ಶಂಕಿತ ಉಗ್ರ ಸಿದ್ದಿಕಿ ಪುಣೆ ಜೈಲಿನಲ್ಲೇ ಕೊಲೆ

ಶುಕ್ರವಾರ ಬೆಳಗ್ಗೆ ಪುಣೆ ಜೈಲಿನಲ್ಲಿದ್ದ ಪ್ರಮುಖ ಉಗ್ರನನ್ನು ಸಹ ಖೈದಿಗಳು ಕೊಂದಿದ್ದಾರೆ. ಡೆಲ್ಲಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಕಳೆದ ನವೆಂಬರ್ ನಲ್ಲಿ ಸಿದ್ದಿಕಿಯನ್ನು ಬಂಧಿಸಲಾಗಿತ್ತು. ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಸೇರಿದ ಸಿದ್ದಿಕಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯಕ್ಕೂ ಮುನ್ನ ಸಂಭವಿಸಿದ ಬಾಂಬ್ ಸ್ಫೋಟದ ಪ್ರಮುಖ ರುವಾರಿಯಾಗಿದ್ದ.
ಇದಲ್ಲದೆ ಡೆಲ್ಲಿಯ ಜಾಮಾ ಮಸೀದಿಯ ಬಳಿ 2010ರಲ್ಲಿ ನಡೆದ ಬಾಂಬ್ ಸ್ಪೋಟದ ಹಿಂದಿನ ಕೈ ಕೂಡಾ ಸಿದ್ದಿಕಿಯಾಗಿದ್ದ. ಸಿದ್ದಿಕಿಯನ್ನು ಪುಣೆಯ ಯರವಾಡ ಜೈಲಿನಲ್ಲಿ ಮುಂಬೈ ಎಟಿಎಸ್ ತಂಡ ಇರಿಸಿತ್ತು.
ಪುಣೆಯ ದೇಗುಲಗಳಲ್ಲಿ 2010ರ ಫೆಬ್ರವರಿ ತಿಂಗಳಿನಲ್ಲಿ ಬಾಂಬ್ ಸ್ಫೋಟದ ಸಂಚು ರೂಪಿಸಿದ್ದ ಸಿದ್ದಕಿ ವಿಫಲನಾಗಿದ್ದ. ಅದರೆ, ಅದೇ ದಿನ ಪುಣೆಯ ಜರ್ಮನಿ ಬೇಕರಿ ಬಳಿ ಸ್ಫೋಟ ಸಂಭವಿಸಿ 17 ಜನ ಸಾವನ್ನಪ್ಪಿದ್ದರು. ಮುಂಬೈ ಎಟಿಎಸ್ ತಂಡ ಪುಣೆಯ ಜೈಲಿಗೆ ಭೇಟಿ ನೀಡಲಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.












Click it and Unblock the Notifications