ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಲ್ಮನೆ: ಎಂಆರ್ ಸೀತಾರಾಂ ಹೆಚ್ಚು ಸ್ಥಿತಿವಂತರು

By Srinath
|
Google Oneindia Kannada News

mlc-elections-congress-candidates-assets-declaration
ಬೆಂಗಳೂರು, ಜೂನ್ 5: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಇದೇ 11ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ 12 ಮಂದಿ ತಮ್ಮ ಆಸ್ತಿ ವಿವರಗಳನ್ನು ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷದ 4 ಅಭ್ಯರ್ಥಿಗಳಾದ ಎಂ.ಆರ್.ಸೀತಾರಾಂ, ಬಿ.ಎಸ್. ಸುರೇಶ್, ಮೋಟಮ್ಮ, ಕೆ.ಗೋವಿಂದರಾಜು, ಇಕ್ಬಾಲ್ ಅಹಮದ್ ಸರಡಗಿ ಅವರ ಆಸ್ತಿ ವಿವರ ಹೀಗಿದೆ:

ಎಂ.ಆರ್.ಸೀತಾರಾಂ: ನಾಮಪತ್ರ ಸಲ್ಲಿಸಿರುವ 12 ಮಂದಿ ಪೈಕಿ ಅತಿ ಶ್ರೀಮಂತ ಅಭ್ಯರ್ಥಿ ಅಂದರೆ ಕಾಂಗ್ರೆಸ್‌ನ ಎಂ.ಆರ್. ಸೀತಾರಾಂ. ರೂ 139.63 ಕೋಟಿ ಮೊತ್ತದ ಸ್ಥಿರ ಮತ್ತು ಚರಾಸ್ತಿ. ಆದರೆ, ಇವರ ಸಾಲ ಕೂಡ ಅತಿ ಹೆಚ್ಚು ಅಂದರೆ, ರೂ 47.94 ಕೋಟಿ ಇದೆ. ಎಂ.ಆರ್. ಸೀತಾರಾಂಗೆ ಪೈಪೋಟಿ ಒಡ್ಡಲಿರುವವರು ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿ.ಎಸ್. ಸುರೇಶ್.

ಬಿಎಸ್ಸಿ ಪದವೀಧರರಾದ ಸೀತಾರಾಂ ಒಟ್ಟು 3.12 ಕೋಟಿ ಮೊತ್ತದ ಚಿನ್ನ ಮತ್ತು ಡೈಮಂಡ್ ಹೊಂದಿದ್ದಾರೆ. ವಿವಿಧ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ 75.48 ಕೋಟಿ ರೂಪಾಯಿ ಮೊತ್ತದ ಬಾಂಡ್ ಮತ್ತು ಷೇರು ಖರೀದಿ. ಕೃಷಿ ಭೂಮಿ ಇಲ್ಲ. ಕೃಷಿಯೇತರ ಭೂಮಿಯ ಮೌಲ್ಯ 2.62 ಕೋಟಿ ರೂ. ವಾಣಿಜ್ಯ ಕಟ್ಟಡಗಳು 5.26 ಕೋಟಿ ರೂ. ವಸತಿ ಕಟ್ಟಡಗಳು 11.1 ಕೋಟಿ ರೂ.

ಸೀತಾರಾಂ ವಾಹನಗಳ ಒಟ್ಟು ಮೌಲ್ಯ 1.58 ಕೋಟಿ ರೂ. ಒಟ್ಟಾರೆ ವೈಯಕ್ತಿಕ ಚರಾಸ್ತಿ ರೂ 80.39 ಕೋಟಿ. ಅವರ ಅವಿಭಕ್ತ ಕುಟುಂಬದ ಚರಾಸ್ತಿಯ ಮೊತ್ತವೇ 4.67 ಕೋಟಿ ರೂ. ಪತ್ನಿ ಶ್ರುತಿ ಸೀತಾರಾಂ ಹೆಸರಿನಲ್ಲಿ ರೂ 57.93 ಲಕ್ಷ, ಪುತ್ರಿ ಎಂ.ಎಸ್. ರಕ್ಷಾ ಮತ್ತು ಪುತ್ರ ಎಂ.ಎಸ್. ಸುಂದರ್ ಹೆಸರಿನಲ್ಲಿ ಕ್ರಮವಾಗಿ ರೂ 26.94 ಲಕ್ಷ ಹಾಗೂ 41.92 ಲಕ್ಷ ರೂ. ಚರಾಸ್ತಿ ಇದೆ.

