ಧರಂ, ಕುಮಾರ್, ಕೃಷ್ಣರನ್ನು ಸಿಬಿಐಗೆ ಒಪ್ಪಿಸಿ

ರಾಜ್ಯದಲ್ಲಿ 2002ರಿಂದ ನಡೆದಿರುವ ಗಣಿ ಹಗರಣದ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಈ ಆದೇಶದ ಪ್ರಕಾರ ಅಕ್ರಮ ಗಣಿಗಾರಿಕೆ ಕುರಿತಂತೆ ತನಿಖೆ ನಡೆಸುವಂತೆ ಸಿಇಸಿ (ಕೇಂದ್ರ ಉನ್ನತಾಧಿಕಾರ ಸಮಿತಿ)ಗೆ ಪತ್ರ ಬರೆಯಲಾಗಿದೆ.
ಆದರೆ, ಸರ್ಕಾರ ಇದರ ಬಗ್ಗೆ ಸರಿಯಾಗಿ ಗಮನ ಹರಿಸಿಲ್ಲ. ಉಳಿದಿರುವ ಕಾಲಾವಕಾಶದಲ್ಲಿ ಸಿಇಸಿಗೆ ಮಾಹಿತಿ ನೀಡಿದರೆ, ಉಳಿದ ಆರೋಪಿಗಳ ಮೇಲೂ ತನಿಖೆ ನಡೆಸುವ ಅವಕಾಶ ಸಿಬಿಐಗೆ ಸಿಗುವ ಸಾಧ್ಯತೆಯಿದೆ.
ರಾಜ್ಯದಲ್ಲಿ ನಡೆದಿರುವ ಗಣಿ ಗುತ್ತಿಗೆ ಹಗರಣದಲ್ಲಿ ಹಲವು ಕೇಂದ್ರ ಸಚಿವರು, ಸಂಸದರು ಹಾಗೂ ಹಿರಿಯ ಅಧಿಕಾರಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಎಲ್ಲರ ವಿರುದ್ಧ ಸಿಬಿಐ ತನಿಖೆ ನಡೆಯಬೇಕಿದೆ ಎಂದು ಅಬ್ರಹಾಂ ಹೇಳಿದರು.
ಅಕ್ರಮ ಗಣಿಗಾರಿಕೆ, ಅಕ್ರಮ ಭೂ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಆರೋಪಿಯಾಗಿರುವ ಮೂವರು ಮಾಜಿ ಸಿಎಂಗಳ ಮೇಲೆ ಲೋಕಾಯುಕ್ತ ಕೋರ್ಟ್ ತನಿಖೆಗೆ ಆದೇಶ ನೀಡಿತ್ತು. ಆದರೆ, ಮಾಜಿ ಮುಖ್ಯ ಮಂತ್ರಿಗಳಾದ ಧರಂ ಸಿಂಗ್ ಹಾಗು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗು ಇತರ 11 ಅಧಿಕಾರಿಗಳ ವಿರುದ್ಧವೂ ಲೋಕಾಯುಕ್ತ ಪೊಲೀಸರು ಎಫ್ಐಆರ್ ಹಾಗೂ ತನಿಖೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.












Click it and Unblock the Notifications