ಹೆಣ್ಣು ಮಗುವನ್ನು ದೊಣ್ಣೆಯಿಂದ ಬಡಿದು ಕೊಂದ ತಂದೆ

ತೆಕ್ಕಲಕೋಟೆಯಲ್ಲಿ ಕುಡಕ ತಂದೆಯೊಬ್ಬ ತನ್ನ 5 ತಿಂಗಳ ಕೂಸನ್ನು ದೊಣ್ಣೆಯಿಂದ ಬಡಿದು ಕೊಂದಿದ್ದಾನೆ. ಮಗು ವಿಶಾಲಾಕ್ಷಿ ಸ್ಥಳದಲ್ಲೇ ಮೃತಪಟ್ಟಿದೆ. ಮಗುವನ್ನು ಉಳಿಸಲು ಬಂದ ತಾಯಿ ಹಾಗೂ ಇನ್ನೊಂದು ಮಗುವಿಗೂ ಸರಿಯಾದ ಪೆಟ್ಟು ಬಿದ್ದಿದೆ. ಗಂಡು ಮಗು ಹೆತ್ತುಕೊಡಲು ಯೋಗ್ಯತೆ ಇಲ್ಲ ನಿನಗೆ ಎಂದು ಹೆಂಡತಿಯನ್ನು ಜರಿದು ಸರಿಯಾಗಿ ಬಾರಿಸಿದ ಪತಿ ಯಲ್ಲಪ್ಪ ಪರಾರಿಯಾಗಿದ್ದಾರೆ.
ಮಗುವನ್ನು ಕಳೆದುಕೊಂಡ ತಾಯಿ ಒದೆ ತಿಂದು ಬಿದ್ದಿದ್ದನ್ನು ಕಂಡ ಸ್ಥಳೀಯರು ತಕ್ಷಣವೇ ಇನ್ನೊಂದು ಮಗು ಹಾಗೂ ತಾಯಿಯನ್ನು ವಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ವಿಮ್ಸ್ ಆಸ್ಪತ್ರೆಯಲ್ಲಿ ತಿಪ್ಪಮ್ಮ(30) ಸಾವನ್ನಪ್ಪಿದ್ದಾರೆ. ವೇದಮ್ಮ ಎಂಬ 7 ವರ್ಷದ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಯಲ್ಲಪ್ಪನಿಗೆ ಗಂಡು ಸಂತಾನ ಬೇಕಿತ್ತು. ಅದಕ್ಕಾಗಿ ತಿಪ್ಪಮ್ಮನನ್ನು ಪೀಡಿಸುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.












Click it and Unblock the Notifications