ವಿಶ್ವದ 4ನೇ ಟಾಪ್ IT ಕಂಪನಿಯಾದ ಟಿಸಿಎಸ್

TCS
ಬೆಂಗಳೂರು, ಮೇ.9: 10 ಬಿಲಿಯನ್ ಡಾಲರ್ ಆದಾಯ ಗಳಿಸಿದ ಪ್ರಪ್ರಥಮ ಭಾರತೀಯ ಸಾಫ್ಟ್ ವೇರ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಈಗ ಜಾಗತಿಕವಾಗಿ ನಾಲ್ಕನೇ ಅತಿ ಮೌಲ್ಯ ಹೊಂದಿರುವ ಐಟಿ ಕಂಪನಿಯಾಗಿ ಹೊರಹೊಮ್ಮಿದೆ.

ಐಬಿಎಂ, ಎಚ್ ಪಿ ಹಾಗೂ ಆಕ್ಸೆಂಚರ್ ನಂತರ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಅತಿ ಹೆಚ್ಚು ಮೌಲ್ಯ ಹೊಂದಿರುವ ಕಂಪನಿಯಾಗಿದೆ ಎಂದು ಜಾಗತಿಕ ಬ್ರ್ಯಾಂಡ್ ಮೌಲ್ಯಮಾಪನ ಸಂಸ್ಥೆ ಬ್ರಾಂಡ್ ಫೈನಾನ್ಸ್ ಪ್ರಕಟಿಸಿದೆ.

ಕಳೆದ ಮೂರು ವರ್ಷಗಳಲ್ಲಿ ಟಿಸಿಎಸ್ ಮೌಲ್ಯ ಪ್ರಗತಿ ಕಂಡಿದೆ. ಜಾಗತಿಕ ಬ್ರ್ಯಾಂಡ್ ಆಗಿ ಟಿಸಿಎಸ್ 2012ರಲ್ಲಿ ಇನ್ನಷ್ಟು ಪ್ರಗತಿ ಕಾಣುವ ಸಾಧ್ಯತೆಯಿದೆ ಎಂದು ಬ್ರಾಂಡ್ ಫೈನಾನ್ಸ್ ನ ಸಿಇಒ ಡೇವಿಡ್ ಹೈಗ್ ಹೇಳಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಟಿಸಿಎಸ್ ಹೊಂದಿರುವ ಸಂಪರ್ಕ, ಪ್ರಮುಖ ಕ್ರೀಡಾಕೂಟಗಳಿಗೆ ಪ್ರಾಯೋಜಕತ್ವ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳು ಇತ್ಯಾದಿ ಅಂಶಗಳನ್ನು ಪರಿಗಣಿಸಿ ಶ್ರೇಯಾಂಕ ನೀಡಲಾಗಿದೆ.

ಕಳೆದ ಐದು ವರ್ಷಗಳಲ್ಲಿ ಫಾರ್ಮೂಲ ಒನ್ ರೇಸಿಂಗ್, ಪ್ರೊಫೆಷನಲ್ ಸೈಕಲಿಂಗ್, ಕ್ರಿಕೆಟ್ ಹಾಗೂ ಅಥ್ಲೆಟಿಕ್ಸ್ ಅಲ್ಲದೆ ಆರೋಗ್ಯ ಸುಧಾರಣೆ, ಪರಿಸರ ರಕ್ಷಣೆ ಮುಂತಾದ ಸಾಮಾಜಿಕ ಕಾರ್ಯಕ್ರಮಗಳಿಗೆ ಟಿಸಿಎಸ್ ಉತ್ತಮ ಪ್ರೋತ್ಸಾಹ ನೀಡಿದೆ. ಜಾಗತಿಕ ಮನ್ನಣೆಯ ಪೂರ್ಣ ಶ್ರೇಯಸ್ಸು ನಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಸಲ್ಲಬೇಕು ಎಂದು ಸಿಇಒ ಎನ್ ಚಂದ್ರಶೇಖರನ್ ಸಂತಸದಿಂದ ಹೇಳಿದ್ದಾರೆ.

ಜಾಗತಿಕವಾಗಿ ಐಬಿಎಂ, ಐಬಿಎಂ, ಎಚ್ ಪಿ ಹಾಗೂ ಆಕ್ಸೆಂಚರ್ ನಂತರ ಟಿಸಿಎಸ್ ನಿಂತಿದೆ. ನಂತರದ ಸ್ಥಾನದಲ್ಲಿ ಭಾರತದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ಇದೆ. ಕಾಂಗ್ನಿಜೆಂಟ್ 9 ಹಾಗೂ ವಿಪ್ರೋ 10 ಸ್ಥಾನ ಪಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+