ಲಿಂಗ ಪರಿವರ್ತನೆಗೆ ಅನುಮತಿ ನೀಡಿದ ಹೈಕೋರ್ಟ್

ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಆಕ್ಷೇಪಣೆಯಿಲ್ಲ. ಯಾವ ಕಾನೂನು ಕೂಡ ಇದಕ್ಕೆ ತಡೆ ನೀಡುವುದಿಲ್ಲ. ಅಲ್ಲದೆ, ಅರ್ಜಿ ಸಲ್ಲಿಸಿರುವ ಭಿದನ್ 21 ವರ್ಷದವನಾಗಿದ್ದು, ಸ್ವಂತ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರನಾಗಿದ್ದಾನೆ ಎಂದು ನ್ಯಾ. ಎಸ್.ಜೆ. ವಜಿಫ್ದಾರ್ ಮತ್ತು ನ್ಯಾ. ಎ.ಆರ್. ಜೋಶಿ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೇಂದ್ರ ಸರಕಾರದ ಪರ ವಹಿಸಿದ್ದ ವಕೀಲ ಅದ್ವೈತ್ ಸೇತ್ನಾ ಮತ್ತು ರಾಜ್ಯ ಸರಕಾರದ ವಕೀಲ ಮಧು ರಜಾಳೆ ಅವರು, ಭಿದನ್ ಪುರುಷತ್ವ ಕಳೆದುಕೊಳ್ಳಲು ನಿರ್ಧರಿಸಿರುವ ಬಗ್ಗೆ ತಮ್ಮ ಸರಕಾರಕ್ಕೆ ಆಕ್ಷೇಪಣೆಯಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಭಿದನ್ ಲಿಂಗ ಪರಿವರ್ತನೆ ಮಾಡಿಕೊಳ್ಳಲು ಆತನ ಪಾಲಕರು ಸರ್ವಥಾ ಒಪ್ಪುತ್ತಿಲ್ಲ. ಆತನಿಗೆ ಬೆದರಿಕೆ ಕೂಡ ಒಡ್ಡುತ್ತಿದ್ದಾರೆ. ಅರ್ಜಿಯಲ್ಲಿ ತಾನೊಬ್ಬ ಪುರುಷನ ದೇಹದಲ್ಲಿ ಅಡಗಿರುವಂತಹ ಹೆಣ್ಣೆಂದು ಹೇಳಿರುವ ಭಿದನ್, ಪಾಲಕರು ತಡೆಯೊಡ್ಡದಂತೆ ಆದೇಶಿಸಬೇಕೆಂದು ಕೋರಿದ್ದಾನೆ. ಧಮಕಿ ನೀಡಿರುವ ಬಗ್ಗೆ ಕೊಲಾಬ್ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕೆಂದು ಭಿದನ್‌ಗೆ ನ್ಯಾಯಾಲಯ ತಿಳಿಸಿದೆ.












Click it and Unblock the Notifications