ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಮನೆ-ಕಚೇರಿ, ಹೊಸ ಪಕ್ಷ ಅದೇ ಬಿಎಸ್‌ವೈ

By Srinath
|
Google Oneindia Kannada News

yeddyurappa-new-office-in-malleswaram-party-kjp
ಬೆಂಗಳೂರು, ಮೇ 18: ನಿಮ್ z-category ಭದ್ರತೆ ನೀವೇ ಮಡಕ್ಕೊಳ್ಳಿ ಎಂದು ಸಿಟ್ಟಿನಿಂದ ಒಬ್ಬಂಟಿಯಾಗಿ ನಿನ್ನೆ ರೇಸ್ ಕೋರ್ಸ್ ರಸ್ತೆ ಮನೆಯಿಂದ ಹೊರಟ ಯಡಿಯೂರಪ್ಪನವರು ತಲುಪಿಕೊಂಡಿರುವುದು ಹೊಸ ಕಚೇರಿಗೆ. ಅದು ಮಲ್ಲೇಶ್ವರದಲ್ಲಿರುವ ಬಿಜೆಪಿ ಹಳೆಯ ಕಚೇರಿ.

ಆದರೆ ಅದೀಗ ಯಡಿಯೂರಪ್ಪನವರ ಮುಂದಿನ ರಾಜಕೀಯ ಕಾರಸ್ಥಾನವಾಗಲಿದೆ. ಅಲ್ಲಿಂದಲೇ ತಮ್ಮ ಹೊಸ ರಾಜಕೀಯ ಚಾಲ್ ಗಳನ್ನು ಚಲಾಯಿಸಲಿದ್ದಾರೆ. ಹೊಸ ಪಕ್ಷದ ಹೊಸ್ತಿಲಲ್ಲಿರುವ ಬಿಎಸ್‌ವೈ ಇಂದು ಈ ಕಚೇರಿಯಲ್ಲಿ ಸಕಲ ಪೂಜೆಗಳನ್ನು ನೆರವೇರಿಸಿ, ಕಚೇರಿ ಪ್ರವೇಶಿಸಲಿದ್ದಾರೆ.

ಅಂದಹಾಗೆ ಇದು ಬಿಎಸ್‌ವೈ ಅತ್ಯಾಪ್ತ ಲೆಹರ್ ಸಿಂಗ್ ಅವರಿಗೆ ಸೇರಿದ ವಿಶಾಲ ಭವನವಾಗಿದೆ. ಅದಕ್ಕೆ ಒಂದಷ್ಟು ಸುಣ್ಣಬಣ್ಣ ಬಳಿದು, ಹೊಸ ರೂಪ ಪಡೆದಿದೆ. ಇನ್ನು ಬಿಎಸ್‌ವೈ ಅವರು ಕರ್ನಾಟಕ ಜನತಾ ಪಾರ್ಟಿ (KJP) ಎಂಬ ಹೊಸ ಪಕ್ಷವನ್ನು ಸ್ಥಾಪಿಸಲಿದ್ದಾರೆ. ಅದಕ್ಕಾಗಿ ಕಚೇರಿ ತೆರೆದಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ರಾಜ್ಯ ಬಿಜೆಪಿಯಲ್ಲಿನ ಿತ್ತೀಚಿನ ವಿದ್ಯಮಾನಗಳನ್ನು ನೋಡಿದರೆ ಬಿಎಸ್‌ವೈ KJP ಸ್ಥಾಪಿಸುವುದು ಬಹುತೇಕ ನಿಶ್ಚಿತವಾಗಿದೆ.

ಮತ್ತೊಂದು ಜಗನ್ನಾಟಕ: ಯಡಿಯೂರಪ್ಪನವರು ವಾರಕ್ಕೊಮ್ಮೆ ಮತ್ತೆ ಸೆಟೆದು ನಿಂತುಕೊಳ್ಳುತ್ತಿರುವುದನ್ನು ನೋಡಿ ಹೋಗಲು ಈ ಬಾರಿ ರಾಜ್ಯ ಸಭೆ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಮತ್ತು ಧರ್ಮೇಂದ್ರ ಪ್ರಧಾನ್ ಶುಕ್ರವಾರ ಸಂಜೆ ವೇಳೆಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಇನ್ನು, ಯಡಿಯೂರಪ್ಪನವರು ಜೂನ್ 1ರಂದು ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಧಿಕೃತ ನಿವಾಸವನ್ನು ಖಾಲಿ ಮಾಡಿ, ಡಾಲರ್ಸ್ ರಸ್ತೆಯಲ್ಲಿರುವ ಹೊಸ ಮನೆಗೆ ಗೃಹಪ್ರವೇಶ ಮಾಡಲಿದ್ದಾರಂತೆ. ಸಿಎಂ ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ಬಿಎಸ್‌ವೈ ಈ ಮನೆಯನ್ನು ಖಾಲಿ ಮಾಡಬೇಕಿತ್ತು.

ಆದರೆ ಕಳೆದ ಆರು ತಿಂಗಳಿಂದ ಹೆಚ್ಚುವರಿಯಾಗಿ ಇಲ್ಲೇ ಠಿಕಾಣಿ ಹೂಡಿದ್ದಾರೆ. ಅದಕ್ಕಾಗಿ ಲೋಕೋಪಯೋಗಿ ಇಲಾಖೆಯು ಆರು ತಿಂಗಳ ಬಾಡಿಗೆ 32 ಲಕ್ಷ ರುಪಾಯಿಗಳನ್ನು ಪಾವತಿಸಿ ಎಂದು ಬಿಎಸ್‌ವೈಗೆ ನೋಟಿಸ್ ನೀಡಿದೆ.

ಮೇಲಿನ ತಲೆಬರಹ ಅದ್ಯಾವುದೋ paint ಜಾಹೀರಾತು ಧಾಟಿಯಲ್ಲಿದೆಯಲ್ಲಾ? ಎಂದು ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಇದು ಯಡಿಯೂರಪ್ಪನವರ ಹೊಸ ರಾಜಕೀಯ ಬಣ್ಣವಾಗಿದೆ.

English summary
The embattled leader, BS Yeddyurappa may have taken the first steps towards launching a new political outfit by opening an office in Malleswaram on Friday, on the very day that his one time benefactor and central leader Arun Jaitley arrives in the city to mend fences with an increasingly angry Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X