ಗಣಿ ಗುತ್ತಿಗೆ, ಗಾಲಿ ರೆಡ್ಡಿಗೆ ಮಾತ್ರ ಉರುಳು ಏಕೆ?

2008 ರಿಂದ 2010 ಅವಧಿಯಲ್ಲಿ 15ಕ್ಕೂ ಅಧಿಕ ಗಣಿ ಗುತ್ತಿಗೆ ಸಂಸ್ಥೆಗಳನ್ನು ಗಾಲಿ ರೆಡ್ಡಿ ಪೀಡಿಸಿ ಹಣ ಸಂಗ್ರಹಿಸಿದ ಬಗ್ಗೆ ಸಮಗ್ರ ಮಾಹಿತಿಯನ್ನು ಸಿಬಿಐ ಕಲೆ ಹಾಕಿದೆ. ಆದರೆ, ಚಾರ್ಜ್ ಶೀಟ್ ನಲ್ಲಿ 15 ಕಂಪನಿಯ ಯಾವೊಬ್ಬ ಅಧಿಕಾರಿಯ ಹೆಸರನ್ನು ನಮೂದಿಸದಿರಲು ಸಿಬಿಐ ನಿರ್ಧರಿಸಿದೆ.
ಅಕ್ರಮದ ಮೊತ್ತ ಇಲ್ಲಿದೆ: ಮೇಲ್ಕಂಡ ಅವಧಿಯಲ್ಲಿ ಸುಮಾರು 2,000 ಕೋಟಿ ರು.ಗೂ ಅಧಿಕ ಮೊತ್ತದ 45 ಲಕ್ಷ ಟನ್ ಗಳಷ್ಟು ಕಬ್ಬಿಣ ಅದಿರನ್ನು ಅಕ್ರಮವಾಗಿ ರಫ್ತು ಮಾಡಲಾಗಿದೆ.
ಗಾಲಿ ರೆಡ್ಡಿ ಒಡೆತನದ ಎಎಂಸಿ ಕಂಪನಿ ಎತ್ತಿರುವ ಅದಿರಿನ ಪ್ರಮಾಣವನ್ನು ಅಳೆಯಲು ಲೇಸರ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಸಂಗ್ರಹಿತ ಪ್ರಮಾಣಕ್ಕೂ ಸಂಸ್ಥೆ ತೋರಿಸಿದ ಲೆಕ್ಕಕ್ಕೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ.
ವಿವಾದಿತ ಭೂಮಿಯನ್ನು ಒತ್ತುವರಿ ಮಾಡಿಕೊಂಡು, ನಿರ್ಬಂಧಕ್ಕೆ ಒಳಗಾದ ದಾಲ್ಮಿಯಾ ಮೈನ್ಸ್ ಬಳಸಿಕೊಂಡು ಹಾಗೂ 15 ಮೈನಿಂಗ್ ಲೀಸ್ ಕಂಪನಿ ಗಳನ್ನು ಬೆದರಿಸಿ 1,700 ಕೋಟಿ ರು. ಮೌಲ್ಯದ 32.9 ಲಕ್ಷ ಟನ್ ಕಬ್ಬಿಣ ಅದಿರು ರೆಡ್ಡಿ ಕಂಪನಿ ಸಂಗ್ರಹಿಸಿತ್ತು ಎಂಬ ಲೆಕ್ಕ ಸಿಕ್ಕಿದೆ.
ರೆಡ್ಡಿ ಜೊತೆ ಒಪ್ಪಂದ ಮಾಡಿಕೊಂಡಿದ್ದ ಈ 15 ಕಂಪನಿಗಳಿಗೆ ಸರಿಯಾಗಿ ಹಣ ಸಂದಾಯವಾಗಿಲ್ಲ. ಈ ಕಂಪನಿಗಳನ್ನು ಬಳಸಿಕೊಂಡು ರೆಡ್ಡಿ ಅಕ್ರಮ ಎಸೆಗಿದ್ದಾನೆ. ಆದರೆ, ಈ ಕಂಪನಿಗಳು ನೇರವಾಗಿ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಸಿಬಿಐ ಅಭಿಪ್ರಾಯಪಟ್ಟಿದೆ. ಸುಪ್ರೀಂಕೋರ್ಟ್ ಆದೇಶದಂತೆ ಸೆಪ್ಟೆಂಬರ್ 2011ರ ನಂತರ ರೆಡ್ಡಿ ಕಂಪನಿ ನಡೆಸಿದ ಅಕ್ರಮದ ಬಗ್ಗೆ ಸಿಬಿಐ ತನಿಖೆ ನಡೆದಿದೆ. ಆದರೆ, ಆ ವೇಳೆಗಾಗಲೇ ಕರ್ನಾಟದಲ್ಲಿ ಅದಿರು ರಫ್ತು ನಿಷೇಧವಾಗಿತ್ತು ಎಂಬುದು ಗಮರ್ನಾಹ ಸಂಗತಿ.












Click it and Unblock the Notifications