ಅಬ್ದುಲ್ ಕಲಾಂ ಅವರಿಗೆ ಸಿಕ್ಕಿದೆ ಬಿಜೆಪಿ ಬೆಂಬಲ
ನವದೆಹಲಿ,
ಮೇ.1: ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ವಿತ್ತ ಸಚಿವ ಪ್ರಣಬ್ ಮುಖರ್ಜಿ ಹಾಗೂ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರನ್ನು ಬೆಂಬಲಿಸಪಿರಲು ಬಿಜೆಪಿ ನಿರ್ಧರಿಸಿದೆ. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ಇಲ್ಲ. ರಾಜಕೀಯೇತರ ವ್ಯಕ್ತಿಗಳನ್ನು ರಾಷ್ಟ್ರಪತಿ ಸ್ಥಾನದಲ್ಲಿ ಕಾಣಬಯಸುವುದಾಗಿ ಬಿಜೆಪಿ ಹೇಳಿದೆ. id="toptextpromo">ಆದರೆ,
ಬಿಜೆಪಿ ಇನ್ನೂ ಕಲಾಂ ಅವರ ಪರ ಪ್ರಚಾರ ಆರಂಭಿಸಿಲ್ಲ. ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಎಐಎಡಿಎಂಕೆ ಹಾಗೂ ನ್ಯಾಷಲಿಸ್ಟ್ ಕಾಂಗ್ರೆಸ್ ಪಾರ್ಟಿ ಕಲಾಂ ಅವರ ಹೆಸರನ್ನು ಸೂಚಿಸಿ, ಬೆಂಬಲಿಸಿದ ಮೇಲೆ ಅಖಾಡಕ್ಕೆ ಇಳಿಯಲು ಬಿಜೆಪಿ ಯೋಜಿಸಿದೆ. id='are-slot-1' class='oiad oi-axt oiadv'> id='top-searched-articles'>ಮುಖ್ಯವಾಗಿ
ಮಮತಾ ಬ್ಯಾನರ್ಜಿ ಹಾಗೂ ಶರದ್ ಪವಾರ್ ಅವರು ಕಲಾಂ ಅವರಿಗೆ ಬೆಂಬಲ ವ್ಯಕ್ತಪಡಿಸಿದರೆ ನಾವು ಬೆಂಬಲ ವ್ಯಕ್ತಪಡಿಸುತ್ತೇವೆ. ಜೊತೆಗೆ ಮುಲಾಯಂ ಸಿಂಗ್ ಯಾದವ್ ಅವರು ಬೆಂಬಲ ನೀಡಿದರೆ ನಾವು ಸೂಕ್ತವಾಗಿ ಸ್ಪಂದಿಸುತ್ತೇವೆ ಎಂದು ಬಿಜೆಪಿ ಹಿರಿಯ ನಾಯಕಿ ಸುಷ್ಮ ಸ್ವರಾಜ್ ಹೇಳಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಕೂಡಾ ತನ್ನ ಅಭ್ಯರ್ಥಿಗಳಿಗೆ ಬೇಕಾದ ಅಗತ್ಯ ಬೆಂಬಲಕ್ಕಾಗಿ ಕಸರತ್ತು ನಡೆಸಿದೆ. ಕಲಾಂ ಅವರು ಮಾತ್ರ ಚುನಾವಣೆ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡದೆ ಕಾದು ನೋಡಿ ಎಂದಷ್ಟೇ ಹೇಳಿದ್ದಾರೆ.











Click it and Unblock the Notifications