• search

ರಾಷ್ಟ್ರಪತಿ ಗಾದಿಗೆ ದೇವೇಗೌಡ ಅತ್ಯಂತ ಸೂಕ್ತ

Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Deve Gowda right candidate for President of India post
  ಕೆ ಆರ್ ಪೇಟೆ, ಮೇ 21: ಎಚ್ ಡಿ ದೇವೇಗೌಡರು ಪ್ರಧಾನಿಯಾಗಿದ್ದಾಗ ವಿಶ್ವವೇ ಮೆಚ್ಚುವಂತ ಆಡಳಿತ ನೀಡಿದ್ದರು. ದೇಶದ ಕೃಷಿಕರ ಪರ ಹೋರಾಟ ನಡೆಸಿ ತನ್ನ ಜೀವನವನ್ನು ರೈತರಿಗಾಗಿಯೇ ಮೀಸಲಾಗಿಟ್ಟಿರುವ ದೇವೇಗೌಡರು ರಾಷ್ಟ್ರಪತಿ ಗಾದಿಗೆ ಅತ್ಯಂತ ಸೂಕ್ತ ಆಯ್ಕೆಯೆಂದು ಮಾಜಿ ಸ್ಪೀಕರ್,ಜೆಡಿಎಸ್ ಮುಖಂಡ ಕೃಷ್ಣ ಹೇಳಿಕೆ ನೀಡಿದ್ದಾರೆ.

  ದೇವೇಗೌಡರು ರಾಷ್ಟ್ರಪತಿ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾರೆ. ನೈಋತ್ಯ ವಲಯ ರೈಲ್ವೆ ಕಚೇರಿ, ರೈಲ್ವೆಯಲ್ಲಿ ಕನ್ನಡಿಗರಿಗೆ ಉದ್ಯೋಗ, ರಸಗೊಬ್ಬರಗಳಿಗೆ ಸಬ್ಸಿಡಿ, ಕಾವೇರಿ ಸಮಸ್ಯೆ ಮುಂತಾದ ಹತ್ತು ಹಲವಾರು ವಿಚಾರಗಳ ಬಗ್ಗೆ ಹೋರಾಟ ನಡೆಸಿದ ದೇವೇಗೌಡ ನಮ್ಮ ಹೆಮ್ಮೆಯ ಕನ್ನಡಿಗ. ಇದನ್ನೆಲ್ಲಾ ಪರಿಗಣಿಸಿ ರಾಷ್ಟ್ರೀಯ ಪಕ್ಷಗಳು ಕ್ರಿಯಾತ್ಮಕವಾಗಿ ಆಲೋಚನೆ ಮಾಡಿ ಹೆಜ್ಜೆ ಇಡಲಿ ಎಂದು ಕೃಷ್ಣ ಹೇಳಿಕೆ ನೀಡಿದ್ದಾರೆ.

  ದೇವೇಗೌಡ ಅವರ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕೃಷ್ಣ, ಜೆಡಿಎಸ್ ಕಾರ್ಯಕತರು ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಜನಪರ ಕಾರ್ಯಕ್ರಮಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

  ರಾಜ್ಯದ ಅಭಿವೃದ್ದಿಯನ್ನು ಆಡಳಿತ ಬಿಜೆಪಿ ಸಂಪೂರ್ಣ ಕಡೆಗಣಿಸಿದೆ. ಸಮರ್ಥ ವಿರೋಧ ಪಕ್ಷವಾಗಿ ಕಾಂಗ್ರೆಸ್ ಕೂಡಾ ವಿಫಲವಾಗಿದೆ. ಹಾಗಾಗಿ ಈ ಬಾರಿ ಮತದಾರರು ದೇವೇಗೌಡರ ಹೋರಾಟವನ್ನು ಬೆಂಬಲಿಸಿ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಕೃಷ್ಣ ಆಶಯ ವ್ಯಕ್ತ ಪಡಿಸಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Ex- speaker Karnataka Assembly Krishna bats for Ex-PM H D Devegowda. Mr. Gowda is a statesmen, he should be elected as the President of India, Krishna said in a function to felicitate Gowda on his 80th Birth day in K R pet near Mysore-Karnataka.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more