SBIಗೆ ಅನಿರೀಕ್ಷಿತ 4050 ಕೋಟಿ ರೂ ಭಾರಿ ಲಾಭ

ಬಡ್ಡಿ ಲೆಕ್ಕದಲ್ಲಿ ಹೆಚ್ಚಿದ ಆದಾಯ ಮತ್ತು ಅನುತ್ಪಾದಕ ಆಸ್ತಿಗಳ ಮೇಲಿನ ಹಿಡಿತದಿಂದಾಗಿ ಈ ಸಾಧನೆ ಮಾಡಿದೆ. ಕುತೂಹಲದ ಸಂಗತಿಯೆಂದರೆ ಬ್ಯಾಂಕಿಂಗ್ ಕ್ಷೇತ್ರದ ತಜ್ಞರು SBI ಈ ಬಾರಿ (Jan-March FY12 ) 3,580 ಕೋಟಿ ರು. ಲಾಭ ಗಳಿಸಲು ಶಕ್ತವಾಗುತ್ತದೆ ಎಂದು ಅಂದಾಜಿಸಿದ್ದರು.
ಗಮನಾರ್ಹವೆಂದರೆ ಕಳೆದ ಸಾಲಿನಲ್ಲಿ ಇದೇ ತ್ರೈಮಾಸಿಕದಲ್ಲಿ ಕೇವಲ 21 ಕೋಟಿ ರು. ದಾಖಲಿಸಿತ್ತು. ಸಾಲಗಳ ಪ್ರಮಾಣ ಹೆಚ್ಚಳ ಮತ್ತು ಗ್ರಾಜುಯಿಟಿ ಪಾವತಿಗಳಿಂದಾಗಿ Q4 FY11ನಲ್ಲಿ ಲಾಭದ ಪ್ರಮಾಣ ಕುಂಠಿತವಾಗಿತ್ತು ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.
ಬಡ್ಡಿ ಸ್ವೀಕೃತ ಮತ್ತು ಪಾವತಿಗಳ ನಡುವಣ ವ್ಯತ್ಯಾಸ ಅಂದರೆ ಒಟ್ಟು ಬಡ್ಡಿ ಆದಾಯ ಶೇ. 45ರಷ್ಟು ಹೆಚ್ಚಳವಾಗಿದೆ. ಜತೆಗೆ ಇತರೆ ಆದಾಯಗಳು ಶೇ. 9ರಷ್ಟು ಅಧಿಕವಾಗಿವೆ ಎಂದು SBI ತ್ರೈಮಾಸಿಕ ವರದಿ ತಿಳಿಸಿದೆ. ಈ ಮಧ್ಯೆ, ಅನುತ್ಪಾದಕ ಆಸ್ತಿಗಳ (NPA) ಪ್ರಮಾಣ ಶೇ. 1.82ಕ್ಕೆ ಕುಸಿದಿದೆ.












Click it and Unblock the Notifications