ಬಿಜೆಪಿ ಶಾಸಕ ಶ್ರೀನಿವಾಸ್ ಮೇಲೆ ಲೋಕಾಯುಕ್ತ ದಾಳಿ

ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದ ಬಿಜೆಪಿ ಶಾಸಕ ಎಂ. ಶ್ರೀನಿವಾಸ್ ಅವರ ಜಯನಗರ 7ನೇ ಬ್ಲಾಕ್ ನಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 8 ಕಡೆ ದಾಳಿ ಮಾಡಲಾಗಿದೆ.
ಕೋಣನಕುಂಟೆ ಬಳಿ ಇರುವ ಆರ್ ಎಂಎಸ್ ಇಂಟರ್ ನ್ಯಾಷನಲ್ ಶಾಲೆ ಕಚೇರಿ ಹಾಗೂ ಶ್ರೀನಿವಾಸ್ ಅವರ ಪುತ್ರ ಕೊಟ್ಟಿಗೆಪಾಳ್ಯ ವಾರ್ಡ್ ಕಾರ್ಪೊರೇಟರ್ ವೆಂಕಟೇಶ್ ಬಾಬು ಅವರು ಸೇರಿದಂತೆ ಶ್ರೀನಿವಾಸ್ ಅವರ ಆಪ್ತರ ಮನೆ ಮೇಲೂ ದಾಳಿ ನಡೆದಿದೆ.
ಲೋಕಾಯುಕ್ತ ಡಿಎಸ್ಪಿ ಗಿರೀಶ್, ಡಿಎವೈಎಸ್ಪಿ ಪ್ರಸನ್ನ ರಾಜು ಹಾಗೂ ಎಸ್ ಪಿ ಶಿವ ಶಂಕರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸುಮಾರು 3-4 ಗಂಟೆಗಳ ಕಾಲ ದಾಳಿ ಮುಂದುವರೆಯುವ ಸಾಧ್ಯತೆಯಿದೆ.
ಶಾಸಕ ಎಂ ಶ್ರೀನಿವಾಸ್, ಪತ್ನಿ ರತ್ನಮ್ಮ ಹಾಗೂ ಪುತ್ರ ವೆಂಕಟೇಶ್ ಬಾಬು ಹಾಗೂ ಅವರ ಪತ್ನಿ ಅವರ ಮೇಲೆ 300 ಕೋಟಿ ರು.ಗೂ ಅಧಿಕ ಅಕ್ರಮ ಆಸ್ತಿ ಹೊಂದಿರುವ ಆರೋಪವನ್ನು ಹೊರೆಸಿ ಸಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.












Click it and Unblock the Notifications