ವಿದ್ಯುತ್ ಶಾಕ್ : ಯೂನಿಟ್ ಗೆ 32 ಪೈಸೆ ಹೆಚ್ಚಳ

ಐದು ವಿದ್ಯುತ್ ಪ್ರಸರಣಾ ಕಂಪನಿಗಳು (ಬೆಸ್ಕಾಂ..ಇತ್ಯಾದಿ) ಯೂನಿಟ್ ಗೆ 73 ಪೈಸೆಯಷ್ಟು ಏರಿಸಬೇಕು ಎಂದು ಜನವರಿಯಲ್ಲಿ ಕೆಇಆರ್ ಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನೆಯಲ್ಲಿ ವಿದ್ಯುತ್ ದರ ಪ್ರತಿ ಯೂನಿಟ್ ಗೆ 32 ಪೈಸೆ ಯಷ್ಟು ಏರಿಕೆ ಮಾಡಲಾಗಿದೆ. ಮೇ1 ರಿಂದ ನೂತನ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.
ಕೈಗಾರಿಕೆ, ವಾಣಿಜ್ಯ ಬಳಕೆ ಗ್ರಾಹಕರಿಗೆ ಹೆಚ್ಚಿನ ಪ್ರಮಾಣದ ಹೊರೆ ಬಿದ್ದಿದೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಹತ್ತು ಅಶ್ವಶಕ್ತಿ(10 HP) ಒಳಗಿನ ರೈತರ ನೀರಾವರಿ ಪಂಪ್ ಸೆಟ್ ಬಳಕೆದಾರರಿಗೆ ಉಚಿತ ವಿದ್ಯುತ್ ನೀಡುತ್ತಿರುವುದರಿಂಡ ಅವರಿಗೆ ಪರಿಷ್ಕೃತ ದರ ಏರಿಕೆ ಅನ್ವಯವಾಗುವುದಿಲ್ಲ.
* ಬೆಸ್ಕಾಂ-ಜೆಸ್ಕಾಂ-ಹೆಸ್ಕಾಂ-ಮೆಸ್ಕಾಂ ಬೆಲೆ 10 ಪೈಸೆ/ಯೂನಿಟ್
* ಗ್ರಾಹಕ ಬಳಕೆ ವಿದ್ಯುತ್ ದರ ಪ್ರತಿ ಯೂನಿಟ್ ಗೆ 10 ಪೈಸೆ ಹೆಚ್ಚಳ
* ನೀರು ಸರಬರಾಜು ವಿಭಾಗ- 50 ಪೈಸೆ/ಯೂನಿಟ್
* 10 HP ಮೋಟರ್ ಗೆ ವಿದ್ಯುತ್ - 10 ಪೈಸೆ/ಯೂನಿಟ್
* ಇತರೆ ಬಳಕೆ ದರ 20 ಪೈಸೆ/ಯೂನಿಟ್











Click it and Unblock the Notifications