ಮೋಟಮ್ಮ: ಮರು ಆಯ್ಕೆ ಬಯಸಿರುವ ಮೋಟಮ್ಮ ಕುಟುಂಬದ ಘೋಷಿತ ಚರಾಸ್ತಿಯ ಒಟ್ಟು ಮೌಲ್ಯ ರೂ 1.55 ಕೋಟಿ. ರೂ 47.25 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ 1.80 ಲಕ್ಷ ಮೌಲ್ಯದ ಬೆಳ್ಳಿ, ಪತಿಯ ಬಳಿ ಇರುವ 70 ಗ್ರಾಂ ಚಿನ್ನದ ಮೌಲ್ಯವೂ ಇದರಲ್ಲಿ ಸೇರಿದೆ.

1.42 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಮೋಟಮ್ಮ ಅವರ ಕುಟುಂಬದ ಬಳಿ ಇದೆ. ಮೂಡಿಗೆರೆ ಹಾಗೂ ಬೆಂಗಳೂರಿನ ಆರ್‌ಎಂವಿ ಬಡಾವಣೆಯಲ್ಲಿರುವ ನಿವಾಸಗಳ ಮೌಲ್ಯವೂ ಇದರಲ್ಲಿ ಸೇರಿದೆ. ಹಾಗೆಯೇ 7,258 ರೂ ಸಾಲ ಇದೆ. ಎಂ.ಎ. ಪದವೀಧರೆ.

ಕೆ. ಗೋವಿಂದರಾಜು: ಗೋವಿಂದರಾಜು ಹಾಗೂ ಅವರ ಪತ್ನಿ ಹೆಸರಿನಲ್ಲಿ ಒಟ್ಟು 5.21 ಕೋಟಿ ರೂ ಮೊತ್ತದ ಸ್ಥಿರ ಹಾಗೂ ಚರಾಸ್ತಿ. ಇವರ ಹೆಸರಿನಲ್ಲಿ 10 ಲಕ್ಷ ಮತ್ತು ಪತ್ನಿ ಹೆಸರಿನಲ್ಲಿ ಆರು ಲಕ್ಷ ರೂ ಬ್ಯಾಂಕ್ ಸಾಲ ಇದೆ. ಚರಾಸ್ತಿಯ ಮೌಲ್ಯ ರೂ 2.39 ಕೋಟಿ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 34 ಲಕ್ಷ ರೂ ಮೊತ್ತದ ಕೃಷಿ ಜಮೀನು ಹೊಂದಿರುವುದಾಗಿ ಹೇಳಿರುವ ಅವರು ವೈಟ್‌ಫೀಲ್ಡ್‌ನ ಐಟಿಪಿಎಲ್‌ನಲ್ಲಿ 11,000 ಚ.ಅಡಿ ವಿಸ್ತೀರ್ಣದ ಕೃಷಿಯೇತರ ಭೂಮಿ ಇರುವುದಾಗಿ ಘೋಷಿಸಿದ್ದಾರೆ. 95 ಲಕ್ಷ ರೂ ಮೊತ್ತದ ವಸತಿ ಕಟ್ಟಡಗಳಿವೆ. ರಾಜು ಎಂ.ಎ. ಪದವೀಧರರು.

ಇಕ್ಬಾಲ್ ಅಹಮದ್ ಸರಡಗಿ: ಇಕ್ಬಾಲ್ ಹಾಗೂ ಅವರ ಪತ್ನಿ ಸಬಿಯಾ ಬೇಗಂ ಘೋಷಿತ ಚರಾಸ್ತಿ 4.75 ಲಕ್ಷ ರೂ. ಸರಡಗಿಯ ಟಾಟಾ ಇಂಡಿಕಾ, ಮಾರುತಿ ಎಸ್ಟೀಂ ಕಾರುಗಳೂ ಸೇರಿವೆ. ಸರಡಗಿ ಹಾಗೂ ಸಬಿಯಾ ಅವರ ಘೋಷಿತ ಸ್ಥಿರಾಸ್ತಿಯ ಮೌಲ್ಯ 18.32 ಲಕ್ಷ ರೂ. ಇವರು ಎಲ್‌ಎಲ್‌ಬಿ ಪದವೀಧರ.

English summary
Karnataka MLC Elections will be held on June 11. A total of 12 candidates are in the fray. The candidates have submitted assets declaration. The datails of Congress candidates assets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X