ಮೇಕೆದಾಟು: ಜೈನ್ ಕಾಲೇಜು ವಿದ್ಯಾರ್ಥಿಗಳ ಶವ ಪತ್ತೆ

ಬೆಂಗಳೂರಿನಿಂದ ಸುಮಾರು 95 ಕಿ.ಮೀ ದೂರದಲ್ಲಿರುವ ಮೇಕೆದಾಟು ತಾಣಕ್ಕೆ ತೆರಳಿದ್ದ ಶ್ರೀಭಗವಾನ್ ಮಹಾವೀರ್ ಜೈನ್ ಕಾಲೇಜಿನ ವಿದ್ಯಾರ್ಥಿಗಳಾದ ವಿವೇಕಾನಂದ(18), ಅಖಿಲ್ ಕುಮಾರ್ (18) ಹಾಗೂ ವೇಣು ಗೋಪಾಲ್ (19) ದುರಂತ ಸಾವನ್ನಪ್ಪಿರುವ ವಿದ್ಯಾರ್ಥಿಗಳಾಗಿದ್ದಾರೆ. ಮೂವರ ಪೈಕಿ ಅಖಿಲ್, ವೇಣು ಶವ ಪತ್ತೆಯಾಗಿದ್ದು, ವಿವೇಕಾನಂದ ಶವ ಇನ್ನೂ ಪತ್ತೆಯಾಗಿಲ್ಲ ಎಂದು ಕನಕಪುರ ಪೊಲೀಸರು ಹೇಳಿದ್ದಾರೆ.
ನುರಿತ ಈಜುಪಟುಗಳು, ಪೊಲೀಸರು ಶವಕ್ಕಾಗಿ ಎರಡು ದಿನದಿಂದ ಶೋಧ ನಡೆಸುತ್ತಿದ್ದಾರೆ.ಒಟ್ಟು 7 ಮಂದಿ ವಿದ್ಯಾರ್ಥಿಗಳ ಗುಂಪು ಮೇಕೆದಾಟುವಿಗೆ ಹೋಗಿದ್ದಾರೆ.
ಕನಕಪುರದಲ್ಲಿ ಸ್ವಲ್ಪ ಕೆಲಸ ಇದೇ ಹೋಗಿ ಬರುತ್ತೇವೆ ಎಂದು ಸುಳ್ಳು ಹೇಳಿ ವಿದ್ಯಾರ್ಥಿಗಳು ಮೇಕೆದಾಟಿಗೆ ಹೋಗಿದ್ದಾರೆ ಎಂದು ವಾರ್ಡನ್ ಗಿರೀಶ್ ಆರೋಪಿಸಿದ್ದಾರೆ.
ಮೂವರಿಗೂ ಈಜಲು ಬರುತ್ತಿರಲಿಲ್ಲ. ಹಾಗಾಗಿ ಯಾರೂ ನೀರಿಗೆ ಇಳಿದಿರಲಿಲ್ಲ. ಆದರೆ, ಅಕಸ್ಮಾತ್ ಆಗಿ ವಿವೇಕಾನಂದ ಕಾವೇರಿ ನದಿಗೆ ಜಾರಿ ಬಿದ್ದಿದ್ದಾನೆ. ರಭಸವಾಗಿ ಹರಿಯುತ್ತಿರುವ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಗೆಳೆಯನನ್ನು ಉಳಿಸಲು ವೇಣು, ಅಖಿಲ್ ಧಾವಿಸಿದ್ದಾರೆ. ಆದರೆ, ಮೂವರು ಜಲಸಮಾಧಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರವಾಸಕ್ಕೆ ಬಂದಿದ್ದ ಉಳಿದ ವಿದ್ಯಾರ್ಥಿಗಳನ್ನು ಟಿ ಅಭಿನವ್, ಸುರೇಶ್ ಕುಮಾರ್, ಆರ್ ಅಭಿನವ್ ಹಾಗೂ ರವಿತೇಜ ಎಂದು ಗುರುತಿಸಲಾಗಿದೆ. ಸಾತನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.












Click it and Unblock the Notifications