ಚಿನ್ನಾಭರಣ ಖರೀದಿ ತೆರಿಗೆ ಮಿತಿ ಹೆಚ್ಚಳ: ಪ್ರಣಬ್

ಬ್ರಾಂಡೆಡ್ ಆಭರಣಗಳ ಮೇಲೆ ಶೇ 1 ರಷ್ಟು ಅಬಕಾರಿ ಸುಂಕ ವಿಧಿಸಲಾಗಿತ್ತು. 2012-13 ಕೇಂದ್ರ ಬಜೆಟ್ ನಲ್ಲಿ ಈ ಸುಂಕ ಪ್ರಮಾಣವನ್ನು ಎಲ್ಲಾ ಬಗೆಯ ಆಭರಣ ಖರೀದಿಗೂ ವಿಸ್ತರಿಸಲಾಗಿತ್ತು. ಇದರಿಂದ ಆಭರಣ ಅಂಗಡಿಗಳಿಗೆ ಭಾರಿ ಹೊಡೆತ ಬಿದ್ದಿತ್ತು.
ಸುಂಕ ಹೇರಿಕೆ ವಿರೋಧಿಸಿ ದೇಶದಾದ್ಯಂತ ಚಿನ್ನದ ವರ್ತಕರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಚುರುಕು ಮುಟ್ಟಿಸಿದ್ದರು. ಈಗ ತೆರಿಗೆ ಹೇರಿಕೆ ಹಿಂಪಡೆದಿರುವುದರಿಂದ ವರ್ತಕರು ಸಂತಸಪಟ್ಟಿದ್ದಾರೆ.
Multi Commodity Exchange (MCX)ನಲ್ಲಿ ಮಧ್ಯಾಹ್ನ 10 ಗ್ರಾಂಗೆ 28,946.00 ನಷ್ಟಿದೆ. ದಿನದ ಆರಂಭದಲ್ಲಿ 29,167ರು ನಷ್ಟಿತ್ತು.
ಬೆಳ್ಳಿ ಬೆಲೆ ಪ್ರತಿ ಕೆ.ಜಿಗೆ 56,511 ರು ನಷ್ಟಿದೆ. ದಿನದ ಆರಂಭದಲ್ಲಿ 56,091 ರು.ನಷ್ಟಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ 1,640 ಡಾಲರ್ ನಷ್ಟಿದೆ.












Click it and Unblock the Notifications