• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೆಡ್ಡಿ ಜಡ್ಜ್ ಪಟ್ಟಾಭಿ ವಿರುದ್ಧ FIR ದಾಖಲು; ಬಂಧನ?

By Srinath
|
ಹೈದರಾಬಾದ್, ಜೂನ್ 9: ಲಂಚ ತಿಂದು ಜನಾರ್ದನ ರೆಡ್ಡಿಗೆ ಜಾಮೀನು ಕರುಣಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಹೈಕೋರ್ಟ್ ಜಡ್ಜ್ ಪಟ್ಟಾಭಿ ರಾಮರಾವ್ ವಿರುದ್ಧ ತನಿಖೆ ನಡೆಸುವಂತೆ ರಾಜ್ಯ ಭ್ರಷ್ಟಾಚಾರ ವಿರೋಧಿ ಸಂಸ್ಥೆಗೆ (ACB) ಆದೇಶಿಸಿದೆ. ನ್ಯಾಯಾಂಗದಲ್ಲಿರುವವರನ್ನು ನೇರವಾಗಿ ಸಿಬಿಐ ತನಿಖೆಗೊಳಪಡಿಸುವಂತಿಲ್ಲ. ಆದ್ದರಿಂದ ಜಡ್ಜ್ ಪಟ್ಟಾಭಿ ವಿರುದ್ಧ ACB ನಡೆಸಲಿ ಆಂಧ್ರ ಹೈಕೋರ್ಟ್ ಹೇಳಿದೆ.

ಇದರಿಂದ ಜಡ್ಜ್ ಪಟ್ಟಾಭಿ ಮತ್ತು ಅಕ್ರಮ ಗಣಿವೀರ ಜನಾರ್ದನ ರೆಡ್ಡಿ ಮತ್ತಷ್ಟು ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆ. ರೆಡ್ಡಿ ವಿರುದ್ಧದ ಅಕ್ರಮ ಗಣಿ ಕುಣಿಕೆ ಇನ್ನಷ್ಟು ಬಿಗಿಯಾಗಿದ್ದರೆ ಜಡ್ಜ್ ಪಟ್ಟಾಭಿ ಕಥೆ ಅಯೋಮಯವಾಗಿದೆ. ಜಡ್ಜ್ ಪಟ್ಟಾಭಿ ವಿರುದ್ಧ FIR ದಾಖಲಿಸಿಕೊಂಡು ಅವರನ್ನು ಇಂದೇ (ಶನಿವಾರ) ACB ಬಂಧಿಸುವ ಸಾಧ್ಯತೆಯಿದೆ. ಪ್ರಕರಣದಲ್ಲಿ ಲಂಚ ತಿಂದು ರೆಡ್ಡಿಗೆ ಜಾಮೀನು ನೀಡಿದ್ದು ಸಾಬೀತಾದರೆ ರೆಡ್ಡಿ ಕಥೆ ಮುಗಿಯಿತು ಎಂದೇ ಕಾನೂನು ಪಂಡಿತರು ವಿಶ್ಲೇಷಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಡ್ಜ್ ಪಟ್ಟಾಭಿ ಕಡೆಯಿಂದ ವಶಪಡಿಸಿಕೊಂಡಿರುವ ಅಷ್ಟೂ ಸಾಕ್ಷ್ಯ, ದಾಖಲೆಗಳನ್ನು ಸಿಬಿಐ ACB ಹಸ್ತಾಂತರಿಸಿದೆ. ಮುಖ್ಯವಾಗಿ ಸಿಸಿಟಿವಿ ಕ್ಲಿಪಿಂಗ್ಸ್, ಮೊಬೈನ್ ಫೋನ್ ರೆಕಾರ್ಡಿಂಗ್, ಬ್ಯಾಂಕ್ ಲಾಕರಿನಿಂದ ವಶಪಡಿಸಿಕೊಂಡ ನಗದು ಮುಂತಾದ ಸಾಂದರ್ಭಿಕ ಸಾಕ್ಷ್ಯಗಳನ್ನು ಒದಗಿಸಿದೆ.

ಏನಿದು ಪ್ರಕರಣ: ಸಿಬಿಐ ವಿಶೇಷ ನ್ಯಾಯಾಲಾಯದ ನ್ಯಾಯಾಧೀಶ ಪಟ್ಟಾಭಿ ರಾಮರಾವ್ ಅವರು ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಗಾಲಿ ಜನಾರ್ದನ ರೆಡ್ಡಿ ಅವರಿಂದ ಲಂಚ ಸ್ವೀಕರಿಸಿ, ಕಳೆದ ಮೇ 11ರಂದು ಜಾಮೀನು ಭಾಗ್ಯ ಕರುಣಿಸಿದ್ದಾರೆ ಎಂದು ಸಿಬಿಐ ಆಂಧ್ರ ಹೈಕೊರ್ಟಿಗೆ ದೂರಿತ್ತು.

ಆರೋಪ ಮೇಲ್ನೋಟಕ್ಕೆ ಸಾಬೀತಾಗುತ್ತಿದ್ದಂತೆ ಆಂಧ್ರ ಹೈಕೋರ್ಟಿನ ಅಂದಿನ ಮುಖ್ಯ ನ್ಯಾಯಮೂರ್ತಿ (CJ) ಮದನ್‌ ಭೀಮರಾವ್‌ ಲೋಕೂರ್ (ಕರ್ನಾಟಕದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಲೋಕೂರಿನವರು. ಪ್ರಸ್ತುತ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ) ತಕ್ಷಣ ರೆಡ್ಡಿ ಜಡ್ಜ್ ಪಟ್ಟಾಭಿಯನ್ನು ಅಮಾನತು ಮಾಡಿದ್ದರು.

ಲಂಚ ಪಡೆದು ಆರೋಪಿಗೆ ಜಾಮೀನು ನೀಡಿದ ಆರೋಪದ ಮೇಲೆ ನ್ಯಾಯಾಧೀಶಯರನ್ನೇ ಅಮಾನತು ಮಾಡಿದ ಅಪರೂಪದ, ಆಘಾತಕಾರಿ ಪ್ರಕರಣ ಇದಾಗಿದ್ದರೆ ರೆಡ್ಡಿಯ ಗಣಿ ಅಕ್ರಮಗಳಿಗೆ ಹೊಸ ತಿರುವು ಸಿಕ್ಕಿತ್ತು.

AP civil services (CC

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Andhra Pradesh High court has ordered ACB investigation against the Special CBI Judge Pattabhi Rama Rao for alleged irregularities. He had granted bail to prime accused Gali Janardhana Reddy on May 11 in the case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more