• search

ಸಿಟಿ ರವಿ ಸಹಿ ಸಂಗ್ರಹ ಜಾರಿ, 49 ಶಾಸಕರ ಬೆಂಬಲ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  CT Ravi
  ಬೆಂಗಳೂರು, ಮೇ.2: ಸದಾನಂದ ಗೌಡ ಸಚಿವ ಸಂಪುಟ ವಿಸ್ತರಣೆ ಇನ್ನೂ 15 ದಿನಗಳಲ್ಲಿ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಬುಧವಾರ(ಮೇ.2) ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಈ ನಡುವೆ ಶಾಸಕ ಸಿಟಿ ರವಿ ಅವರ ಸಹಿ ಸಂಗ್ರಹ ಕಾರ್ಯ ಭರದಿಂದ ಸಾಗಿದ್ದು ಸುಮಾರು 49 ಜನ ಶಾಸಕರು ಸಹಿ ಮಾಡಿದ್ದಾರೆ.

  ಎರಡು ಅವಧಿಗೆ ಸಚಿವರಾಗಿರುವವರನ್ನು ಪಕ್ಷದ ಸಂಘಟನೆಗೆ ಬಳಕಿಕೊಂಡು ಹೊಸ ಮುಖಗಳಿಗೆ ಆದ್ಯತೆ ನೀಡಿ ಎಂದು ಬಿಜೆಪಿ ನಿಷ್ಠ ಶಾಸಕರು ಆಗ್ರಹಿಸಿದ್ದಾರೆ.
  ಶಾಸಕರ ಸಹಿ ಇರುವ ಮನವಿ ಪತ್ರಗಳನ್ನು ಪಕ್ಷದ ಎಲ್ಲಾ ಮುಖಂಡರಿಗೂ ನೀಡಲು ಈ ಶಾಸಕರುಗಳು ನಿರ್ಧರಿಸಿದ್ದಾರೆ.

  ಈ ವಾರದೊಳಗೆ ಸಹಿ ಸಂಗ್ರಹ ಕಾರ್ಯ ಮುಗಿಸಲಾಗುವುದು. ಮುಖ್ಯಮಂತ್ರಿ ಸದಾನಂದ ಗೌಡ, ಕೆಎಸ್ ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಆರೆಸ್ಸೆಸ್ ಮುಖಂಡರಿಗೆ ಸಹಿ ಸಂಗ್ರಹ ಪತ್ರವನ್ನು ನೀಡಿ ಪರಿಸ್ಥಿತಿಯ ಬಗ್ಗೆ ಚರ್ಚಿಸಲಾಗುವುದು ಎಂದು ಸಿಟಿ ರವಿ ಹೇಳಿದ್ದಾರೆ.

  ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟಕ್ಕೆ ಯಾರನ್ನು ಆಯ್ಕೆ ಮಾಡಬೇಕು, ಯಾರನ್ನು ಕೈಬಿಡಬೇಕು ಎಂಬುದನ್ನು ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಿ. ಸಮಾಜಿಕ ನ್ಯಾಯ, ಪ್ರಾದೇಶಿಕ ಅಸಮತೋಲನ ಎಲ್ಲವನ್ನು ಗಮನಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿ. ಇಲ್ಲದಿದ್ದರೆ ಪಕ್ಷ ಮೇಲೇಳಲು ಕಷ್ಟವಾಗುತ್ತದೆ ಎಂದು ಸಿಟಿ ರವಿ ನೇತೃತ್ವ ಸಭೆಯಲ್ಲಿ ತೀರ್ಮಾನಿಸಲಾಗಿದೆ.

  ಬಿಜೆಪಿ ನಿಷ್ಠ ಶಾಸಕರು ಎಂದು ಗುರುತಿಸಿಕೊಂಡಿರುವ ಸಿಟಿ ರವಿ, ಜೀವರಾಜ್, ಅಪ್ಪಚ್ಚು ರಂಜನ್, ಸೊಗಡು ಶಿವಣ್ಣ, ಎಂಕೆ ಪಟ್ಟಣಶೆಟ್ಟಿ, ಚಂದ್ರಕಾಂತ್ ಬೆಲ್ಲದ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಚಿವ ಸಂಪುಟ ವಿಸ್ತರಣೆ ಜೊತೆಗೆ ನಿಗಮ ಮಂಡಳಿ ಸ್ಥಾನ, ಸಮಿತಿ ರಚನೆ ತಾರತಮ್ಯವನ್ನು ಸರಿಪಡಿಸಿ ಸುಮಾರು 20 ಸಾವಿರ ಕಾರ್ಯಕರ್ತರಿಗೆ ಸ್ಥಾನಮಾನ ದೊರಕಿಸಿಕೊಡುವಂತೆ ವರಿಷ್ಠರನ್ನು ಆಗ್ರಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The Karnataka BJP Loyalist like CT Ravi are busy in sign campaign to get cabinet berth in DV Sadananda Gowda. More than 49 MLAs signed and supported demands of loyalists. KS Eshwarappa said today(May.2) only cabinet re shuffle is possible in next 15 days

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more