ಪತ್ನಿಗೆ ಪಾಠ ಕಲಿಸುವ ಭರದಲ್ಲಿ ನಾದಿನಿ ರೇಪ್

ವಿನೋದ್ ಚೌಹಾಣ್ ಎಂಬ 38 ವರ್ಷದ ವ್ಯಕ್ತಿ 15 ದಿನಗಳ ಹಿಂದೆ ಮಹಾನಗರದ ಪೂರ್ವ ವಿರಾರ್ ಪ್ರದೇಶದಲ್ಲಿರುವ ತನ್ನ ಪತ್ನಿಯ ಸೋದರನ ಮನೆಗೆ ಹೋಗಿದ್ದ. ಆ ವೇಳೆ ಹೀಗೇ ಸುತ್ತಾಡಿಕೊಂಡು ಬರೋಣ ಬಾ ಎಂದು ತನ್ನ ಜತೆ ನಾದಿನಿಯನ್ನು ಕರೆದೊಯ್ದಿದ್ದಾನೆ. ಆದರೆ ಹೊರಗೆ ಹೋಗದೆ ಮನೆಯ ಮಾಳಿಗೆಯ ಮೇಲೆ ಇಬ್ಬರೂ ಹೋಗಿದ್ದಾರೆ. ಅಲ್ಲಿ ಅಪ್ರಾಪ್ತ ವಯಸ್ಸಿನ ತನ್ನ ನಾದಿನಿಯ ಬಾಯಿಗೆ ಬಟ್ಟೆ ತುರುಕಿ, ವಿನೋದ್ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಅತ್ಯಾಚಾರ ನಡೆಸುವಾಗ ಆರೋಪಿಯು ಆಕೆಯ ಗುಪ್ತಾಂಗಗಳ ಮೇಲೆ ಸುಟ್ಟ ಗಾಯಗಳನ್ನೂ ಮಾಡಿದ್ದಾನೆ. ಕೆಲಸ ಮಸಯದ ಬಳಿಕ ಬಾಲಕಿಯನ್ನು ಆಕೆಯ ಮನೆಯಲ್ಲಿ ಬಿಟ್ಟ ವಿನೋದ್, ಅತ್ಯಾಚಾರ ಘಟನೆಯನ್ನು ಯಾರಿಗೂ ಹೇಳಬೇಡ ಎಂದು ತಾಕೀತು ಮಾಡಿದ್ದಾನೆ.
ಆದರೆ ತನ್ನ ಮನೆಗೆ ವಾಪಸಾದ ಭೂಪ ನಿನಗೆ ತಕ್ಕ ಪಾಠ ಕಲಿಸಲು ನಾದಿನಿಯ ಮೇಲೆ ಅತ್ಯಾಚಾರ ಮಾಡಿರುವುದಾಗಿ ಪತ್ನಿಗೆ ಹೇಳಿದ್ದಾನೆ. ಇದರಿಂದ ಕುಪಿತಗೊಂಡ ಪತ್ನಿ, ವಿನೋದ್ ನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಆದರೆ ವಿನೋದ್ ಅದು ಹೇಗೋ ತನ್ನ ಪತ್ನಿಯನ್ನು ಸಮಾಧಾನ ಪಡಿಸಿದ್ದಾನೆ.
ಆದರೆ ಘಟನೆಯ ನಂತರ ಮೊನ್ನೆ ವಿನೋದ್ ಮತ್ತೆ ತನ್ನ ಪತ್ನಿಯ ಜತೆ ಜಗಳ ಮಾಡಿಕೊಂಡಿದ್ದಾನೆ. ಡೈವೋರ್ಸ್ ನೀಡುವುದಾಗಿ ಪತ್ನಿಗೆ ಬೆದರಿಸುತ್ತಾ ಗುಜರಾತಿಗೆ ತೆರಳಿದ್ದಾನೆ. ಇದರಿಂದ ಆತಂಕಕ್ಕೀಡಾದ ಆ ಮಹಿಳೆ ಪೊಲೀಸರಿಗೆ ದೂರು ನೀಡಿ, ಅತ್ಯಾಚಾರ ಪ್ರಕರಣವನ್ನು ತಿಳಿಸಿದ್ದಾರೆ. ಆಗಲೇ ಬಾಧಿತ ಬಾಲಕಿಯ ಮನೆಯವರಿಗೆ ವಿಷಯ ತಿಳಿದುಬಂದಿದ್ದು. ತಕ್ಷಣ ಬಾಲಕಿಯನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗಿದೆ.












Click it and Unblock the Notifications