ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರದ ನಡುವೆ ಬದುಕುತ್ತಿರುವ ಆಸ್ಟ್ರೇಲಿಯಾದ ಹಕ್ಕಿಗಳು

By * ಸಾಗರ ದೇಸಾಯಿ, ಯಾದಗಿರಿ
|
Google Oneindia Kannada News

Emu farming in Yadgir
ಯಾದಗಿರಿ, ಮೇ 2 : ಸುಡು ಬಿಸಿಲು, ಬತ್ತಿಹೋಗಿರುವ ನದಿಗಳು, ಕುಡಿಯೋಕೆ ಜನ ಜನವಾರುಗಳಿಗೂ ನೀರಿಲ್ಲ. ಭೀಕರ ಬರಗಾಲ ಜನರನ್ನು ತಲ್ಲಣಿಸುವಂತೆ ಮಾಡಿದೆ. ಜೀವನ ಸಾಗಿಸುವುದೇ ದುಸ್ತರವಾಗಿದೆ. ಹೀಗೆ ಹತ್ತು ಹಲವಾರು ಸಮಸ್ಯೆಗಳ ಮಧ್ಯೆ ಯಾದಗಿರಿಯಲ್ಲಿ ಆಸ್ಟ್ರೇಲಿಯಾ ಮೂಲದ ಪಕ್ಷಿಗಳು ಬದುಕು ಕಟ್ಟಿಕೊಡಲಾಗುತ್ತಿದೆ. ಆ ಪಕ್ಷಿಗಳು ಯಾವವು ಅಂತಿರಾ? ಹಾಗಾದ್ರೆ ಈ ಸ್ಟೋರಿ ಓದಿ.

ಕಟ್ಟಿಗೆಯಂತಹ ಕಾಲೂಗಳು, ದೈತ್ಯಾಕಾರದ ದೇಹ, ಒಂಟೆಯಂತಹ ಕುತ್ತಿಗೆ, ಚೂರಿಯಂತಹ ಬಾಯಿ. ಆಸ್ಟ್ರೇಲಿಯಾದ ರಾಷ್ಟ್ರೀಯ ಪಕ್ಷಿ ಉಷ್ಟ್ರಪಕ್ಷಿ (ಆಸ್ಟ್ರೀಚ್) ನಂತರದ ಎರಡನೇ ಅತಿ ದೊಡ್ಡ ಹಾರಲಾಗದ ಪಕ್ಷಿ. ಆದರೆ ಬಿಸಿಲ ನಾಡು ಯಾದಗಿರಿ ಜಿಲ್ಲೆ ಶಹಾಪುರ ಪಟ್ಟಣದಲ್ಲಿ ಡಾ.ಚಂದ್ರಶೇಖರ್ ಸುಬೇದಾರ್ ಎನ್ನುವರು ತಮಿಳುನಾಡಿನ ಬಿಂಡಕಲ್‌ನಿಂದ ಕಳೆದ ವರ್ಷ 100 ಏಮು ಪಕ್ಷಿ ಮರಿಗಳನ್ನು ತಂದು ಸಾಕ್ತಾಯಿದ್ದಾರೆ. ಐವತ್ತು ಗಂಡು ಹಾಗೂ ಐವತ್ತು ಹೆಣ್ಣೂ ಮರಿಗಳಿವೆ. ಅವುಗಳಿಗೆ ಈಗ ಒಂದು ವರ್ಷ. ಆದರಿಂದಲೇ ಕುರಿ ಸಾಕಾಣಿಕೆ ಬಿಟ್ಟು ಇವುಗಳನ್ನ ಸಾಕಾಣಿಕೆಯಲ್ಲಿ ತೊಡಗಿದ್ದಾರೆ ತೋಟದ ಮಾಲೀಕರಾದ ಕರಣ್ ಸುಬೇದಾರ್.

ಕೃಷಿಕರ ಕಲ್ಪತರು : ಸರಿ ಸುಮಾರು ಐವತ್ತು ಕೆಜಿ ಭಾರವಿರುವ, ಈ ಪಕ್ಷಿಗಳಿಗೆ ಬಹು ಬೇಡಿಕೆ. ಪ್ರತಿಯಂದು ಪಕ್ಷಿಗಳು ಸರಿಸುಮಾರು 20ರಿಂದ 25 ಸಾವಿರ ರೂಪಾಯಿವರೆಗೆ ಮಾರಲ್ಪಡುತ್ತವೆ. ಅದಲ್ಲದೇ ಇದರ ಮಾಂಸಕ್ಕೂ ಹೊರ ರಾಜ್ಯವಲ್ಲದೇ ವಿದೇಶದಲ್ಲೂ ಬಹು ಬೇಡಿಕೆ. ಕೆಜಿ ಮಾಂಸಕ್ಕೆ 700ರಿಂದ 800 ರೂಪಾಯಿ. ಇವುಗಳ ಮೊಟ್ಟೆಗಳು ಬಂಗಾರದ ಮೊಟ್ಟೆಗಳಿದ್ದಂತೆ, ಒಂದಕ್ಕೆ 800ರಿಂದ 1,000 ರೂಪಾಯಿ.

