ಮದ್ವೆ ಡ್ಯಾನ್ಸ್-ಮತಾಂಧರು ಕೊನೆಗೂ ಸಾಯ್ಸಿಬಿಟ್ರು

pak-singing-dancing-wedding-4-women-killed
ಇಸ್ಲಾಮಾಬಾದ್, ಜೂನ್ 5: ಉತ್ತರ ಪಾಕಿಸ್ತಾನದ ವಿವಾಹ ಸಮಾರಂಭವೊಂದರಲ್ಲಿ ಇಬ್ಬರು ಪುರುಷರ ಜತೆ ಹಾಡಿ ಕುಣಿದ ನಾಲ್ವರು ಮಹಿಳೆಯರನ್ನು ಉತ್ತರ ಪಾಕಿಸ್ತಾನದ ಬುಡಕಟ್ಟು ನ್ಯಾಯಾಲಯ 'ಜಿರ್ಗಾ' ಸಾಯಿಸಿದೆ ಎಂದು ಟಿವಿ ವಾಹಿನಿಗಳು ವರದಿ ಮಾಡಿವೆ.

ಕಳೆದ ವಾರ ನಡೆದ ವಿವಾಹದಲ್ಲಿ ಈ ಮಹಿಳೆಯರು ಪುರುಷರೆ ಜತೆ ಸಾರ್ವಜನಿಕವಾಗಿ ಹಾಡು ಮತ್ತು ಕುಣಿತದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿದ ಸ್ಥಳೀಯ ಮೌಲ್ವಿಗಳು ಅವರಿಗೆಲ್ಲ ಮರಣದಂಡನೆ ವಿಧಿಸಿದ್ದರು. ಒಳಾಡಳಿತ ಸಚಿವ ರೆಹಮಾನ್‌ ಮಲಿಕ್‌ ಈ ಅಮಾನವೀಯ ಹತ್ಯೆಗಳ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರೆ, ಹಿರಿಯ ಅಧಿಕಾರಿಗಳು ಈ ವರದಿಯನ್ನು ಆಧಾರರಹಿತ ಎಂದು ಹೇಳಿ ಅಲ್ಲಗಳೆದಿದ್ದಾರೆ.

ಕೊಹಿಸ್ತಾನ್‌ ಜಿಲ್ಲೆಯ ಪರ್ವತ ಪ್ರದೇಶದ ಗಡಾ (Gada) ಹಳ್ಳಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪುರುಷರ ಜತೆಗೆ ಹಾಡಿ ಕುಣಿದ ಮಹಿಳೆಯರಿಗೆ ಬುಡಕಟ್ಟು ನ್ಯಾಯಾಲಯ ಸಾವಿನ ಶಿಕ್ಷೆ ವಿಧಿಸಿದೆ ಎಂದು ಟಿವಿಗಳು ವರದಿ ಮಾಡಿವೆ.

ಆದರೆ ಸಾವಿನ ಶಿಕ್ಷೆಗೆ ಗುರಿಯಾಗಿರುವ ಮಹಿಳೆಯರ ಸಂಖ್ಯೆಯ ಬಗ್ಗೆ ಗೊಂದಲವಿದೆ. ಜಿಯೊ ನ್ಯೂಸ್‌ ಚಾನೆಲ್‌ ನಾಲ್ವರು ಮಹಿಳೆಯರನ್ನು ಸಾಯಿಸಲಾಗಿದೆ ಎಂದಿದ್ದರೆ ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ತನ್ನ ವೆಬ್‌ಸೈಟಿನಲ್ಲಿ ಐವರು ಮಹಿಳೆಯರನ್ನು ಸಾಯಿಸಲಾಗಿದೆ ಎಂದು ವರದಿ ಮಾಡಿದೆ. ಐವರು ಮಹಿಳೆಯರ ಪೈಕಿ ಇಬ್ಬರು ಸಹೋದರಿಯರು ಎಂದು ಈ ವರದಿ ಹೇಳಿದೆ.

ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರು ಜತೆಯಾಗಿ ಕುಣಿಯುತ್ತಿದ್ದ ಮೊಬೈಲ್‌ ವಿಡಿಯೋ ಕ್ಲಿಪ್ಪಿಂಗ್ ಅನ್ನು ನೋಡಿದ ಬಳಿಕ ಬುಡಕಟ್ಟು ನ್ಯಾಯಾಲಯವಾಗಿರುವ 'ಜಿರ್ಗಾ' ಅವರಿಗೆ ಸಾವಿನ ಶಿಕ್ಷೆ ವಿಧಿಸಿದೆ. ಮನೆತನಕ್ಕೆ ಕೆಟ್ಟ ಹೆಸರು ತಂದಿರುವ ಈ ಮಹಿಳೆಯರು ಮತ್ತು ಪುರುಷರನ್ನು ಸಾಯಿಸಬೇಕೆಂಬ ತೀರ್ಮಾನಕ್ಕೆ ಜಿರ್ಗಾ ಬಂತು.

ಈ ಘಟನೆ ಸಂಬಂಧ ಬಂದನಕ್ಕೊಳಗಾಗಿರುವ ಒಬ್ಬ ಮೌಲ್ವಿ ಆರು ಜನರನ್ನು ಸಾಯಿಸಲು ತಾನು ಫ‌ತ್ವಾ ಹೊರಡಿಸಿಲ್ಲ ಎಂದಿದ್ದಾನೆ. ಜಿರ್ಗಾ ಸಾವಿನ ಶಿಕ್ಷೆ ವಿಧಿಸಿರುವ ಇತರ ಇಬ್ಬರು ಪುರುಷರು ಪಲಾಯನ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+