3 ಗ್ರಾಂ ಚಿನ್ನಕ್ಕಾಗಿ ಮಗುವನ್ನು ಕೊಂದ ದಂಪತಿ

Gold Stolen from Child Hyderabad
ಹೈದರಾಬಾದ್, ಜೂ.8: ಕೇವಲ 3 ಗ್ರಾಂ ಚಿನ್ನದ ಮೇಲೆ ಆಸೆಗೆ ಬಿದ್ದ ದಂಪತಿಗಳು, ನಾಲ್ಕು ವರ್ಷದ ಕೂಸನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಸರೂರ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸುಖೇಶ್ ಹಾಗೂ ಮಹಾಲಲಕ್ಷ್ಮಿ ಎಂ ಚಂಪಾಪೇಟ್ ನಿವಾಸಿಗಳ ಪುತ್ರಿಯಾದ ರಮ್ಯಾಶ್ರೀ ಮನೆ ಮುಂದೆ ಆಡುತ್ತಿದ್ದವಳು ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾಳೆ. ಮೆಕ್ಯಾನಿಕ್ ವೃತ್ತಿಯಲ್ಲಿ ಸುಖೇಶ್ ತಡ ಮಾಡದೆ ಪೊಲೀಸರಿಗೆ ವಿಷಯ ಮುಟ್ಟಿಸಿ, ಮಗು ಕಾಣೆಯಾಗಿದೆ ಹುಡುಕಿ ಕೊಡಿ ಎಂದಿದ್ದಾರೆ.

ವಿಚಾರಣೆ ಕೈಗೆತ್ತಿಕೊಂಡ ಸರೂರ್ ನಗರ ಪೊಲೀಸರಿಗೆ ಸುಖೇಶ್ ಅವರ ನೆರೆ ಮನೆಯವರ ಮೇಲೆ ಅನುಮಾನ ಬಂದಿದೆ. ಶ್ರೀಲಕ್ಷ್ಮಿ ಹಾಗೂ ರಾಜು ದಂಪತಿಗೆ ರಮ್ಯಾಶ್ರೀ ಕಿವಿಯಲ್ಲಿದ್ದ ಚಿನ್ನದ ರಿಂಗ್ ಕಣ್ಣುಕುಕ್ಕಿದೆ.

ಯಾರಿಗೂ ಗೊತ್ತಾಗದ ಹಾಗೆ ಮಗುವನ್ನು ಕಿಡ್ನಾಪ್ ಮಾಡಿ, ಆಕೆ ಕೊರಳನ್ನು ಕುಯ್ದು ಕಿವಿಯಲ್ಲಿದ್ದ ಆಭರಣವನ್ನು ಕಸಿದುಕೊಂಡ ದಂಪತಿಗಳು ಸರೂರ್ ನಗರದ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಲು ಯತ್ನಿಸುವಾಗ ಸಿಕ್ಕಿಬಿದ್ದಿದ್ದಾರೆ.

ಮಗುವಿನ ಶವವನ್ನು ಚೀಲವೊಂದರಲ್ಲಿ ತುಂಬಿ ತಲಾಬ್ ಕಟ್ಟದ ಬಳಿಯ ಮೋರಿಯೊಂದಕ್ಕೆ ಎಸೆಯಲಾಗಿದೆ. ದಂಪತಿಗಳು ತಪ್ಪೊಪ್ಪಿಗೆ ನೀಡಿದ್ದಾರೆ. ಮಗುವಿನ ಶವವನ್ನು ಮೋರಿಯಿಂದ ಹೊರಕ್ಕೆ ತೆಗೆಯಲಾಗಿದ್ದು,ಸುಖೇಶ್ ದಂಪತಿಗಳ ರೋದನ ಮುಗಿಲು ಮುಟ್ಟಿದೆ. ಓಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷ ನಡೆಸಲಾಗುತ್ತದೆ ಎಂದು ಸರೂರ್ ನಗರ ಇನ್ಸ್ ಪೆಕ್ಟರ್ ಎವಿಆರ್ ನರಸಿಂಹ ರಾವ್ ಹೇಳಿದ್ದಾರೆ.

ಈ ಪ್ರಕರಣ ಅಲ್ಲದೆ ಶ್ರೀಲಕ್ಷ್ಮಿ ಇನ್ನು ಕೆಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ದಂಪತಿಯ ಮೇಲೇ ಐಪಿಸಿ ಸೆಕ್ಷನ್ 302 ಅನ್ವಯ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಂಪತಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮೃತ ಬಾಲಕಿಯ ಕುಟುಂಬದವರು ಸರೂರ್ ನಗರ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+