ಹಾಗೇ ಇದರ ಕೊಬ್ಬಿನ ಅಂಶದಿಂದ ಎಣ್ಣೆ ತಯಾರಿಸುತ್ತಾರೆ. ಪ್ರತಿ ಲೀಟರ್‌ಗೆ 4,000ರಿಂದ 5,000 ರೂಪಾಯಿ ಬೆಲೆ. ಇದರಿಂದ ಮಸಾಜ್ ಎಣ್ಣೆ, ಮೂಳೆ ನೋವು ನಿವಾರಕ ಔಷಧಿ, ಫೇಸ್ ಕ್ರೀಮ್ ಹೀಗೆ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಾರೆ. ಇದರ ಕೂದಲಿನಿಂದ ವಿವಿಧ ಆಟಿಕೆ ಹಾಗೂ ಕಲಾ ವಸ್ತುಗಳನ್ನು ತಯಾರಿಸುತ್ತಾರೆ. ಗರಿಷ್ಠ 50 ಡಿಗ್ರಿ ಸೆಲ್ಶಿಯಸ್ ಬಿಸಿಲಿನ ತಾಪಮಾನದಲ್ಲೂ ನಿರುಮ್ಮಳವಾಗಿ ಇರುತ್ತವೆ. ಕೊಲೆಸ್ಟ್ರಾಲ್ ರಹಿತವಾಗಿರುವುದರಿಂದ ಇವುಗಳ ಮಾಂಸಕ್ಕೆ ಸಖತ್ ಡಿಮ್ಯಾಂಡ್. ಜೋಡಿ ಜೋಡಿಯಾಗಿ ವಿಹರಿಸುವ ಏಮು ಪಕ್ಷಿಗಳು ಒಂಥರಾ ಲವ್ ಬರ್ಡ್ಸ್.

ಸರಳ ನಿರ್ವಹಣೆ, ವೆಚ್ಚ ಕಡಿಮೆ : ಸುಮಾರು ನೂರು ಏಮು ಪಕ್ಷಿಗಳನ್ನು ನೋಡಿಕೊಳ್ಳಲು ಕೇವಲ ಒಬ್ಬ ಆಳನ್ನು ನೇಮಿಸಲಾಗಿದೆ. ಹಾಗೂ ಇವುಗಳ ನಿರ್ವಹಣೆ ವೆಚ್ಚ ತೀರಾ ಕಡಿಮೆ. ರೋಗರುಜಿನಗಳಿಂದಲೂ ಇವು ಬಲು ದೂರ. ಮುಸುಕಿನ ಜೋಳ, ನುಚ್ಚು ಎರೆಹುಳ, ಕೀಟ, ಇರುವೆ ಇವುಗಳ ಆಹಾರ. ಕೆಲವೊಮ್ಮೆ ಚಿಕ್ಕ ಕಲ್ಲುಗಳನ್ನು ಸಹ ತಿನ್ನುತ್ತವೆ ಅಂತಾರೆ ಏಮು ಪಕ್ಷಿಗಳನ್ನು ಪಾಲನೆ ಮಾಡುತ್ತಿರುವ ಸಿದ್ದಪ್ಪ.

ಕರಣ್ ಸುಬೇದಾರ್ ವೃತ್ತಿಯಲ್ಲಿ ಇಂಜಿನಿಯರ್ ಆದರು ಸಹ, ಕೃಷಿಯಲ್ಲಿ ವೈಜ್ಞಾನಿಕ ವಿಧಾನವನ್ನು ಆಳವಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಹೊಸ ಹೊಸ ಲಾಭದಾಯಕ ಯೋಜನೆಗಳನ್ನು ಮಾಡುತ್ತಾ ತಾವು ಇಂಜಿನಿಯರ್ ಅನ್ನೋ ಗರ್ವ ಬಿಟ್ಟು ಈ ಒಂದು ಲಾಭದಾಯಕ ಕೃಷಿಯಲ್ಲಿ ತೊಡಗಿದ್ದಾರೆ. ನಮ್ಮ ದೇಶದ ಪಕ್ಷಿಗಳನ್ನು ಸಾಕೋಕೆ ಹಿಂದೆ ಮುಂದೆ ನೋಡೋ ಈಗಿನ ಕಾಲದಲ್ಲಿ, ಇವ್ರು ಆಸ್ಟ್ರೇಲಿಯಾದ ಪಕ್ಷಿಗಳ ಸಾಕಾಣಿಕೆ ಮಾಡುತ್ತಿರುವುದಕ್ಕೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.

English summary
Karan Subedar, an engineer in Shahapur in Yadgir, has been breeding 100 Emu birds, the second largest birds after Ostrich, the national bird of Australia. Though it is very lucrative job, there are very few takers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X