ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಲ್ಮನೆ: ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಆಸ್ತಿ ವಿವರ

By Srinath
|
Google Oneindia Kannada News

mlc-elections-bjp-jds-candidates-assets-declaration
ಬೆಂಗಳೂರು, ಜೂನ್ 5: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಇದೇ 11ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ 12 ಮಂದಿ ತಮ್ಮ ಆಸ್ತಿ ವಿವರಗಳನ್ನು ಘೋಷಿಸಿದ್ದಾರೆ. ಬಿಜೆಪಿಯ ಆರು ಅಭ್ಯರ್ಥಿಗಳಾದ ಬಿ.ಜೆ. ಪುಟ್ಟಸ್ವಾಮಿ, ವಿಮಲಾ ಗೌಡ, ಡಿ.ಎಸ್. ವೀರಯ್ಯ, ರಘುನಾಥರಾವ್ ಮಲ್ಕಾಪುರೆ, ಸೋಮಣ್ಣ ಬೇವಿನಮರದ, ಎಂ.ಬಿ. ಭಾನುಪ್ರಕಾಶ್ ಆಸ್ತಿ ವಿವರ ಇಲ್ಲಿ ನೀಡಲಾಗಿದೆ: ಜತೆಗೆ ಜೆಡಿಎಸ್ ಅಭ್ಯರ್ಥಿ ಸೈಯದ್ ಮುದೀರ್ ಆಗಾ ಮತ್ತು ಜೆಡಿ ಎಸ್ ಬೆಂಬಲಿತ ಪಕ್ಷೇತರ ಆಭ್ಯರ್ಥಿ ಭೈರತಿ ಸುರೇಶ್ ಅವರುಗಳ ಆಸ್ತಿ ವಿವರ ಇಂತಿದೆ.

ಬಿಜೆಪಿ ಅಭ್ಯರ್ಥಿಗಳ ಆಸ್ತಿ ವಿವರ
ಬಿ.ಜೆ. ಪುಟ್ಟಸ್ವಾಮಿ: ಡಿಪ್ಲೊಮಾ ವ್ಯಾಸಂಗ. 4.62 ಕೋಟಿ ರೂ ಮೊತ್ತದ ಸ್ಥಿರಾಸ್ತಿ. ಪುಟ್ಟಸ್ವಾಮಿ ಹೆಸರಿನಲ್ಲಿ 2.11 ಕೋಟಿ ರೂ, ಅವರ ಪತ್ನಿ ಹೆಸರಿನಲ್ಲಿ 2.51 ಕೋಟಿ ರೂ ಸ್ಥಿರಾಸ್ತಿ. ಶ್ರೀಗಂಧದ ಕಾವಲು ಸರ್ವೆ ನಂ 72ರಲ್ಲಿ 15.80 ಎಕರೆ ಕೃಷಿಯೇತರ ಭೂಮಿ ಇದೆ. ಇದರ ಖರೀದಿ ದರ 4 ಲಕ್ಷ ರೂ. 65.68 ಲಕ್ಷ ರೂ ಮೊತ್ತದ ಚಿನ್ನಾಭರಣ ಸೇರಿದಂತೆ ಚರಾಸ್ತಿ. ಪತ್ನಿ ಹೆಸರಿನಲ್ಲಿ ರೂ 10.87 ಲಕ್ಷ ಇದೆ.

