• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗನ್ ತೋರಿಸಿ ಚಿನ್ನದ ಅಂಗಡಿಗೆ ಗುನ್ನಾ

By Srinath
|
ನವದೆಹಲಿ, ಮೇ 9: ಪಶ್ಚಿಮ ದೆಹಲಿಯಲ್ಲಿ ಚಿನ್ನಾಭರಣ ಅಂಗಡಿಯ ಮಾಲೀಕರಿಗೆ ಗನ್ ತೋರಿಸಿ ಇಬ್ಬರು ದುಷ್ಕರ್ಮಿಗಳು ಲಕ್ಷಾಂತರ ರುಪಾಯಿ ಮೌಲ್ಯದ ಆಭರಣ ದೋಚಿದ್ದಾರೆ.

ಗ್ರಾಹಕರಂತೆ ಅಂಗಡಿಯೊಳಕ್ಕೆ ನುಸುಳಿದ ಇಬ್ಬರು ಯುವಕರು ಮಂಗಳವಾರ ಸಂಜೆ ನಾಲ್ಕು ಗಂಟೆಯಲ್ಲಿ ಈ ಕುಕೃತ್ಯವೆಸಗಿದ್ದಾರೆ. ಖಾಯಲಾ ಪ್ರದೇಶದ ರಘುಬೀರ್ ನಗರದ ಶಿವಾಜಿ ಮಾರುಕಟ್ಟೆಯಲ್ಲಿ ಲುಥ್ರಾ ಜ್ಯೂವೆಲ್ಲರ್ಸ್ ಅಂಗಡಿಯಲ್ಲಿ ಈ ದರೋಡೆ ನಡೆದಿದೆ. ದರೋಡೆಕೋರನ್ನು ಸೆರೆಹಿಡಿಯಲು ಅಂಗಡಿಯಲ್ಲಿದ್ದ CCTVಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

'ಆಗುಂತಕರು ಒಳನುಗ್ಗಿದಾಗ ಅಂಗಡಿಯ ಮಾಲೀಕ ಮತ್ತು ಸಹಾಯಕ ಮಾತ್ರ ಇದ್ದರು. ಏಳು ಟ್ರೇ ಗಳಲ್ಲಿದ್ದ ಆಭರಣಗಳನ್ನು ದುಷ್ಕರ್ಮಿಗಳು ದೋಚಿದ್ದಾರೆ. ಕಿವಿಯೋಲೆ ಮತ್ತಿತರ ಆಭರಣಗಳು ಅವುಗಳಲ್ಲಿದ್ದವು. ಆದರೆ ದೊಡ್ಡ ಗಾತ್ರ ಆಭರಣಗಳನ್ನು ದೋಚುವ ಪ್ರಯತ್ನ ಮಾಡಿಲ್ಲ. ಕೈಗೆ ಸಿಕ್ಕಿದ ಸಣ್ಣಪುಟ್ಟ ಆಭರಣಗಳನ್ನು ಒಯ್ದಿದ್ದಾರೆ' ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಂಗನಾಥನ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಚಿನ್ನ ಸುದ್ದಿಗಳುView All

English summary
Two men in their early 30s robbed jewellery worth lakhs of rupees from Luthra Jewellers Showroom situated at Shivaji Market in Raghubir Nagar in Khayala area after holding the owners of the shop at gunpoint. Police have recovered the footage captured by the CCTV.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more