• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಪ್ರೀಂ ಸಂತಸ ತಂದಿದೆ: ದೂರುದಾರ ಹಿರೇಮಠ್

By Srinath
|
ನವದೆಹಲಿ, ಮೇ 11: ಇಡೀ ಪ್ರಕರಣದಲ್ಲಿ ನಿರ್ಣಾಯಕ ಪಾತ್ರವಹಿಸಿರುವ ದೂರುದಾರ ಎಸ್ ಆರ್ ಹಿರೇಮಠ್ ಅವರು ಪ್ರಸ್ತುತ ಅಮೆರಿಕದಲ್ಲಿದ್ದು, ತೀರ್ಪಿನ ಬಗ್ಗೆ TV9 ಗೆ ಪ್ರತಿಕ್ರಿಯೆ ನೀಡಿದ್ದಾರೆ. ತೀರ್ಪು ಅತೀವ ಸಂತಸ ತಂದಿದೆ ಎಂದಿರುವ ಹಿರೇಮಠ ಅವರು ಅನ್ಯಾಯದ ವಿರುದ್ಧ ತಮ್ಮ ಹೋರಾಟ ಇನ್ನೂ ಮುಗಿದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಹೋರಾಡುವುದಾಗಿ ಹೇಳಿದ್ದಾರೆ.

'ನೈಸರ್ಗಿಕ ಸಂಪತ್ತನ್ನು ಪ್ರಭಾವಿ ವ್ಯಕ್ತಿಗಳು ಲೂಟಿ ಮಾಡುವುದರ ವಿರುದ್ಧ ಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳುವವರಿಗೆ ಇದು ತಕ್ಕ ಪಾಠವಾಗಿದೆ. ಮುಂದಿನ ಪೀಳಿಗೆಯ ಜನಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ಶ್ರಮಿಸುತ್ತಿದ್ದೇನೆ. ಸಮಾಜದ ಸ್ವಾಸ್ಥ ಕಾಪಾಡಲು ನಡೆಸುತ್ತಿರುವ ಹೋರಾಟಕ್ಕೆ ಸಿಕ್ಕಿದ ಜಯವಾಗಿದೆ' ಎಂದು ಧಾರವಾಡದ ಸಮಾಜ ಪರಿರ್ತನಾ ಸಂಸ್ಥೆ ಮುಖ್ಯಸ್ಥರೂ ಆದ ವಕೀಲ ಹಿರೇಮಠ ಅವರು ಹೇಳಿದ್ದಾರೆ.

ತಾವು ಯಾವುದೇ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಸುಪ್ರೀಂಕೋರ್ಟ್ ಗೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಮಾಜಿ ಸಿಎಂಗಳ ವಿರುದ್ಧವೂ ಇಂತಹುದೇ ಪ್ರಕರಣಗಳು ಸುಪ್ರೀಂಕೋರ್ಟ್ ಮುಂದೆ ಇವೆ ಎಂದರು.

ಸವಿಸ್ತಾರ ತನಿಖೆ: 'ಗಣಿ ಲಂಚ ಮತ್ತು ಡಿನೋಟಿಫಿಕಶನ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಯಡಿಯೂರಪ್ಪ ಮತ್ತು ಅವರ ಸಂಬಂಧಿಗಳ ವಿರುದ್ಧ ಸಮಗ್ರ ತನಿಖೆಯಾಗಲಿ. ತನಿಖೆಯ ಪ್ರಾಥಮಿಕ ವರದಿಯನ್ನು ಆಗಸ್ಟ್ 3ರ ಒಳಗೆ ಸಲ್ಲಿಸುವಂತೆ ಸಿಬಿಐಗೆ ಕೋರ್ಟ್ ಆದೇಶಿಸಿದೆ. ಪ್ರಕರಣದ ವಿಚಾರಣೆಗಾಗಿ CEC ಸಲ್ಲಿಸಿರುವ ಮಾಹಿತಿಯನ್ನೂ ಗಣನೆಗೆ ತೆಗೆದುಕೊಳ್ಳುವಂತೆ ಸಿಬಿಐಗೆ ಸೂಚಿಸಿದೆ' ಎಂದು ಪ್ರಶಾಂತ್ ಭೂಷಣ್ ತೀರ್ಪಿನ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಯಡಿಯೂರಪ್ಪ ಸುದ್ದಿಗಳುView All

English summary
Supreme Court on Friday ordered CBI Inquiry against ex-CM of Karnataka BS Yeddyurappa. The court upheld CEC recommendation to bring the former CMs shady deals under CBI scanner. petitioner SR Hiremath from Samaja Parivarthan Samudaya (SPS) says he is very happy about the SC orders.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more