ವಿಮಲಾ ಗೌಡ: ಬಿ.ಎ. ಪದವೀಧರರು. 1.5 ಕೋಟಿ ಮೊತ್ತದ ಚರಾಸ್ತಿ, 2.64 ಕೋಟಿ ಮೊತ್ತದ ಸ್ಥಿರಾಸ್ತಿ. ಎರಡು ಕೆ.ಜಿ ಚಿನ್ನ (ಈಗಿನ ಮೌಲ್ಯ 56 ಲಕ್ಷ) ಹಾಗೂ 66 ಸಾವಿರ ರೂ ಮೊತ್ತದ ಜಲ್ಲಿ ಕ್ರಷರ್ ಯಂತ್ರ, ಟಿಪ್ಪರ್, ಜೆಸಿಬಿ, ಇನ್ನೋವಾ ಹಾಗೂ ವೆರ್ನಾ ಕಾರು ಇವರ ಹೆಸರಿನಲ್ಲಿದೆ. ಯಾವುದೇ ಕೃಷಿ ಜಮೀನು ಇಲ್ಲ. ಜಿಗಣಿ ಸಮೀಪದ ಹರಪನಹಳ್ಳಿಯಲ್ಲಿ ಕೃಷಿಯೇತರ ಭೂಮಿ ಇದೆ. ಸುಮಾರು 4.5 ಲಕ್ಷ ಸಾಲ ಇದೆ.

ರಘುನಾಥರಾವ್ ಮಲ್ಕಾಪುರೆ: ರಘುನಾಥ ರಾವ್ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ. ಇವರ ಹಾಗೂ ಪತ್ನಿ ಹೆಸರಿನಲ್ಲಿ ಒಟ್ಟು 85 ಲಕ್ಷ ರೂ ಚರಾಸ್ತಿ ಹಾಗೂ 31.5 ಲಕ್ಷ ರೂ ಸ್ಥಿರಾಸ್ತಿ. ಬೀದರ್ ತಾಲ್ಲೂಕಿನ ಹಮಲಾಪುರದಲ್ಲಿ 5.15 ಎಕರೆ ಕೃಷಿ ಭೂಮಿ ಇದೆ. ಬೀದರ್‌ನಲ್ಲಿ ಕೃಷಿಯೇತರ ಭೂಮಿಯೂ ಇದೆ.

ಸೋಮಣ್ಣ ಬೇವಿನಮರದ: ಪಿಯುಸಿವರೆಗೆ ವ್ಯಾಸಂಗ. ಒಟ್ಟು 40 ಲಕ್ಷ ರೂ ಚರಾಸ್ತಿ ಹಾಗೂ 1.5 ಕೋಟಿ ರೂ ಮೊತ್ತದ ಸ್ಥಿರಾಸ್ತಿ ಇದೆ. ಇವರ ಹೆಸರಿನಲ್ಲಿ 71.98 ಲಕ್ಷ ರೂ ಹಾಗೂ ಪತ್ನಿ ಹೆಸರಿನಲ್ಲಿ 8.67 ಲಕ್ಷ ರೂ ಸಾಲ ಇದೆ.

ಎಂ.ಬಿ. ಭಾನುಪ್ರಕಾಶ್: ಬಿ.ಕಾಂ ಪದವೀಧರರು. ಸುಮಾರು 50 ಲಕ್ಷ ರೂ ಮೊತ್ತದ ಚರಾಸ್ತಿ ಹಾಗೂ 38.83 ಲಕ್ಷ ರೂ ಮೊತ್ತದ ಸ್ಥಿರಾಸ್ತಿ ಇದೆ. ಕೃಷಿಕರಾದ ಇವರು 25.90 ಲಕ್ಷ ರೂ ಸಾಲ ಪಡೆದಿದ್ದಾರೆ. ಡಿ.ಎಸ್. ವೀರಯ್ಯ: ಎಂ.ಕಾಂ, ಎಲ್‌ಎಲ್‌ಬಿ ಪದವೀಧರ. ಅವರ ಕುಟುಂಬದ ಘೋಷಿತ ಚರಾಸ್ತಿ ಮೌಲ್ಯ 76.99 ಲಕ್ಷ ರೂ. ಸ್ಥಿರಾಸ್ತಿಯ ಮೌಲ್ಯ 4 .58 ಕೋಟಿ ರೂ. 84.99 ಲಕ್ಷ ರೂ ಸಾಲ.

