ಕುಳಿತ ವಧು

bride-kalashree-skips-marriage-feast-writes-exam
ಶಿವಮೊಗ್ಗ, ಜೂನ್ 10: ನಗರದ ಕಮಲಾ ನೆಹರೂ ನ್ಯಾಷನಲ್ ಕಾಲೇಜಿಗೆ ಶುಕ್ರವಾರ ವಿಶೇಷ ಕಳೆಕಟ್ಟಿತ್ತು. ಪರೀಕ್ಷಾರ್ಥಿಗಳು ಎಂದಿನಂತೆ ಪರೀಕ್ಷೆ ಬರೆಯುವ ಆತಂಕದಲ್ಲಿದ್ದರೆ ಒಬ್ಬ ವಿದ್ಯಾರ್ಥಿನಿ ಮಾತ್ರ ಸಡಗರದಿಂದ ಬಂದು ಪರೀಕ್ಷೆ ಕುಳಿತರು. ಆದರೆ ಅವರು ಸಂಭ್ರಮಿಸಬೇಕಿದ್ದು ಮತ್ತು ಕುಳಿತುಕೊಳ್ಳಬೇಕಾಗಿದ್ದುದ್ದು ಮದುವೆ ಮಂಟಪದಲ್ಲಿ. ಏಕೆಂದರೆ ಆ ವಿದ್ಯಾರ್ಥಿನಿಯೇ ವಧು!

ಹೌದು ಇಂತಹ ಒಂದು ಸಾಹಸಕ್ಕೆ ಕೈಹಾಕಿದವರು ಕಲಾಶ್ರೀ ಎಂಬ ವಧು ಅಲ್ಲಲ್ಲ, ವಿದ್ಯಾರ್ಥಿನಿ! ಅತ್ತ ಕುತ್ತಿಗೆಗೆ ತಾಳಿ ಬಿಗಿಸಿಕೊಂಡಿದ್ದೇ ತಡ ಸೀದಾ ಪರೀಕ್ಷಾ ಕೇದ್ರಕ್ಕೆ ದೌಡಾಯಿಸಿದ ಕಲಾ, ತನ್ನದೇ ಮದುವೆಯ ಉಳಿದ ಶಾಸ್ತ್ರಗಳನ್ನು ಪೂರೈಸಿದ್ದು ಪರೀಕ್ಷೆ ಶಾಸ್ತ್ರ ಮುಗಿಸಿದ ಬಳಿಕವೇ. ಇದನ್ನು ಅಪರೂಪದ ಪರೀಕ್ಷೆ ಅನ್ನಬೇಕೋ ಅಥವಾ ಅಪರೂಪದ ಮದುವೆ ಅನ್ನಬೇಕೋ ನೀವೇ ಹೇಳಿ.

ಅಂದಹಾಗೆ ಈ ಧಾವಂತಕ್ಕೆ ಯಾಕಪ್ಪಾ ಸಿಕ್ಕಿಹಾಕಿಕೊಂಡರು ಅಂದರೆ Quantitative Techniques ವಿಷಯದ ಪರೀಕ್ಷೆ ಮೇ 31ಕ್ಕೇ ಮುಗಿಯಬೇಕಾಗಿತ್ತು. ಹಾಗೆಂದೇ ಕಲಾ-ವೆಂಕಟೇಶ್ ಅವರು ಪರೀಕ್ಷೆ ಮುಗಿದ ನಂತರ ಮದುವೆ ಬರೆದರಾಯಿತು ಅಂದ್ಕೊಂಡಿದ್ದರು. ಆದರೆ ಕೇಂದ್ರ ಸರಕಾರ ಸಿಕ್ಕಾಪಟ್ಟೆ ಪೆಟ್ರೋಲ್ ದರ ಏರಿಸಿದ್ದರಿಂದ ನೂತನ ದಂಪತಿ ಕೊಂಚ ಕಸಿವಿಸಿ ಅನುಭವಿಸುವಂತಾಯಿತು.

ಅಂದಹಾಗೆ, ಕಲಾ ಮದುವೆ ವೆಂಕಟೇಶ್ ಎಂಬ ವರನ ಜತೆ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಮದುವೆ ಏರ್ಪಾಡಾಗಿತ್ತು. ಮದುವೆ ಸಂಭ್ರಮದ ಮಧ್ಯೆ ಬಿಕಾಂ ಅಂತಿಮ ವರ್ಷದ Quantitative Techniques ವಿಷಯದ ಪರೀಕ್ಷೆಯನ್ನೂ ಕಲಾ ಬರೆದರು.

ಗಾಯತ್ರಿ ಮಂದಿರದಲ್ಲಿ ಅಗ್ನಿಸಾಕ್ಷಿಯಾಗಿ ಕಲಾಗೆ ತಾಳಿಕಟ್ಟಿದ ವೆಂಕಟೇಶ್ ಅವರೇ ಪತ್ನಿ ಕಲಾರನ್ನು ಬಿಕಾಂ ಅಗ್ನಿಪರೀಕ್ಷೆಗಾಗಿ ಆಕೆಯನ್ನು ಪರೀಕ್ಷಾ ಕೇಂದ್ರಕ್ಕೆ drop ಕೊಟ್ಟರು. ವರ ವೆಂಕಟೇಶ್ ಅವರು ಶಿಕಾರಿಪುರದಲ್ಲಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಲ್ಲಿ Assistant Executive Engineer ಆಗಿದ್ದಾರೆ.

ತನ್ನದೇ ಮದುವೆಯ ಊಟದ ಶಾಸ್ತ್ರವನ್ನೂ ಪೂರೈಸದೆ ಕಲಾ, ಧಾರೆ ಸೀರೆಯಲ್ಲೇ ಬಂದು ಪರೀಕ್ಷೆಗೆ ಕುಳಿತರು. ಇದನ್ನು ನೋಡಿದ ಮಂದಿ ಮೂಕವಿಸ್ಮಿತರಾದರು! ಕಲಾ ಅಕ್ಕಪಕ್ಕದಲ್ಲೇ ಕುಳಿತು ಪರೀಕ್ಷೆ ಬರೆಯುತ್ತಿದ್ದ ಕಲಾ ಸಹಪಾಠಿಗಳು, ಕಾಲೇಜಿನ ಸಿಬ್ಬಂದಿ ಆಕೆಗೆ ಎರಡೆರಡು ಬಾರಿ all the best ಹೇಳಿದರು. ಒಂದು ಚತುರ್ಭುಜರಾಗಿದ್ದಕ್ಕೆ ಮತ್ತೊಂದು ಬಿಕಾಂ ಪರೀಕ್ಷೆಗೆ ಕುಳಿತಿದ್ದಕ್ಕೆ. ಈಗ 'ದಟ್ಸ್ ಕನ್ನಡ'ಗೆ ಕಲಾ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುವಂತಾಗಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+