• search

ಹುಷಾರು! ಇಂಟರ್ನೆಟ್‌ ಪ್ರೇಮಿಗೆ 5 ಲಕ್ಷ ರು ದೋಖಾ

By Srinath
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  teacher-duped-of-rs-5-lakh-by-internet-girlfriend
  ನವದೆಹಲಿ, ಮೇ 23: ಹುಷಾರು, ಕಾಲ ಕೆಟ್ಟುಹೋಗಿದೆ ಅಂದರೆ ಕಾಲ ಯಾವಾಗಲೋ ಕೆ್ಹೋಗಿದೆ. ಈಗೇನು ಹೊಸದಾಗಿ ಹೇಳೋದು ಅಂತ ಗರಂ ಆಗ್ಬೇಡಿ. ಈಗಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ದೋಖಾ ದಗಲ್ಬಾಜಿಗಳು ಹೊಸ ಸ್ವರೂಪದಲ್ಲಿ ಹೆಚ್ಚಾಗಿವೆ ಅಷ್ಟೇ.

  ಏನಾಯಿತೆಂದರೆ ಗುರ್ ಗಾಂವನ ಪಾಲಂ ವಿಹಾರದ ಯುವಕನೊಬ್ಬ ಇಂಟರ್ನೆಟ್ಟಿನಲ್ಲಿ ಜಾಲಾಡುತ್ತಿದ್ದಾಗ ಹುಡಗಿಯೊಬ್ಬಳು ಬಲೆಗೆ ಬಿದ್ದಿದ್ದಾಳೆ. ಇದರಿಂದ ಆನಂದತುಂದಿಲಿತನಾದ ಯುವ ಪ್ರೇಮಿ, ಅವಳೊಂದಿಗೆ ಮತ್ತಷ್ಟು chat ಮಾಡಿದ್ದಾನೆ. ಸುಮಾರು ಒಂದು ವರ್ಷದ chat ಅದ್ಯಾವುದೋ ಮಾಯೆಯಲ್ಲಿ ಪ್ರೇಮಕ್ಕೆ ತಿರುಗಿಕೊಂಡಿದೆ.

  ಸರಿ, one fine day ಪಾಗಲ್ ಯುವ ಪ್ರಿಯಕರ 'ಹುಡುಗಿಯನ್ನು' ಭೇಟಿ ಮಾಡಲು ನಿರ್ಧರಿಸಿಯೇ ಬಿಟ್ಟ. ಆದರೆ ಅದಕ್ಕೂ ಮುನ್ನ 'ಹುಡುಗಿ' ಒಂದು ಕಂಡೀಷನ್ ಇಟ್ಟಳು -'ನನಗೆ ಸಿಕ್ಕಾಪಟ್ಟೆ family peoblems ಇದೆ. ತಕ್ಷಣಕ್ಕೆ ಅರ್ಜೆಂಟಾಗಿ 5 ಲಕ್ಷ ರುಪಾಯಿ ಬೇಕು, ಏನ್ಮಾಡೋದು' ಎಂದು ಗೋಳು ತೋಡಿಕೊಂಡಳು.

  ಮಿಕ ಬಲೆಗೆ ಬೀಳಲು ಕಾದಿತ್ತು. ಆತುರಪಟ್ಟ ಅರಿವುಗೇಡಿ ಹುಡುಗ 'ಸರಿ ತಗೋ ನಿನ್ನ ಬ್ಯಾಂಕ್ ಖಾತೆಗೆ ಅಷ್ಟೂ ದುಡ್ಡನ್ನು ಹಾಕಿದ್ದೇನೆ. ನಿನ್ನ ಸಮಸ್ಯೆಗಳನ್ನು ಮೊದಲು ಪರಿಹರಿಸಿಕೋ' ಎಂದು ಉದಾರ ಮನಸು ತೋರಿದ. ಅದೆ ನಿಜಕ್ಕೂ ಕಷ್ಟದಲ್ಲಿರುವ ವಿದ್ಯಾರ್ಥಿಯೋ ಅಥವಾ ಮತ್ಯಾರೋ ಅರ್ಹ ವ್ಯಕ್ತಿ ಹೀಗೆ ಸಹಾಯ ಕೇಳಿದ್ದರೆ ನಮ್ಮ ಹುಡುಗ ಹೀಗೇ ದುಡ್ಡು transfer ಮಾಡುತ್ತಿದ್ದನಾ? ಎಂಬುದು ಚಿಂತನಾರ್ಹ ವಿಷಯ. ಅದಿರಲಿ ವಿಷಯ ಮುಂದೇನಾಯಿತೋ ನೋಡಿ.

  ಬ್ಯಾಂಕ್ ಖಾತೆಯಲ್ಲಿ ಹಣ ಜಮಾವಣೆಯಾಗುತ್ತಿದ್ದಂತೆ ಆ 'ಹುಡುಗಿ' ಕೈ ಎತ್ತಿದ್ದಳು. ಸರಿ ಹುಡುಗ ತಲೆ ಮೇಲೆ ಕೈಹೊತ್ತುಕೊಂಡೇ ಪಾಲಂ ವಿಹಾರ್ ಪೊಲಿಸ್ ಠಾಣೆ ಮೆಟ್ಟಿಲು ಹತ್ತಿದ. ತಕ್ಷಣ 'ಮೋನಿಕಾ ಶೈಲಾ' ಎಂಬ ಹೆಸರಿನ ಹುಡುಗಿಯ ವಿರುದ್ಧ ಐಟಿ ಕಾಯಿದೆಯಡಿ ಸೈಬರ್ ಕ್ರೈಂ ದಾಖಲಾಯಿತು ಅನ್ನಿ.

  ಅಷ್ಟಕ್ಕೂ ಈ ಪಾಟಿ ವಂಚನೆಗೊಳಗಾದ ಪಾಗಲ್ ಯುವ ಪ್ರಿಯಕರ ಯಾರಪ್ಪಾ ಅಂದರೆ ಅವನೊಬ್ಬ ಶಿಕ್ಷಕ. ಹೆಸರು ಸಂದೀಪ್ ದಹಿಯಾ. 2011ರ ಮಾರ್ಚ್ ತಿಂಗಳಲ್ಲಿ ಈ ಲವ್ ದೋಖಾ ಗರಿಗೆದರಿತ್ತು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  A Gurgaon teacher Sandeep Dahiya was duped of Rs 5 lakhs by his Internet Girlfriend Monika Shaila.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more