ಮೇ 14. ಸಂಜೆ 4ಕ್ಕೆ ಯಡಿಯೂರಪ್ಪ ನಿರ್ಧಾರ ಪ್ರಕಟ

ಸೋಮವಾರ ಬೆಳಗ್ಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿಕೊಟ್ಟ ಯಡಿಯೂರಪ್ಪ ಅವರು ಶ್ರೀಗಳ ಆಶೀರ್ವಾದ ಪಡೆದು ಬೆಂಗಳೂರಿನ ರೇಸ್ ಕೊರ್ಸ್ ನಿವಾಸಕ್ಕೆ ಮರಳಿದ್ದಾರೆ.
ಬೆಳಗ್ಗೆ ಉಪಹಾರ ಕೂಟದಲ್ಲಿ ಸುಮಾರು 67 ರಿಂದ 70 ಜನ ಶಾಸಕರು ಸೇರುವ ನಿರೀಕ್ಷೆಯಿದೆ. ಯಡಿಯೂರಪ್ಪ ಅವರು ರಾಜೀನಾಮೆ ನೀಡಿ ಎಂದರೆ ನಾವೆಲ್ಲರೂ ಸಿದ್ಧವಾಗಿದ್ದೇವೆ ಎಂದು ಯಡಿಯೂರಪ್ಪ ಅವರ ಬೆಂಬಲಿಗರು ಹೇಳಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರ ಮನೆಗೆ ಸದಾನಂದ ಗೌಡರು ಬರಬೇಕು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಬೇಕು. ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕು ಎಂದು ಯಡಿಯೂರಪ್ಪ ಬೆಂಬಲಿಗರು ಆಗ್ರಹಿಸಿದ್ದಾರೆ.
ತುಮಕೂರಿನಲ್ಲಿ ಬಿಎಸ್ ವೈ: ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಸೋನಿಯಾ ಗಾಂಧಿ ಕೊಂಡಾಡಿದೆ ಅಷ್ಟೇ. ಆಪ್ತ ಶಾಸಕರ ಜೊತೆ ಬೆಳಗ್ಗೆ 10 ಗಂಟೆಗೆ ಸಭೆ ಸೇರಿ ಚರ್ಚಿಸಿ ನಿರ್ಧಾರ ಪ್ರಕಟಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ನಾನು ದೆಹಲಿಗೆ ಹೋಗುವುದಿಲ್ಲ. ಬಿಜೆಪಿ ಪಕ್ಷ ಕಷ್ಟದಲ್ಲಿದ್ದವರನ್ನು ಕೈ ಹಿಡಿಯುವುದಿಲ್ಲ ಎಂಬುದು ದಲಿತ ನಾಯಕ ಬಂಗಾರು ಲಕ್ಷ್ಮಣ್ ಅವರ ಪ್ರಕರಣದಿಂದ ಕಾಣಬಹುದು. ಸಿದ್ದಗಂಗಾ ಶ್ರೀಗಳ ಆಶೀರ್ವಾದ ನನ್ನ ಮೇಲಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತುಮಕೂರಿನಲ್ಲಿ ಸೋಮವಾರ ಮುಂಜಾನೆ ಹೇಳಿದರು.












Click it and Unblock the Notifications