ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮಘಟ್ಟ ಕಾರ್ಯಪಡೆಗೆ ಅರಣ್ಯ ಸಿಬ್ಬಂದಿ ನೇಮಕ

By Srinath
|
Google Oneindia Kannada News

western-ghats-task-force-forest-staff-jobs
ದಾವಣಗೆರೆ, ಮೇ 12: ಪಶ್ಚಿಮಘಟ್ಟದಲ್ಲಿ ಅರಣ್ಯ ಸಂಪತ್ತನ್ನು ರಕ್ಷಿಸುವ ಸಲುವಾಗಿ ಕಾವಲು ಸಿಬ್ಬಂದಿ ಅಗತ್ಯವಾಗಿದೆ. ಆದ್ದರಿಂದ ಕನಿಷ್ಠ 1,000 ಮಂದಿ ನೇಮಕಕ್ಕೆ ಅನುಮತಿ ಕೋರಿ ಪಶ್ಚಿಮಘಟ್ಟ ಕಾರ್ಯಪಡೆಯು ಸರಕಾರಕ್ಕೆ ಕಳೆದ ವಾರ ಪ್ರಸ್ತಾವನೆ ಸಲ್ಲಿಸಿದೆ. ಅರಣ್ಯ ಗಾರ್ಡುಗಳು, ಅರಣ್ಯ ಅಧಿಕಾರಿಗಳು ಮತ್ತು ಅರಣ್ಯ ಸಂರಕ್ಷರು ಹೀಗೆ ನಾನಾ ವಿಧದ ಸಿಬ್ಬಂದಿ ನೇಮಕವಾಗಲಿದೆ.

ಸ್ಥಳೀಯ ಜನರು ಮತ್ತು ಅರಣ್ಯ ಸಿಬ್ಬಂದಿಯನ್ನು ಬಳಸಿಕೊಂಡು ವೈಜ್ಞಾನಿಕವಾಗಿ ಅರಣ್ಯ ಸಂಪತ್ತನ್ನು ರಕ್ಷಿಸಲು ಈ ಕಾರ್ಯಪಡೆಯನ್ನು 2008ರಲ್ಲಿ ರಚಿಸಲಾಗಿದೆ. ಮೊದಲ ಘಟ್ಟದಲ್ಲಿ ಸಾವಿರ ಮಂದಿಯ ನೇಮಕವಾಗಿದೆ. ಈಗ ಮತ್ತೊಂದು ಸುತ್ತಿನ ನೇಮಕ ನಡೆದಿದ್ದು, ಮತ್ತೆ ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳಲಿದ್ದೇವೆ ಎಂದು ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ 4,500 ಗ್ರಾಮ ಅರಣ್ಯ ಸಮಿತಿಗಳು (VFCs) ಇವೆ. ಇದರಲ್ಲಿ ಕೇವಲ 1,000 VFCಗಳೂ ಸಕ್ರಿಯವಾಗಿವೆ. ಉಳಿದವುಗಳನ್ನು ಕ್ರಿಯಾಶೀಲಗೊಳಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಅನಂತ ಹೆಗಡೆ ಹೇಳಿದ್ದಾರೆ. ರಾಜ್ಯದ ಪಶ್ಚಿಮಘಟ್ಟಗಳನ್ನು ಉಳಿಸಿ, ಬೆಳಸಲು ಸಮಗ್ರ ಕಾರ್ಯಯೋಜನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದೂ ಅವರು ಹೇಳಿದರು.

ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಶ್ರೀಗಂಧದ ಸಸಿಗಳನ್ನು ವಿತರಿಸಿ, ಗಂಧದ ನಾಡನ್ನು ಉಳಿಸಿ, ಬೆಳಸುವಂತೆ ಅಧ್ಯಕ್ಷ ಅನಂತ ಹೆಗಡೆ ಅವರು ಅರಣ್ಯ ಇಲಾಖೆಯನ್ನು ಇದೇ ವೇಳೆ ಕೋರಿದ್ದಾರೆ.

English summary
The Western Ghats Task Force is to recruit 1,000 forest personnel required to protect the natural forests of the Western Ghats sasys Ananth Hegde Ashisara, chairperson of the Task Force.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X