ಏರ್ ಇಂಡಿಯಾ 'ವಾರ್' ನಿಲ್ಲೋ ಹಾಗೆ ಕಾಣಲ್ಲ

ದಂಡಂ ದಶಗುಣಂ ಎಂಬಂತೆ ಏರ್ ಇಂಡಿಯಾ ತನ್ನ ಪೈಲಟ್ ಗಳನ್ನು ವಜಾ ಮಾಡುವುದರಲ್ಲೇ ಕಾಲದೂಡುತ್ತಿದೆ. ಶುಕ್ರವಾರ(ಮೇ.11) ಮತ್ತೊಮ್ಮೆ ಮುಷ್ಕರ ನಿರತ 25 ಪೈಲಟ್ ಗಳನ್ನು ವಜಾ ಮಾಡಿದೆ. ನಾಲ್ಕು ದಿನಗಳಲ್ಲಿ ಒಟ್ಟು 71 ಪೈಲಟ್ ಗಳು ವಜಾಗೊಂಡಿದ್ದಾರೆ. ಕೆಲಸ ಕಳೆದುಕೊಂಡಿರುವ ಜೊತೆಗೆ ಅವರ ಹಾರಾಟ ಲೈಸನ್ಸ್ ಕೂಡಾ ರದ್ದು ಮಾಡಿ ನಾಗರಿಕ ವಿಮಾನಯಾನ ಇಲಾಖೆ ಆದೇಶ ಹೊರಡಿಸಿದೆ.
ಪ್ರಯಾಣಿಕರಿಗೆ ಸೂಚನೆ: ಮುಂಬೈ ಇಂದ ನ್ಯೂ ಜೆರ್ಸಿ, ನವದೆಹಲಿ ಇಂದ ಚಿಕಾಗೋ, ನವದೆಹಲಿ ಇಂದ ಟೊರೋಂಟೋಗೆ ತೆರಳಬೇಕಿದ್ದ ವಿಮಾನಗಳನ್ನು ರದ್ದುಪಡಿಸಲಾಗಿದೆ.
ಇನ್ನಷ್ಟು ತೊಂದರೆ?: ಪೈಲಟ್ ಗಳ ನಂತರ ಭೂ ಸಿಬ್ಬಂದಿ ಹಾಗೂ ಲೋಡರ್ ಗಳು ಕೂಡ ಮುಷ್ಕರಕ್ಕೆಇಳಿಯುವ ಸಾಧ್ಯತೆ ಹೆಚ್ಚಾಗಿದೆ. 100ಕ್ಕೂ ಅಧಿಕ ಪೈಲಟ್ ಗಳ ಮುಷ್ಕರದಿಂದ ಲಾಭ ಪಡೆದಿರುವ ಖಾಸಗಿ ವಿಮಾನಯಾನ ಸಂಸ್ಥೆಗಳು ಶೇ 20 ರಷ್ಟು ಪ್ರಯಾಣ ದರವನ್ನು ಏರಿಕೆ ಮಾಡಿ ಲಾಭ ಮಾಡುತ್ತಿದೆ.
ಇತರೆ ಏರ್ ಲೈನ್ಸ್ ಸಂಸ್ಥೆಗಳು ಲಾಭ ಮಾಡಿಕೊಳ್ಳುವುದನ್ನು ತಪ್ಪಿಸಿ, ಪ್ರಯಾಣಿಕರಿಗೆ ಸರಿಯಾದ ಸೇವೆ ಒದಗಿಸಿ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಕೇಂದ್ರ ವಿಮಾನಯಾನ ಸಚಿವ ಅಜಿತ್ ಸಿಂಗ್ ಗೆ ಸೂಚಿಸಿದ್ದಾರೆ. ಆದರೆ, ಇನ್ನೂ ಏನು ಪ್ರಯೋಜನವಾಗಿಲ್ಲ.











Click it and Unblock the Notifications