ಸದಾ ಕ್ಯಾಬಿನೆಟ್: 11 ಮಂದಿಗೆ ಮಾತ್ರ ಅದೃಷ್ಟ?

11 ಮಂದಿ ಸಂಭವನೀಯ ಸಚಿವರ ಪಟ್ಟಿಯನ್ನು ವರಿಷ್ಠರಿಗೆ ಸಲ್ಲಿಸಲಾಗಿದೆ. ತಮ್ಮ ಬಳಿ 20ಕ್ಕೂ ಹೆಚ್ಚು ಖಾತೆಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ.ಈ ಹಿನ್ನೆಲೆಯಲ್ಲಿ ಆದಷ್ಟು ಬೇಗನೆ ಅದನ್ನು ಖಾತೆ ಹಂಚಿಕೆ ಮಾಡಲಾಗುವುದು ಎಂದು ಡಿವಿ ಸದಾನಂದ ಗೌಡ ಹೇಳಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಮುಂದಿನ ವಾರ ಸದಾನಂದ ಗೌಡ ಹಾಗೂ ಈಶ್ವರಪ್ಪ ಅವರು ಮತ್ತೊಮ್ಮೆ ನವದೆಹಲಿಗೆ ಹೋಗಲಿದ್ದಾರೆ. ಯಡಿಯೂರಪ್ಪ ಅವರ ಗಣಿ ಅಕ್ರಮ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ನೀಡುವ ತೀರ್ಪು ಹೊರಬೀಳುವ ತನಕ ಕಾಯಬೇಕಾಗಿಲ್ಲ ಎಂದು ಸದಾನಂದ ಗೌಡರು ಸ್ಪಷ್ಟಪಡಿಸಿದ್ದಾರೆ.
11 ಮಂದಿ ಸಚಿವರ ಸಂಭವನೀಯ ಪಟ್ಟಿಯನ್ನು ಅಂತಿಮಗೊಳಿಸಿ, ಸಂಪುಟ ವಿಸ್ತರಣೆ ದಿನಾಂಕ ನಿಗದಿಪಡಿಸುತ್ತಾರೆ ಎನ್ನಲಾಗಿದೆ. ಆದರೆ, 20 ಖಾತೆಗಳಲ್ಲಿ 11 ಮಂದಿಗೆ ಮಾತ್ರ ಅದೃಷ್ಟ ಸಿಗುವುದಾದರೆ ಉಳಿದವರ ಪಾಡೇನು? ಉಳಿದ ಖಾತೆಗಳಿಗೆ ಹೊಸಬರ ಬದಲಿಗೆ ಹಳೆಬರ ಖಾತೆ ಹಂಚಿಕೆ ಮಾಡಲಾಗುವುದೇ? ಕಾದು ನೋಡಬೇಕಿದೆ.












Click it and Unblock the Notifications