ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಸಲ್ ದಾಳಿಗೆ ಯಾದಗಿರಿ ಜಿಲ್ಲೆಯ ಸೈನಿಕ ಬಲಿ

By Prasad
|
Google Oneindia Kannada News

Subhashchandra Bhagawantaraya, a Soldier from Yadgir
ಯಾದಗಿರಿ, ಮೇ 16 : ಛತ್ತಿಸಘಡ ರಾಜ್ಯದ ದಂತೇವಾಡ ಪ್ರದೇಶದಲ್ಲಿ ಯೋಧರ ಮೇಲೆ ನಕ್ಸಲರು ಭಾನುವಾರ ರಾತ್ರಿ ನಡೆಸಿದ ದಾಳಿಯಲ್ಲಿ ಕರ್ತವ್ಯ ನಿರತರಾಗಿದ್ದ ಶಹಾಪುರ ತಾಲ್ಲೂಕಿನ ದೊಡ್ಡ ಸಗರ ಗ್ರಾಮದ ಯೋಧ ಸುಭಾಶ್ಚಂದ್ರ ಭಗವಂತ್ರಾಯ ಮಡಿವಾಳ (38) ಬಲಿಯಾಗಿದ್ದಾರೆ.

ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಸಿಐಎಸ್‌ಎಫ್) ಹೆಡ್ ಕಾನ್ಸಟೇಬಲ್ ಆಗಿ ಛತ್ತೀಸಗಢದ ದಂತೇವಾಡದಲ್ಲಿ ಕಳೆದ 18 ವರ್ಷಗಳಿಂದ ಸಗರ (ಬಿ) ಗ್ರಾಮದ ಸುಭಾಶ್ಚಂದ್ರ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ನಾಟಕದ ಹೆಮ್ಮೆಯ ಯೋಧ ಸುಭಾಶ್ಚಂದ್ರ ಅವರು ಪತ್ನಿ, ಇಬ್ಬರು ಮಕ್ಕಳನ್ನು ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ಅವರ ಅಂತ್ಯ ಸಂಸ್ಕಾರ ತವರೂರಲ್ಲಿ ಬುಧವಾರ ನಡೆಯಲಿದೆ.

ಎಂದಿನಂತೆ ರಾತ್ರಿ ಪಾಳಿ ಕರ್ತವ್ಯಕ್ಕಾಗಿ ಒಬ್ಬ ಸಿಪಿಐ, ಹೆಡ್‌ ಕಾನ್ಸ್‌ಟೇಬಲ್, ವಾಹನ ಚಾಲಕ ಮತ್ತು ನಾಲ್ವರು ಪೊಲೀಸರು ಕಾರ್ಖಾನೆಯೊಂದರ ಬಂದೋಬಸ್ತ್‌ಗೆ ಭಾನುವಾರ ರಾತ್ರಿ 9 ಗಂಟೆಗೆ ಸುಮಾರಿಗೆ ಹೊರಟಾಗ ದಾರಿಯಲ್ಲಿ ಅಡ್ಡಗಟ್ಟಿದ ನಕ್ಸಲ್ ತಂಡ ಗುಂಡಿನ ದಾಳಿ ನಡೆಸಿದೆ ಆಗ ಸುಭಾಶ್ಚಂದ್ರ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.

ಎಸ್ಸೆಸ್ಸೆಲ್ಸಿ ನಂತರ ಸಿಐಎಸ್‌ಎಫ್ ಸೇರಿದ್ದ ಸುಭಾಶ್ಚಂದ್ರ ಮಡಿವಾಳ ಕರ್ತವ್ಯ ನಿರತರಾಗಿದ್ದಾಗಲೇ ಬಲಿಯಾದದ್ದು ಇಡೀ ಕುಟುಂಬಕ್ಕೆ ಅಘಾತ ನೀಡಿದೆ. ಛತ್ತೀಸ್‌ಗಡದ ದಂತೇವಾಡದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ದೆಹಲಿಗೆ ಸಾಗಿಸಲಾಗಿದೆ. ಅಲ್ಲಿಂದ ಹೈದರಾಬಾದ್‌ಗೆ ವಿಮಾನದ ಮೂಲಕ ತರಲಾಗುತ್ತದೆ. ಅಲ್ಲಿಂದ ಆಂಬುಲೆನ್ಸ್ ಮೂಲಕ ಸಗರ (ಬಿ) ಗ್ರಾಮಕ್ಕೆ ತರಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

English summary
Subhashchandra Bhagawantaraya, a Soldier from Yadgir, Karnataka dies in naxal attack in Chhattisgarh. He was serving as head constable in Central Industrial Security Force in Dantewada in Chattisgarh. May his soul rest in peace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X