• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರಿನ ಉದ್ಯಮಿಯ ಕಂಪನಿಗೆ ಅಟ್ಲಾಂಟಾದ ಪ್ರತಿಷ್ಠಿತ ಪ್ರಶಸ್ತಿ

By Prasad
|
Mysore born entrepreneur Sid Mookerji
ಅಟ್ಲಾಂಟಾ, ಮೇ. 3 : ಮೈಸೂರಿನಲ್ಲಿ ಹುಟ್ಟಿ ಬೆಳೆದ ಉದ್ಯಮಿ ಸಿದ್ ಮೂಕರ್ಜಿ ಅವರು ಸ್ಥಾಪಿಸಿರುವ ಸಾಫ್ಟ್‌ವೇರ್ ಪ್ಯಾರಾಡೈಮ್ಸ್ ಇಂಟರ್ನ್ಯಾಷನಲ್ (SPI) ಕಂಪನಿ ಅಮೆರಿಕದ ಅಟ್ಲಾಂಟಾದ ಅತೀ ವೇಗವಾಗಿ ಬೆಳೆಯುತ್ತಿರುವ 20 ಕಂಪನಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಂಪನಿಯ ಶಾಖೆ 2006ರಲ್ಲಿ ಮೈಸೂರಿನಲ್ಲಿ ಪ್ರಾರಂಭವಾಗಿದೆ.

ಜಾಗತಿಕ ರಿಟೈಲರ್‌ಗಳ ವ್ಯಾಪಾರದಲ್ಲಿ ಉತ್ಪನ್ನ ಮತ್ತು ಉತ್ಪಾದನೆ ಹೆಚ್ಚಿಸಲು ಸಹಕಾರಿಯಾಗುವಂತಹ ತಂತ್ರಜ್ಞಾನ ಮತ್ತು ಹಣಕಾಸು ಸೇವೆಯನ್ನು ನೀಡುವ ಅಗ್ರಗಣ್ಯ ಕಂಪನಿಗಳಲ್ಲಿ ಒಂದಾಗಿರುವ ಎಸ್‌ಪಿಐ, ಅಟ್ಲಾಂಟಾ ಬಿಸಿನೆಸ್ ಕ್ರಾನಿಕಲ್‌ನ ಪೇಸ್‌ಸೆಟ್ಟರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅಟ್ಲಾಂಟಾದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ 50 ಕಂಪನಿಗಳನ್ನು ಗುರುತಿಸಿ ಪ್ರಶಸ್ತಿಯನ್ನು ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಈ ಪ್ರಶಸ್ತಿಗೆ ಪಾತ್ರರಾಗಿರಲು ಅನೇಕ ನಿಬಂಧನೆಗಳಿವೆ. ಕಂಪನಿ 2009ರ ಮೊದಲ ತ್ರೈಮಾಸಿಕಕ್ಕೆ ಮೊದಲು ಸ್ಥಾಪಿತವಾಗಿರಬೇಕು. 2009ರಿಂದ 2011ರ ನಡುವಿನಲ್ಲಿ ಶೇ.50ರಷ್ಟು ಆದಾಯ ಹೆಚ್ಚಾಗಿರಬೇಕು. ಮತ್ತು 2011ರಲ್ಲಿ 1-300 ಮಿಲಿಯನ್ ಡಾಲರ್ ಲಾಭ ಗಳಿಸಿರಬೇಕು. ಈ ಎಲ್ಲ ಮಾನದಂಡಗಳನ್ನು ಪೂರೈಸಿದ ಕಂಪನಿ ಮಾತ್ರ ಈ ಪ್ರತಿಷ್ಠಿತ ಪ್ರಶಸ್ತಿಗೆ ಅರ್ಹತೆ ಪಡೆಯುತ್ತದೆ.

"ರಿಟೈಲ್ ಕ್ಷೇತ್ರದಲ್ಲಿ ಕಾಲಿಡುವ ಅನೇಕ ಕಂಪನಿಗಳಿಗೆ ನಿಯಮಿತ ಸಂಪನ್ಮೂಲ ಮತ್ತು ಸೂಕ್ತವಾದ ಪಾಲುದಾರ ದೊರೆಯುವುದು ಬಲು ಕಷ್ಟಕರವಾಗುತ್ತಿದೆ. ಉದ್ಯಮದ ಅಗತ್ಯಗಳನ್ನು ಮೀರಿ ಲಾಭದಾಯಕವಾಗುವುದು ನಿಜಕ್ಕೂ ಸವಾಲಿನ ಕೆಲಸ. ಇಂಥ ಸೇವೆಗಳನ್ನು ನೀಡುತ್ತಿರುವ ಎಸ್‌ಪಿಐ ಈ ಪೇಸ್‌ಸೆಟ್ಟರ್ ಪ್ರಶಸ್ತಿಗೆ ಭಾಜನವಾಗಿರುವುದು ನಿಜಕ್ಕೂ ಸಂತಸದ ಸಂಗತಿ. ಮುಂದೆ ಇನ್ನೂ ಅತ್ಯುತ್ತಮವಾದ ಸಲ್ಯೂಷನ್ ನೀಡಲು ಇದು ಪ್ರೇರಣೆಯಾಗಿದೆ" ಎಂದು ಎಸ್‌ಪಿಐ ಸಿಇಓ ಸಿದ್ ಮೂಕರ್ಜಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಬಗ್ಗೆ ಅಪಾರ ಪ್ರೀತಿ ಹೊಂದಿರು ಸಿದ್ ಅವರು ತಮ್ಮ ಕುಟುಂಬದೊಡನೆ ಆಗಾಗ ಸಾಂಸ್ಕೃತಿಕ ನಗರಿಗೆ ಭೇಟಿ ನೀಡುತ್ತಿರುತ್ತಾರೆ. ಅವರ ಮಕ್ಕಳಾದ ಶೀನಾ ಮೂಕರ್ಜಿ ಮತ್ತು ಶೌನಿಶ್ ಮೂಕರ್ಜಿ ಬದ್ಧಿಮಾಂದ್ಯ ಮಕ್ಕಳಿಗಾಗಿ ನಿಧಿಯನ್ನು ಸಂಗ್ರಹಿಸಿ ಮೈಸೂರಿನ ಸ್ನೇಹ ಕಿರಣ್ ಸಂಸ್ಥೆಗೆ ಗಾಲಿಕುರ್ಚಿಗಳ ರೂಪದಲ್ಲಿ ದಾನ ಮಾಡಿದ್ದರು. ಕಾಮತ್.ಕಾಂನ ವಿಕಾಸ್ ಕಾಮತ್ ಅವರು ಹಿಂದೆ ನಡೆಸಿದ ಸಂದರ್ಶನದಲ್ಲಿ, ಮೈಸೂರಿನ ಹವಾಮಾನ, ವಿದ್ಯಾಭ್ಯಾಸ ಮತ್ತು ಜೀವನಮಟ್ಟ ಅತ್ಯುತ್ತಮವಾಗಿದ್ದರಿಂದ ಎಸ್‌ಸಿಐ ಕಂಪನಿಯ ಶಾಖೆ ಸ್ಥಾಪಿಸಲು ಮೈಸೂರನ್ನೇ ಆಯ್ಕೆ ಮಾಡಿದ್ದಾಗಿ ಹೇಳಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysore born entrepreneur Sid Mookerji made the Indians proud as his company - Software Paradigms International (SPI) has been honored in the US. The company has been named in the list holding names of 50 fastest growing companies in Atlanta, US.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more