ರೀಬಾಕ್ ಸಂಸ್ಥೆಯಲ್ಲಿ 870 ಕೋಟಿ ರು ವಂಚನೆ

ಪೊಲೀಸ್ FIR ಕಾಪಿ ನೋಡಿದ ಆರೋಪಿಗಳು ಹೆಚ್ಚುವರಿ ಸೊನ್ನೆ ಸೇರಿರುವುದನ್ನು ನೋಡಿ ಹೌಹಾರಿದ್ದಾರೆ. ನಂತರ ಪೊಲೀಸರು ಕೂಡಾ ಮತ್ತೊಮ್ಮೆ FIR ಕಾಪಿ ನೋಡಿ ಅವ್ಯವಹಾರದ ಮೊತ್ತ 8700 ಕೋಟಿ ರು ಅಲ್ಲ 870 ಕೋಟಿ ರು ಎಂದು ತಿದ್ದಿದ್ದಾರೆ. ಇದು typographical error ಸರಿಯಾದ ಮೊತ್ತವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ವಂಚನೆ, ಕಂಪನಿ ನಿಯಮ ಉಲ್ಲಂಘನೆ,ಫೋರ್ಜರಿ ಆರೋಪದ ಮೇಲೆ ಮಾಜಿ ಎಂಡಿ ಸುಭಿಂದರ್ ಸಿಂಗ್ ಪ್ರೇಮ್, ಮಾಜಿ ಸಿಒಒ ವಿಷ್ಣು ಭಗರ್ ಅವರ ಮೇಲೆ ಆರೋಪ ಹೊರೆಸಲಾಗಿದೆ. ಮಾ.26, 2012ಕ್ಕೆ ಈ ಇಬ್ಬರು ಸಂಸ್ಥೆಯನ್ನು ತೊರೆದಿದ್ದರು.
ಸುಮಾರು 16 ವರ್ಷಗಳ ರಿಬಾಕ್ ಸಂಸ್ಥೆಯಲ್ಲಿದ್ದ ಈ ಇಬ್ಬರು ಆರೋಪಿಗಳು ಗುಪ್ತವಾಗಿ ನಾಲ್ಕು ವೇರ್ ಹೌಸ್ ಗಳನ್ನು ನಡೆಸುತ್ತಿದ್ದರು. ರಿಬಾಕ್ ಸಂಸ್ಥೆಯ ಷೇರುಗಳ ಮೊತ್ತ ಕದ್ದಿರಿಸಲು ಈ ವೇರ್ ಹೌಸ್ ಗಳನ್ನು ಬಳಸುತ್ತಿದ್ದರು. ರಿಬಾಕ್ ಹಾಗೂ ಅಡಿಡಾಸ್ ಸಮೂಹದ ಸುಮಾರು 40,000 ಜನರ ಉದ್ಯೋಗದ ಮೇಲೆ ನೇರ ಅಥವಾ ಪರೋಕ್ಷವಾಗಿ ಈ ವಂಚನೆ ಪ್ರಭಾವ ಬೀರಲಿದೆ.
ಈ ಇಬ್ಬರು ಮಾಜಿ ಉದ್ಯೋಗಿಗಳ ಮೇಲೆ ಐಪಿಸಿ ಸೆಕ್ಷನ್ 406/408, 467/468, 477A ಹಾಗೂ 120B ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications