ಬಾಬ್ರಿ ಕೇಸ್ : ಕೋರ್ಟ್ ಕಟಕಟೆಗೆ ಎಲ್ ಕೆ ಅಡ್ವಾಣಿ?

ಬಾಬ್ರಿ ಮಸೀದಿ ಪ್ರಕರಣದಲ್ಲಿ ನೇರ ಆರೋಪಿಗಳಾಗಿಲ್ಲ ಎಂದು ಹಲವರನ್ನು ಕೈ ಬಿಡಲ್ಲ ಸಾಧ್ಯವಿಲ್ಲ. ಮಸೀದಿ ಸಂಚು, ಪ್ರಚೋದನಕಾರಿ ಭಾಷಣ ಮಾಡಿದ ಎಲ್ಲರೂ ಪ್ರಕರಣದ ಆರೋಪಿಗಳಾಗಿ ಪರಿಗಣಿಸಬೇಕು ಎಂದು ಸಿಬಿಐ ತನ್ನ ಅಫಿಡವಿಟ್ ನಲ್ಲಿ ಹೇಳಿದೆ.
FIR ಸಂಖ್ಯೆ 198/92 ನಲ್ಲಿ ಎಲ್ ಕೆ ಅಡ್ವಾಣಿ, ಉಮಾ ಭಾರತಿ, ಮುರಳಿ ಮನೋಹರ್ ಜೋಶಿ, ಸಾಧ್ವಿ ರಿತಾಂಬರ, ಗಿರಿರಾಜ್ ಕಿಶೋರ್, ಅಶೋಕ್ ಸಿಂಘಾಲ್, ವಿನಯ್ ಕಟಿಯಾರ್, ವಿಷ್ಣು ಹರಿ ದಾಲ್ಮಿಯಾ ಅವರ ಹೆಸರು ಸೇರಿಸಲಾಗಿದೆ. ಎಲ್ಲರ ಮೇಲೂ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಹೊರೆಸಲಾಗಿದೆ. FIR ಸಂಖ್ಯೆ 197/92 ನಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಕರ ಸೇವಕರ ಹೆಸರುಗಳು ನಮೂದಾಗಿದೆ.
197/92 ಹಾಗೂ 198/92 ಎಫ್ ಐಆರ್ ಒಂದೇ ಪ್ರಕರಣಕ್ಕೆ ಸೇರಿದೆ. ಬಾಬ್ರಿ ಮಸೀದಿ ಸಂಚಿನ ಹಿಂದಿರುವ ಶಕ್ತಿಗಳಿಗೆ ಶಿಕ್ಷೆಯಾಗಬೇಕಿದೆ ಎಂದು ಸಿಬಿಐ ಹೇಳಿದೆ.
ಎಲ್ ಕೆ ಅಡ್ವಾಣಿ ಹಾಗೂ ಇತರೆ ಪ್ರಮುಖ ಆರೋಪಿಗಳ ಹೆಸರನ್ನು ತೆಗೆದುಹಾಕಿದ 2001ರ ಹೈಕೋರ್ಟ್ ತೀರ್ಪನ್ನು ಸಿಬಿಐ ಪ್ರಶ್ನಿಸಿದೆ. ಡಿ.6,1992ರ ಕೃತ್ಯಕ್ಕೆ ಅಡ್ವಾಣಿ, ಬಾಳಾ ಠಾಕ್ರೆ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿದ್ದರು ಎಂದು ಸಿಬಿಐ ಪುನರುಚ್ಚರಿಸಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications