ಯಡಿಯೂರಪ್ಪ ಶ್ರೀರಕ್ಷೆ ಬೇಡಿದ ವಾಟಾಳ್ ನಾಗರಾಜ್

Vatal Nagaraj
ಬೆಂಗಳೂರು, ಮೇ.22: ಈ ದಿನದ ರಾಜಕೀಯ ಬೆಳವಣಿಗೆಯಲ್ಲಿ ಬೆಂಗಳೂರು, ಮಂಗಳೂರಿನಲ್ಲಿ ಬಿಜೆಪಿ ಮುಖಂಡರುಗಳ ಚರ್ಚೆ, ಸಭೆಗಳು ಎಗ್ಗಿಲ್ಲದೆ ಸಾಗಿದೆ. ಮಂಗಳೂರಿನಲ್ಲಿ ಜಗದೀಶ್ ಶೆಟ್ಟರ್ ಹಾಗೂ ಸದಾನಂದ ಗೌಡರ ಸಭೆ ನಡೆಸಿದ್ದರೆ, ಬೆಂಗಳೂರಿನಲ್ಲಿ ಯಡಿಯೂರಪ್ಪ ಅವರು ಕರ್ನಾಟಕದ ಜನಪ್ರಿಯ ರಾಜಕಾರಣಿ ಜೊತೆ ಚರ್ಚೆ ನಡೆಸಿದ ಸುದ್ದಿ ಸಿಕ್ಕಿದೆ.

ಮಲ್ಲೇಶ್ವರಂನಲ್ಲಿ ಕಚೇರಿಯಲ್ಲಿ ಮಂಗಳವಾರ(ಮೇ.22)ಎಂದಿನಂತೆ 'ಜನ ಸಂಪರ್ಕ'ಕ್ಕಾಗಿ ಕಾದು ಕೂತ್ತಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗಡಿನಾಡಿನ ಕನ್ನಡ ದನಿ ವಾಟಾಳ್ ನಾಗರಾಜ್ ಅವರು ಎದುರಾಗಿದ್ದು ನೋಡಿ ಸಂತೋಷ ಹೆಚ್ಚಾಗಿದೆ.

ಬಹುದಿನಗಳ ನಂತರ ಭೇಟಿಗೆ ಬಂದ ಹಳೆ ಗೆಳೆಯನನ್ನು ಪಕ್ಕದಲ್ಲಿ ಕೂಡಿಸಿಕೊಂಡು ಯಡಿಯೂರಪ್ಪ ಅವರು ಮಾತನಾಡಿದ್ದಾರೆ. ನಂತರ ಪೀಠಿಕೆ ಹಾಕಿದ ವಾಟಾಳ್, ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುತ್ತಿದ್ದೇನೆ ದಯವಿಟ್ಟು ನನಗೆ ನಿಮ್ಮ ಶ್ರೀರಕ್ಷೆ ಬೇಕು ಎಂದು ಕೈ ಜೋಡಿಸಿದ್ದಾರೆ.

ಕನ್ನಡ ಪರ ಹೋರಾಟಗಾರರು ನೀವು, ನಂದು ಜನಪರ ಹೋರಾಟಗಾರ, ಜನರಿಗೆ ಒಳ್ಳೆಯದು ಆಗುತ್ತೆ ಯಾಕೆ ಬೇಡ ಎನ್ನಲಿ. ನಿಮಗೆ ನನ್ನ ಬೆಂಬಲ ಕೊಡುತ್ತೇನೆ. ನನ್ನ ಆಪ್ತರ ಬಳಿ ಈ ಬಗ್ಗೆ ಇವತ್ತೇ ಮಾತಾಡುತ್ತೇನೆ ಎಂದು ಯಡಿಯೂರಪ್ಪ ಅವರು ಆಶ್ವಾಸನೆ ನೀಡಿದ್ದಾರಂತೆ.

ವಾಟಾಳ್ ಹಾಗೂ ಯಡಿಯೂರಪ್ಪ ಅವರ ನಡುವೆ ಮತ್ತೇನು ಮಾತುಕತೆ ನಡೆಯಿತು ಎಂಬುದರ ಬಗ್ಗೆ ಸದ್ಯಕ್ಕೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+