ಯಡ್ಡಿ ಅಂದ್ರೆ ಗುದ್ದಿಬಿಡ್ತೀನಿ ಎಂದ ಹಸನ್ಮುಖಿ ಬಿಎಸ್ ವೈ

ತವರೂರು ಶಿಕಾರಿಪುರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಬಂದಿದ್ದ ಯಡಿಯೂರಪ್ಪ ಅವರು ಇದ್ದಕ್ಕಿದ್ದಂತೆ ಮಾಧ್ಯಮ ಮಿತ್ರರತ್ತ ತಿರುಗಿ, 'ನೋಡಿ ನಮ್ಮಪ್ಪ ನನಗೆ 'ಯಡಿಯೂರಪ್ಪ' ಎಂದು ಹೆಸರಿಟ್ಟಿದ್ದಾರೆ. ನೀವು ಯಾಕೆ ನನ್ನನ್ನು 'ಯಡ್ಡಿ' ಎಂದು ಕರೆಯುತ್ತೀರಾ? ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡಾಬೇಕಾ?' ಎಂದು ನಸುನಗುತ್ತಾ ಯಡಿಯೂರಪ್ಪ ಪ್ರಶ್ನಿಸಿದರು.
ನಿಮಗೆ ಯಡಿಯೂರಪ್ಪ ಎಂದು ಕರೆಯಲು ಇಷ್ಟವಿಲ್ಲದಿದ್ದರೆ ನನ್ನನ್ನು 'ದಾಸಯ್ಯ' ಎಂದು ಕರೆಯಿರಿ ಅಡ್ಡಿಯಿಲ್ಲ. ಆದರೆ, ಯಡ್ಡಿ ಎಂದು ಕರೀಬೇಡಿ, ಬರೆಯಬೇಡಿ ಎಲ್ಲೂ ಬಳಸಬೇಡಿ ಎಂದು ಆಗ್ರಹಪೂರ್ವಕ ಕೋರಿಕೆಯನ್ನು ಮಾಧ್ಯಮಗಳತ್ತ ಯಡಿಯೂರಪ್ಪ ತಳ್ಳಿದರು.
ಶಿಕಾರಿಪುರ ಕಣ್ಣೀರೊರೆಸಿ: ನಾನು ಅಧಿಕಾರದಲ್ಲಿದ್ದಾಗ ಶಿಕಾರಿಪುರ ತಾಲೂಕು, ಶಿವಮೊಗ್ಗ ಜಿಲ್ಲೆಗೆ ಸಾಕಷ್ಟು ಅನುದಾನ ನೀಡಿದ್ದೆ ನಿಜ. ಆದರೆ, ಅದು ಸ್ವಹಿತಕ್ಕಾಗಿ ಆಲ್ಲ. ಅದು ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯ ಮಾಡುವ ಕನಸಿನ ಮೊದಲ ಹಂತವಾಗಿತ್ತು. ಅಭಿವೃದ್ಧಿ ಎಂದರೆ, ಕಟ್ಟಡ ನಿರ್ಮಾಣವಲ್ಲ. ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು. ಜಿಲ್ಲೆಗೆ ಆಗಿರುವ ಅನ್ಯಾಯದ ಬಗ್ಗೆ ಸರ್ಕಾರಕ್ಕೆ ಹೇಳಿದ್ದೇನೆ ಆದರೆ, ಕಳೆದ 8 ತಿಂಗಳಿನಿಂದ ಏನು ಸಿಕ್ಕಿಲ್ಲ ಎಂದು ಯಡಿಯೂರಪ್ಪ ದುಃಖ ತೋಡಿಕೊಂಡರು.












Click it and Unblock the Notifications