ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ಚಿಕ್ಕಪ್ಪ ವೈಎಸ್ ವಿವೇಕ ಕಾಂಗ್ರೆಸ್ ಗೆ ಗುಡ್ ಬೈ

By Mahesh
|
Google Oneindia Kannada News

Former MP YS Vivekananda Reddy Quits
ಹೈದರಾಬಾದ್, ಮೇ.24: ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿಯ ಬಂಧನಕ್ಕೆ ಸಿಬಿಐ ಸರ್ವ ಸಿದ್ಧತೆ ನಡೆಸಿದೆ. ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ತಮ್ಮ ವೈಎಸ್ ವಿವೇಕಾನಂದ ರೆಡ್ಡಿ ಅವರು ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.

ಜಗನ್ ಬಂಧನದಿಂದ ಉಂಟಾಗಬಹುದಾದ ಗಲಭೆ, ರಾಜಕೀಯ ವಿಪ್ಲವ ಹತ್ತಿಕ್ಕಲು ಆಂಧ್ರ ಪೊಲೀಸರು ಈಗಾಗಲೇ ವ್ಯಾಪಕ ಬಂದೋಬಸ್ತ್ ಮಾಡಿದ್ದಾರೆ.

ಪುಲಿವೆಂದುಲದಲ್ಲಿ ತಮ್ಮ ಬೆಂಬಲಿಗರ ಜೊತೆ ಮಾತುಕತೆ ನಡೆಸಿದ ನಂತರ ಮಾಜಿ ಸಚಿವ ಹಾಗೂ ಸಂಸದ ವಿವೇಕಾನಂದ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ನನ್ನ ಅಣ್ಣ ವೈಎಸ್ ಆರ್ ಅವರ ಹೆಸರು ಬಳಸಿಕೊಂಡು ಕಾಂಗ್ರೆಸ್ ಅಧಿಕಾರ ಬಂದಿದೆ. ಆದರೆ, ಇತ್ತೀಚೆಗೆ ನಮ್ಮ ಕುಟುಂಬವನ್ನು ಟಾರ್ಗೆಟ್ ಮಾಡಿಕೊಂಡು ಅಪಮಾನ ಮಾಡಲಾಗುತ್ತದೆ. ಅನಗತ್ಯವಾಗಿ ತನಿಖೆ, ಆರೋಪಗಳು ಕೇಳಿ ಬರುತ್ತಿರುವುದು ಬೇಸರ ತರಿಸಿದೆ ಎಂದು ವಿವೇಕಾನಂದ ಹೇಳಿದ್ದಾರೆ.

ವೈಎಸ್ ರಾಜಶೇಖರ್ ರೆಡ್ಡಿ ಅವರ ಆಶಯದಂತೆ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಸ್ಥಾಪನೆಗೊಂಡರೂ ವಿವೇಕಾನಂದ ಅವರು ಕಾಂಗ್ರೆಸ್ ತೊರೆದಿರಲಿಲ್ಲ. ಪಕ್ಷ ನಿಷ್ಠೆ ಮೆರೆದಿದ್ದ ವಿವೇಕಾನಂದ ಅವರಿಗೆ ಈಗ ತಮ್ಮ ಕುಟುಂಬವನ್ನು ಸ್ವತಃ ಕಾಂಗ್ರೆಸ್ಸಿಗರು ಟಾರ್ಗೆಟ್ ಮಾಡುತ್ತಿರುವುದು ಸಹಿಸಲು ಸಾಧ್ಯವಾಗದೆ ಪಕ್ಷದಿಂದ ಹೊರ ಬಂದಿದ್ದಾರೆ.

ಆದರೆ, ಮುಂದಿನ ನಡೆ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ವೈಎಸ್ ಆರ್ ಪಕ್ಷ ಸೇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ರಾಜಶೇಖರ ರೆಡ್ಡಿಯಷ್ಟು ಡೈನಾಮಿಕ್ ಪರ್ಸನಾಲಿಟಿ ಇಲ್ಲದಿದ್ದರೂ ಜನತೆಯಲ್ಲಿ ವಿವೇಕಾನಂದ ಅವರ ಮೇಲೆ ಸಾಫ್ಟ್ ಕಾರ್ನರ್ ಇದ್ದೇ ಇದೆ.

English summary
Former Andhra pradesh minister and former MP Y S Vivekananda Reddy made up his mind to get back to the family of his brother late YS Rajasekhara Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X