ಜೆಡಿಎಸ್ ಅಭ್ಯರ್ಥಿ ಆಸ್ತಿ ಮೌಲ್ಯ
ಸೈಯದ್ ಮುದೀರ್ ಆಗಾ: ಐಟಿಐ ಡಿಪ್ಲೊಮಾ ಪದವೀಧರ. ಕುಟುಂಬದ ಚರಾಸ್ತಿ ಒಟ್ಟು ಮೌಲ್ಯ 5.84 ಕೋಟಿ ರೂ. ಆಗಾ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಅಲ್ ಅಮೀನ್ ಸಹಕಾರಿ ಸಂಘಗಳಲ್ಲಿ 4.99 ಕೋಟಿ ರೂ ಹೂಡಿಕೆ, 60 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳು ಇವೆ. ಇವರ ಘೋಷಿತ ಸ್ಥಿರಾಸ್ತಿಯ ಒಟ್ಟು ಮೊತ್ತ 20.68 ಕೋಟಿ ರೂ.

ಬಿ.ಎಸ್. ಸುರೇಶ್: ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಭೈರತಿ ಸುರೇಶ್ ಅವರ ಘೋಷಿತ ಚರಾಸ್ತಿ ಮೌಲ್ಯ 1.36 ಕೋಟಿ ರೂ. ಪತ್ನಿಯ ಹೆಸರಿನಲ್ಲಿರುವ ಆಸ್ತಿ ಸೇರಿಸಿದರೆ, ಕುಟುಂಬದ ಚರಾಸ್ತಿ ಮೌಲ್ಯ 2.57 ಕೋಟಿ ರೂ. ಸುರೇಶ್ ಹಾಗೂ ಅವರ ಪತ್ನಿಯ ಘೋಷಿತ ಸ್ಥಿರಾಸ್ತಿಯ ಮಾರುಕಟ್ಟೆ ಮೌಲ್ಯ ಬರೋಬ್ಬರಿ 87.11 ಕೋಟಿ ರೂ!

ಸುರೇಶ್ 7.91 ಲಕ್ಷ ರೂ ಮೌಲ್ಯದ ಹುಂಡೈ ವೆರ್ನಾ, 61.91 ಲಕ್ಷ ಜಾಗ್ವಾರ್ ಹಾಗೂ 6.55 ಲಕ್ಷದ ಐ20 ಕಾರುಗಳ ಮಾಲೀಕರು. ಪತ್ನಿಯ ಮಾಲೀಕತ್ವದಲ್ಲಿ 72.69 ಲಕ್ಷದ ಆಡಿ, 20 ಲಕ್ಷದ ಪ್ರಾಡೊ ಕಾರುಗಳಿವೆ. ಇವಲ್ಲದೆ, ಪಿತ್ರಾರ್ಜಿತವಾಗಿ ಬಂದ 2.12 ಕೆಜಿ ಚಿನ್ನ, 50 ಕೆಜಿ ಬೆಳ್ಳಿ ಇದೆ. ಪತ್ನಿ ಬಳಿಯೂ ಪಿತ್ರಾರ್ಜಿತವಾಗಿ ಬಂದ 1.5 ಕೆಜಿ ಚಿನ್ನ ಹಾಗೂ 10 ಕೆಜಿ ಬೆಳ್ಳಿ ಇದೆ. ತಮ್ಮ ಹಾಗೂ ಪತ್ನಿಯ ಹೆಸರಿನಲ್ಲಿ ಕರ್ಣಾಟಕ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್ ಶಾಖೆಗಳಲ್ಲಿ ಒಟ್ಟು 1.95 ಕೋಟಿ ರೂ ಸಾಲ ಇದೆ.

English summary
Karnataka MLC Elections will be held on June 11. A total of 12 candidates are in the fray. The candidates have submitted assets declaration. The datails of BJP and JDS candidates assets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X