ಯಡಿಯೂರಪ್ಪಗೆ ಮಾತಿನ ಪೆಟ್ಟು ಕೊಟ್ಟ ಸದಾ

CM DV Sadananda Gowda
ಬೆಂಗಳೂರು, ಮೇ.1: ಒಂದೇ ವೇದಿಕೆಯಲ್ಲಿ ಅತ್ತ ಕಡೆ ಸೋಮಣ್ಣ ಜೊತೆ ಸದಾನಂದ ಗೌಡರು ಇತ್ತ ಕಡೆ ಗೋವಿಂದ ಕಾರಜೋಳ ಜೊತೆ ಬಿಎಸ್ ಯಡಿಯೂರಪ್ಪ ಅವರು ಕಂಡ ಜನ ಸಾಮಾನ್ಯರು ಸಂತಸ ಪಟ್ಟರು. ಆದರೆ, ಸಂತಸ ಕೆಲ ಕ್ಷಣದಲ್ಲೇ ಮಾಯವಾಯಿತು. ಮಾಜಿ ಹಾಗೂ ಹಾಲಿ ಸಿಎಂಗಳು ಮಾತಿನ ದಾಳಿ ನಡೆಸುತ್ತಾ ಬಸವ ಶ್ರೀ ಪ್ರಶಸ್ತಿ ಸಮಾರಂಭದ ಆಶಯವನ್ನೇ ಮರೆಯುವಂತೆ ಮಾಡಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ(ಮೇ.1) ನಡೆದ ಸಮಾರಂಭದಲ್ಲಿ ಚನ್ನವೀರ ಕಣವಿ ಅವರಿಗೆ ಬಸವಶ್ರೀ ಪ್ರಶಸ್ತಿ ಹಾಗೂ ಕಸ್ತೂರಿ ಶಂಕರ್ ಅವರಿಗೆ ವಚನ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

'ಹಣತೆ ಬೆಳಕಿನಲ್ಲಿ ನಿನ್ನ ಮುಖ ನಾ ಕಂಡು ನನ್ನ ಮುಖ ನೀ ಕಂಡು ಸಂತಸ ಪಡಬೇಕು. ಅವರವರ ಕೆಲಸ ಸರಿಯಗಿ ಮಾಡಿದರೆ ಸಾಕು. ಬೇರೆಯವರ ಮೇಲೆ ವೃಥಾ ಅರೋಪಿಸುವುದು ಸರಿಯಲ್ಲ. ಬೇರೆಯವರ ಬಗ್ಗೆ ಮಾತನಾಡುವ ಮೊದಲು ನಿಮ್ಮನ್ನು ನೀವು ಅರಿಯುವುದು ಮುಖ್ಯ' ಎಂದು ಯಡಿಯೂರಪ್ಪ ಅವರ ವಿರುದ್ಧ ಡಿವಿ ಸದಾನಂದ ಗೌಡರು ಪರೋಕ್ಷವಾಗಿ ವಾಗ್ದಾಳಿ ಮಾಡಿದರು.

ಇದಕ್ಕೂ ಮುನ್ನ ತಮ್ಮ ಗೋಳು ತೋಡಿಕೊಂಡಿದ್ದ ಬಿಎಸ್ ಯಡಿಯೂರಪ್ಪ ಅವರು ಕಾರ್ಯಕ್ರಮದ ನಂತರ ಮಾತನಾಡಿ ನಾನೇನು ಭಾವುಕನಾಗಿ ಮಾತನಾಡಿಲ್ಲ. ಇರುವ ವಿಷ್ಯ ಹೇಳಿದೆ. ಎಲ್ಲಾ ಆರೋಪಗಳಿಂದ ಮುಕ್ತನಾಗುವುದು ನನಗೆ ಮುಖ್ಯ. ಅಧಿಕಾರದ ಆಸೆಯಿಲ್ಲ ಎಂದು ಪುನರುಚ್ಚರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+