ಸಿಎಂ ಜಯಲಲಿತಾಗೆ ಜೀವ ಬೆದರಿಕೆ ಇಮೇಲ್
ಚೆನ್ನೈ,
ಮೇ.10: ತಮಿಳುನಾಡು ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಅಧಿನಾಯಕಿ ಜಯಲಲಿತಾ ಅವರಿಗೆ ಜೀವ ಬೆದರಿಕೆ ಇಮೇಲ್ ಬಂದಿದೆ. ಇಮೇಲ್ ಕಳಿಸಿದ್ದು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ, ಜಯಲಲಿತಾ ಅವರಿಗೆ ನೀಡಿರುವ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದ್ದಾರೆ. id="toptextpromo">ಮುಖ್ಯಮಂತ್ರಿ
ಜಯಲಲಿತಾ ಅಲ್ಲದೆ ಹಲವು ಕ್ಯಾಬಿನೆಟ್ ಸಚಿವರುಗಳಿಗೂ ಬೆದರಿಕೆ ಇಮೇಲ್ ಬಂದಿದೆ. ಮೇ 9 ಏಕಕಾಲಕ್ಕೆ ಇಮೇಲ್ ಬಂದಿದ್ದು, ಮೊದಲಿಗೆ ಅಯರೋ ಹುಡುಗಾಟಕ್ಕೆ ಕಳಿಸಿರಬಹುದು ಎಂದು ಊಹಿಸಲಾಗಿತ್ತು. ಅದರೆ, ವಿಷಯ ತುಂಬಾ ಗಂಭೀರವಾಗಿದೆ. ಬೆದರಿಕೆ ಬಂದವರಿಗೆಲ್ಲ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಚಿಲ್ಲರೆ
ವ್ಯಾಪಾರಿಗಳ ಪರ ನಿಂತಿದ್ದ ಜಯಲಲಿತಾ ಅವರು ವಿದೇಶಿ ನೇರ ಬಂಡವಾಳ ಹೂಡಿಕೆ ವಿರುದ್ಧ ಪ್ರತಿಭಟಿಸಿದ್ದರು. ಜಯಲಲಿತಾ ನಿಲುವಿನ ವಿರುದ್ಧ ತಮಿಳುನಾಡಿನ ಉದ್ದಿಮೆಯಲ್ಲಿ ಅಪಸ್ವರ ಕೇಳಿ ಬಂದಿತ್ತು. ಉಳಿದಂತೆ, ಜಯಲಲಿತಾ, ನರೇಂದ್ರ ಮೋದಿ ಸೇರಿದಂತೆ ದೇಶದ ಪ್ರಮುಖ ನಾಯಕರ ಮೇಲೆ ಉಗ್ರರು ಕಣ್ಣಿಟ್ಟಿರುವ ವಿಷಯವನ್ನು ಗುಪ್ತಚರ ಇಲಾಖೆ ಬಹಿರಂಗ ಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.











Click it and Unblock the Notifications